More

    ಪವಿತ್ರಾ ಲೋಕೇಶ್ ಬಳಿಕ ಕೆಲ ಯೂಟ್ಯೂಬರ್ಸ್​ಗೆ ಶಾಕ್​ ಕೊಟ್ಟ ನಟ ನರೇಶ್! ಕೋರ್ಟ್​ನಿಂದ ಹೊರಬಿತ್ತು ಆದೇಶ​

    ಹೈದರಾಬಾದ್​: ಪೋಷಕ ಪಾತ್ರಗಳಿಂದ ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ ನಟಿ ಪವಿತ್ರಾ ಲೋಕೇಶ್ ಅವರು ಕೆಲವು ತಿಂಗಳುಗಳ ಹಿಂದೆ ನಟ ನರೇಶ್​ ಜತೆಗಿನ ಸಂಬಂಧದ ವಿಚಾರದಲ್ಲಿ ಭಾರಿ ವಿವಾದವನ್ನು ಸೃಷ್ಟಿ ಮಾಡಿಕೊಂಡಿದ್ದರು.

    ವಿವಾದದ ಸಂಬಂಧ ಪವಿತ್ರಾ ಲೋಕೇಶ್​ ಅವರು ಕೆಲ ಯೂಟ್ಯೂಬ್​ ಚಾನೆಲ್​ಗಳು ವಿರುದ್ಧ ಸೈಬರ್​ ಠಾಣೆಗೆ ದೂರು ದಾಖಲಿಸಿದ್ದು, ತಮ್ಮ ವಿರುದ್ಧ ಸುಳ್ಳು ಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಪವಿತ್ರಾ ಲೋಕೇಶ್​ ಅವರು ನೀಡಿರುವ ದೂರಿನ ಆಧಾರದ ಮೇಲೆ ಎಫ್​ಐಆರ್​ ದಾಖಲಿಸಿರುವ ಪೊಲೀಸರು ಈಗಾಗಲೇ ಅನೇಕ ಯೂಟ್ಯೂಬ್​ ಚಾನೆಲ್​ ಹಾಗೂ ವೆಬ್​ಸೈಟ್​ಗಳಿಗೆ ನೋಟಿಸ್​ ಕಳುಹಿಸಿದ್ದಾರೆ.

    ಇದೀಗ ನಟ ನರೇಶ್​ ಕೂಡ ನಾಮಪಲ್ಲಿ ಕೋರ್ಟ್​ ಮೆಟ್ಟಿಲೇರಿದ್ದು, ಕೆಲ ಯೂಟ್ಯೂಬ್​ ಹಾಗೂ ಕೆಲ ಜನರ ವಿರುದ್ಧ ಮಾನಹಾನಿ ಮೊಕದ್ದಮೆ ಹೂಡಿದ್ದಾರೆ. ವಿಚಾರಣೆ ನಡೆಸಿದ ನ್ಯಾಯಾಲಯ ಸೈಬರ್​ ಕ್ರೈಂ ಪೊಲೀಸರಿಗೆ ನೋಟಿಸ್​ ಹೊರಡಿಸಿದ್ದು, ನರೇಶ್​ ಅವರು ಅರ್ಜಿಯಲ್ಲಿ ಉಲ್ಲೇಖಿಸಿರುವ 12 ಮಂದಿಯ ವಿರುದ್ಧ ತನಿಖೆ ನಡೆಸುವಂತೆ ಆದೇಶಿಸಿದೆ.

    ಕೋರ್ಟ್​ ಆದೇಶಿಸಿರುವ ಬೆನ್ನಲ್ಲೇ ಸೈಬರ್​ ಕ್ರೈಂ ಪೊಲೀಸರು ನರೇಶ್​ ಉಲ್ಲೇಖಿಸಿರುವ 12 ಮಂದಿ ಸೇರಿದಂತೆ, ಕೆಲ ವೆಬ್​ಸೈಟ್​ಗಳಿಗೆ ನೋಟಿಸ್​ ಹೊರಡಿಸಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ.

    ಏನಿದು ವಿವಾದ?
    ಪವಿತ್ರಾ ಲೋಕೇಶ್​ ಮತ್ತು ನಟ ನರೇಶ್​ ನಡುವೆ ಅಕ್ರಮ ಸಂಬಂಧ ಇದೆ ಎಂದು ನರೇಶ್​ ಅವರ ಮೂರನೇ ಪತ್ನಿ ರಮ್ಯಾ ಆರೋಪ ಮಾಡಿದ್ದಾರೆ. ನರೇಶ್​ ತೆಲುಗು ಸೂಪರ್​ ಸ್ಟಾರ್​ ಕೃಷ್ಣ ಅವರ ಮಲ ಮಗ. ಕೃಷ್ಣ ಅವರು ಸೂಪರ್​ ಸ್ಟಾರ್​ ಮಹೇಶ್​ ಬಾಬು ಅವರ ತಂದೆ. ನರೇಶ್​ ಮತ್ತು ಪವಿತ್ರಾ ಇಬ್ಬರು ಮದುವೆ ಆಗುತ್ತಾರೆ ಎಂಬ ಮಾತುಗಳು ಕೇಳಿಬಂದಿತ್ತು. ಇದರ ನಡುವೆ ನನಗೆ ವಂಚಿಸಿದ್ದಾರೆ ಮತ್ತು ಸಾಕಷ್ಟು ಕಿರುಕುಳ ನೀಡಿದ್ದಾರೆಂದು ರಮ್ಯಾ, ನರೇಶ್​ ವಿರುದ್ಧ ಆರೋಪ ಮಾಡಿದ್ದರು. ಅದಕ್ಕೆ ಪುಷ್ಠಿ ನೀಡುವಂತೆ ಕಳೆದ ಜುಲೈ 2ರ ರಾತ್ರಿ ಮೈಸೂರಿನ ವಿವಿ ಪುರಂ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿ, ಹೋಟೆಲ್​ ಒಂದರಲ್ಲಿ ಒಂದೇ ಕೋಣೆಯಲ್ಲಿ ನರೇಶ್​ ಮತ್ತು ಪವಿತ್ರ ಲೋಕೇಶ್​ ಉಳಿದುಕೊಂಡಿದ್ದರು. ಇಡೀ ರಾತ್ರಿ ಒಂದೇ ರೂಮಿನಲ್ಲಿ ಇದ್ದರು. ಈ ವಿಚಾರ ರಮ್ಯಾ ಅವರಿಗೆ ತಿಳಿದು ಹೋಟೆಲ್​ಗೆ ಬಂದು ಜಗಳವಾಡಿದ್ದರು. ಅಲ್ಲದೆ, ಸ್ನೇಹಿತರು ಅಂತಾರೆ ಆದರೆ, ಒಂದೇ ಕೋಣೆಯಲ್ಲಿ ಇಬ್ಬರು ಒಂದು ರಾತ್ರಿ ಉಳಿದುಕೊಂಡಿದ್ದು ಏಕೆ? ಎಂದು ಪ್ರಶ್ನಿಸುವ ಮೂಲಕ ರಮ್ಯಾ ಇಬ್ಬರನ್ನು ತರಾಟೆಗೆ ತೆಗೆದುಕೊಂಡಿದ್ದರು. ಇದು ಭಾರೀ ಸುದ್ದಿಯಾಗಿತ್ತು. ಇಬ್ಬರ ನಡುವಿನ ಸಂಬಂಧಕ್ಕೆ ಮೈಸೂರಿನ ಘಟನೆ ಸಾಕ್ಷಿಯಾಗಿತ್ತು.

    ಈ ವಿವಾದದ ಬಳಿಕ ಅನೇಕ ಮಾಧ್ಯಮಗಳು ಹಾಗೂ ಯೂಟ್ಯೂಬ್​ ಚಾನೆಲ್​ಗಳು ಪವಿತ್ರಾ ಲೋಕೇಶ್​ ಮತ್ತು ನರೇಶ್​ ಕುರಿತು ಸಾಕಷ್ಟು ಸುದ್ದಿಗಳನ್ನು ಪ್ರಕಟಿಸಿದ್ದವು. ಅಲ್ಲದೆ, ವೈಯಕ್ತಿಕ ವಿಚಾರಗಳನ್ನು ಕೆದಕಿದ್ದವು. ಈ ಹಿನ್ನೆಲೆಯಲ್ಲಿ ಪವಿತ್ರಾ ಲೋಕೇಶ್​ ಅವರು ಈ ಹಿಂದೆಯೇ ಸೈಬರ್​ ಕ್ರೈಂ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದೀಗ ನರೇಶ್​ ದೂರು ನೀಡಿದ್ದು, ಇಬ್ಬರು ವೈಯಕ್ತಿಕ ವಿಚಾರಗಳನ್ನು ಕೆದಕಿದ ಯೂಟ್ಯೂಬರ್ಸ್​ ಇದೀಗ ಪೊಲೀಸ್​ ವಿಚಾರಣೆ ಎದುರಿಸಬೇಕಿದೆ. (ಏಜೆನ್ಸೀಸ್​)

    ವಿವಾದವನ್ನೇ ಬಂಡವಾಳ ಮಾಡಿಕೊಂಡ್ರಾ ಪವಿತ್ರಾ ಲೋಕೇಶ್​? ಟಾಲಿವುಡ್​ನಲ್ಲಿ ಹೀಗೊಂದು ಬಿಸಿ ಬಿಸಿ ಚರ್ಚೆ!

    ನಿನ್ನೆ ರಾತ್ರಿ ನರೇಶ್​ ಜೊತೆ ಪವಿತ್ರಾ ಲೋಕೇಶ್​ ದೂರು ದಾಖಲಿಸಿದ್ದು ಯಾರ ವಿರುದ್ಧ? ಇಲ್ಲಿದೆ ಮಾಹಿತಿ

    25 ಲಕ್ಷ ರೂಪಾಯಿದ್ದೇ ಗುಸುಗುಸು… ನರೇಶ್​-ಪವಿತ್ರಾ ಬಗ್ಗೆ ಟಾಲಿವುಟ್​ನಲ್ಲಿ ಹರಿದಾಡ್ತಿದೆ‌ ಸೆನ್ಸೇಷನಲ್‌ ನ್ಯೂಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts