More

    ಕೇವಲ 6 ತಿಂಗಳ ಅಂತರದಲ್ಲಿ 3 ಸರ್ಕಾರಿ ಕೆಲಸ ಗಿಟ್ಟಿಸಿದ ಯುವತಿ! ಈಕೆಯ ಯಶೋಗಾಥೆಯೇ ಸ್ಪೂರ್ತಿದಾಯಕ

    ಸರ್ಕಾರಿ ನೌಕರಿ ಪಡೆಯಬೇಕೆಂಬುದು ಅನೇಕರ ಕನಸು. ಇದಕ್ಕಾಗಿ ಕೆಲವರು ಕಷ್ಟಪಟ್ಟು ಅಧ್ಯಯನ ಮಾಡುತ್ತಾರೆ. ಬಡತನ ಮತ್ತು ಆರ್ಥಿಕ ಸಮಸ್ಯೆಗಳನ್ನು ಪರಿಗಣಿಸದೆ ತಮ್ಮ ಗುರಿಯತ್ತ ಹೆಜ್ಜೆ ಹಾಕುತ್ತಾರೆ. ಈ ಪ್ರಕ್ರಿಯೆಯಲ್ಲಿ ಕೆಲವರು ಯಶಸ್ವಿಯಾಗುತ್ತಾರೆ. ಆದರೆ, ಹೆಚ್ಚಿನವರಿಗೆ ಹಲವು ವರ್ಷಗಳ ಕಾಲ ದುಡಿದರೂ ಸರ್ಕಾರಿ ಕೆಲಸ ಸಿಗುತ್ತಿಲ್ಲ. ಆದರೆ, ಯುವತಿಯೊಬ್ಬಳಿಗೆ ಕೇವಲ 6 ತಿಂಗಳಲ್ಲಿ 3 ಸರ್ಕಾರಿ ಕೆಲಸ ಸಿಕ್ಕಿದೆ. ಆದರೆ, ಈ ಯಶಸ್ಸಿನ ಹಿಂದೆ ಆಕೆ ಅನೇಕ ಕಷ್ಟಗಳನ್ನು ಅನುಭವಿಸಿದ್ದಾಳೆ. ಯುವತಿಯ ಯಶೋಗಾಥೆ ಏನು ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.

    ಸರ್ಕಾರಿ ಉದ್ಯೋಗ ಪಡೆಯುವ ವಿಚಾರದಲ್ಲಿ ಯುವಕರಿಗಿಂತ ತಾವೇನು ಕಡಿಮೆ ಇಲ್ಲ ಎಂಬುದನ್ನು ರಾಜಸ್ಥಾನದ ಗ್ರಾಮೀಣ ಹುಡುಗಿಯರು ಸಾಬೀತು ಮಾಡುತ್ತಿದ್ದಾರೆ. ಈಗಾಗಲೇ ಅನೇಕ ಯುವತಿಯರು ಸರ್ಕಾರಿ ಉದ್ಯೋಗವನ್ನು ಗಿಟ್ಟಿಸಿಕೊಂಡಿದ್ದಾರೆ. ಆದರೆ ಇವರೆಲ್ಲರಿಗಿಂತ ಭಿನ್ನವಾಗಿ ನಿಲ್ಲುತ್ತಾರೆ ಯುವತಿ ಕಲ್ಪನಾ. ಏಕೆಂದರೆ, ಕೇವಲ ಆರು ತಿಂಗಳಲ್ಲಿ ಮೂರು ಸರ್ಕಾರಿ ಕೆಲಸ ಗಿಟ್ಟಿಸಿಕೊಂಡು ಎಲ್ಲರಿಗೂ ಮಾದರಿಯಾಗಿದ್ದಾರೆ. ಕಲ್ಪನಾ ಅವರ ತಾಯಿ ಕೃಷಿ ಕೆಲಸವನ್ನು ಮಾಡುತ್ತಾ ಕುಟುಂಬವನ್ನು ಪೋಷಿಸುತ್ತಾರೆ. ಕುಟುಂಬದ ಮೂವರು ಸಹೋದರಿಯರಲ್ಲಿ ಕಲ್ಪನಾ ಹಿರಿಯಳು. ಕಲ್ಪನಾ ಅವರ ತಂದೆ ಮಹಿಪಾಲ್ ಕುಟುಂಬ ನಿರ್ವಹಣೆಗೆ ವಿದೇಶಕ್ಕೆ ತೆರಳಿದ್ದಾರೆ.

    ಕಲ್ಪನಾ ತಂದೆ ಅಲ್ಲಿ ಕೆಲಸ ಮಾಡಿ ಕುಟುಂಬಕ್ಕೆ ಹಣ ಕಳುಹಿಸುತ್ತಾರೆ. ಕುಟುಂಬದ ಆರ್ಥಿಕ ಪರಿಸ್ಥಿತಿಯನ್ನು ನೋಡಿ ಹೇಗಾದರೂ ಬದಲಾಯಿಸಬೇಕೆಂದು ಕಲ್ಪನಾ ಯೋಚಿಸಿದಳು. ಕಲ್ಪನಾಗೆ ಒಳ್ಳೆಯ ಕೆಲಸ ಸಿಗಬೇಕು ಎಂಬ ಆಸೆ ಇತ್ತು. ಈ ಕ್ರಮದಲ್ಲಿ, ಕಲ್ಪನಾ ರಾಜಸ್ಥಾನದ ಬನಸ್ಥಲಿ ವಿದ್ಯಾಪೀಠದಲ್ಲಿ ತನ್ನ ಶಿಕ್ಷಣವನ್ನು ಪೂರ್ಣಗೊಳಿಸಿದಳು. ಕಾಲೇಜಿನಲ್ಲಿ ಓದುತ್ತಲೇ ಸರ್ಕಾರಿ ನೌಕರಿ ಪಡೆಯುವ ಗುರಿ ಹೊಂದಿದ್ದಳು. ಅದಕ್ಕಾಗಿ ಕಾಲೇಜು ದಿನಗಳಿಂದಲೇ ಸರ್ಕಾರಿ ನೌಕರಿಗಾಗಿ ತಯಾರಿ ನಡೆಸುತ್ತಿದ್ದಳು.

    ಅಂದಹಾಗೆ ಕಲ್ಪನಾ ತಮ್ಮ ತಾಯಿಗೆ ಹೊರೆಯಾಗಬಾರದು ಅಂತ ಹೊಲದಲ್ಲಿ ಕೆಲಸ ಮಾಡುವುದರ ಜತೆಗೆ ತಾಯಿಗೆ ಮನೆಕೆಲಸದಲ್ಲೂ ಸಹಾಯ ಮಾಡುತ್ತಿದ್ದಳು. ಇದರೊಂದಿಗೆ ಸರ್ಕಾರಿ ಕೆಲಸಕ್ಕಾಗಿಯೂ ಶ್ರಮಿಸುತ್ತಿದ್ದಳು. ತಮ್ಮ ಪರಿಶ್ರಮದಿಂದಲೇ ಇಂದು ಇನ್ಸ್​ಪೆಕ್ಟರ್ ಆಗಿ ಕಲ್ಪನಾ ಆಯ್ಕೆಯಾಗಿದ್ದಾರೆ. ಇದರಿಂದಾಗಿ ಕಲ್ಪನಾ ಮನೆಯಲ್ಲಿ ಸಂತೋಷಕ್ಕೆ ಮಿತಿಯೇ ಇಲ್ಲದಂತಾಗಿದೆ. ಅದರಲ್ಲೂ ಕಲ್ಪನಾಳ ತಾಯಿಯ ಆನಂದಕ್ಕೆ ಪಾರವೇ ಇರಲಿಲ್ಲ. ಇನ್ಸ್‌ಪೆಕ್ಟರ್ ಕೆಲಸಕ್ಕಿಂತ ಮೊದಲು ಕಲ್ಪನಾಗೆ ಸಿಎಚ್‌ಎಸ್‌ಎಲ್‌ನಲ್ಲಿ ಕ್ಲರ್ಕ್ ಕೆಲಸ ಸಿಕ್ಕಿತು. ನಂತರ ಆಕೆಗೆ ಆಡಿಟರ್ ಕೆಲಸ ಸಿಕ್ಕಿತು. ಇತ್ತೀಚೆಗಷ್ಟೇ ಆಕೆಗೆ ಇನ್ಸ್​ಪೆಕ್ಟರ್​ ಹುದ್ದೆ ಸಿಕ್ಕಿದೆ. ಈ ಮೂರೂ ಕೆಲಸಗಳನ್ನು ಕೇವಲ ಆರು ತಿಂಗಳಲ್ಲಿ ಕಲ್ಪನಾ ಸಾಧಿಸಿದ್ದಾರೆ.

    ಕಲ್ಪನಾ ಅವರು ತನ್ನ ಯಶಸ್ಸಿನ ಬಗ್ಗೆ ಮಾತನಾಡುತ್ತಾ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ದೆಹಲಿಯಲ್ಲಿ ಕೆಲವು ದಿನಗಳ ಕಾಲ ತರಬೇತಿಯನ್ನು ಪಡೆದೆ. ಆನಂತರ ಮನೆಯಲ್ಲಿಯೇ ಓದಿದೆ. ಸಿದ್ಧತೆಯ ಜೊತೆಗೆ ಕಾಲಕಾಲಕ್ಕೆ ರಿವಿಷನ್​ ಸಹ ಮಾಡುತ್ತಿದ್ದೆ ಎಂದು ಕಲ್ಪನಾ ತಿಳಿಸಿದ್ದಾರೆ. ಇದೀಗ ಕಲ್ಪನಾ ಯಶಸ್ಸು ಯುವಜನಾಂಗಕ್ಕೆ ಸ್ಫೂರ್ತಿಯಾಗಿದೆ. (ಏಜೆನ್ಸೀಸ್​)

    ಸ್ಯಾಂಡಲ್​​ವುಡ್​ ಹಿರಿಯ ನಟ, ಕನ್ನಡದ ಕುಳ್ಳ ಎಂದೇ ಖ್ಯಾತರಾಗಿದ್ದ ದ್ವಾರಕೀಶ್​ ಇನ್ನಿಲ್ಲ

    ವಯಸ್ಸಿಗೆ ಬಂದ ಮಗಳಿರುವ ವ್ಯಕ್ತಿಯ ಜತೆ ವರು ನಿಶ್ಚಿತಾರ್ಥ! ಶಾಕಿಂಗ್​ ಕಾಮೆಂಟ್​ ಮಾಡಿದ ವಿಶಾಲ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts