More

    ಟಿ20 ವಿಶ್ವಕಪ್‌ಗಿಲ್ಲ ಶಮಿ, ರಾಹುಲ್, ಪಂತ್ ಬಗ್ಗೆ ಅಪ್ಡೇಟ್ ನೀಡಿದ ಜಯ್ ಷಾ

    ಧರ್ಮಶಾಲಾ: ಎಡಪಾದದ ಶಸಚಿಕಿತ್ಸೆ ಒಳಗಾಗಿರುವ ಭಾರತ ತಂಡದ ಅನುಭವಿ ವೇಗಿ ಮೊಹಮದ್ ಶಮಿ ಜೂನ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಿಂದಲೂ ಹೊರಗುಳಿಯಲಿದ್ದಾರೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಷಾ ಸೋಮವಾರ ಖಾತ್ರಿಪಡಿಸಿದ್ದಾರೆ. ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಬಾಂಗ್ಲಾದೇಶ ವಿರುದ್ಧದ ತವರಿನ ಸರಣಿಗೆ ಫಿಟ್ ಆಗುವ ಸಾಧ್ಯತೆಗಳಿವೆ ಎಂದು ತಿಳಿಸಿದ್ದಾರೆ. ಕಳೆದ ತಿಂಗಳು ಎಡಪಾದದ ಶಸಚಿಕಿತ್ಸೆಗೆ ಒಳಗಾಗಿರುವ ಶಮಿ, ಐಪಿಎಲ್‌ನಲ್ಲೂ ಗುಜರಾತ್ ಟೈಟಾನ್ಸ್ ತಂಡಕ್ಕೆ ಅಲಭ್ಯರಾಗಿದ್ದಾರೆ. ಕಳೆದ ವರ್ಷ ನವೆಂಬರ್‌ನಲ್ಲಿ ತವರಿನ ಏಕದಿನ ವಿಶ್ವಕಪ್ ೈನಲ್‌ನಲ್ಲಿ ಆಸೀಸ್ ವಿರುದ್ಧ ಕೊನೆಯದಾಗಿ ಆಡಿದ್ದ 33 ವರ್ಷದ ಶಮಿ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಕನಿಷ್ಠ ಮೂರು ತಿಂಗಳ ಸಮಯ ಹಿಡಿಯಲಿದೆ ಎನ್ನಲಾಗಿದೆ. ಭಾರತ ಸೆಪ್ಟೆಂಬರ್‌ನಲ್ಲಿ ಬಾಂಗ್ಲಾದೇಶ ಎದುರು ತವರಿನಲ್ಲಿ 2 ಟೆಸ್ಟ್ ಹಾಗೂ 3 ಟಿ20 ಪಂದ್ಯ ಆಡಲಿದೆ.

    ಎನ್‌ಸಿಎಯಲ್ಲಿ ರಾಹುಲ್: ಬಲತೊಡೆಯ ಸ್ನಾಯು ಸೆಳೆತದಿಂದ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ನಂತರ ಸರಣಿಯಿಂದಲೆ ಹೊರಗುಳಿದಿದ್ದ ಕೆಎಲ್ ರಾಹುಲ್, ಲಂಡನ್‌ನಿಂದ ತವರಿಗೆ ಮರಳಿದ್ದು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ (ಎನ್‌ಸಿಎ) ಪುನಶ್ಚೇತನ ಶಿಬಿರದಲ್ಲಿ ಭಾಗಿಯಾಗಿದ್ದಾರೆ. ರಾಹುಲ್ ಸ್ನಾಯುಸೆಳೆತದ ನೋವಿಗೆ ವಿಶೇಷ ಚುಚ್ಚುಮದ್ದು ಪಡೆಯಲು ಲಂಡನ್‌ಗೆ ತೆರಳಿದ್ದರು. ಐಪಿಎಲ್‌ನಲ್ಲಿ ಕಣಕ್ಕಿಳಿಯುವ ಮೂಲಕ ಸ್ಪರ್ಧಾತ್ಮಕ ಕ್ರಿಕೆಟ್ ಪುನರಾಗಮನ ಮಾಡಲು ಕಾಯುತ್ತಿರುವ ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್ ಉತ್ತಮವಾಗಿ ಬ್ಯಾಟಿಂಗ್ ಹಾಗೂ ಕೀಪಿಂಗ್ ಮಾಡುತ್ತಿದ್ದಾರೆ. ನಾವು ಅವರನ್ನು ಶೀಘ್ರದಲ್ಲೇ ಫಿಟ್ ಎಂದು ಘೋಷಿಸುತ್ತೇವೆ. ಟಿ20 ವಿಶ್ವಕಪ್ ಆಡಿದರೆ, ಟೀಮ್ ಇಂಡಿಯಾಗೆ ಹೆಚ್ಚಿನ ಬಲ ಸಿಗಲಿದೆ. ಐಪಿಎಲ್ ಪ್ರದರ್ಶನದ ನಂತರ ವಿಶ್ವಕಪ್‌ನಲ್ಲಿ ಆಡುವ ಬಗ್ಗೆ ನಿರ್ಧರಿಸಲಾಗುವುದು ಎಂದು ಜಯ್ ಷಾ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts