ಈ ವಿಷಯ ನನ್ನಿಂದ ಒಪ್ಪಿಕೊಳ್ಳಲು ಸಾಧ್ಯವಾಗಲಿಲ್ಲ.. 'ಕೈ' ತೊರೆಯಲು ಹಿಂದಿದ್ದ ಕಾರಣ ಬಿಚ್ಚಿಟ್ಟ ರಾಧಿಕಾ ಖೇರಾ!

WhatsApp Image 2024-05-05 at 6.49.11 PM
Published on

ನವದೆಹಲಿ: ಛತ್ತೀಸ್‌ಗಢದ ಕಾಂಗ್ರೆಸ್ ನಾಯಕಿ ಹಾಗೂ ರಾಷ್ಟ್ರೀಯ ವಕ್ತಾರೆಯಾಗಿದ್ದ ರಾಧಿಕಾ ಖೇರಾ ಇದೀಗ​ ಪಕ್ಷಕ್ಕೆ ರಾಜೀನಾಮೆ ಘೋಷಿಸಿದ್ದು, ಇದರ ಹಿಂದಿದ್ದ ಬಲವಾದ ಕಾರಣವನ್ನು ಬಹಿರಂಗವಾಗಿ ತಿಳಿಸಿದ್ದಾರೆ. ಕಾಂಗ್ರೆಸ್​ನ ರಾಷ್ಟ್ರಾಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬರೆದ ಪತ್ರದಲ್ಲಿ ರಾಜೀನಾಮೆ ವಿಷಯ ಮಾತ್ರವಲ್ಲದೇ ತನಗೆ ಎದುರಾದ ಅವಮಾನ ಸೇರಿದಂತೆ ಕೆಲವು ಗಂಭೀರ ಆರೋಪಗಳನ್ನು ಉಲ್ಲೇಖಿಸಿದ್ದಾರೆ.

ರಾಜ್ಯ ಘಟಕದಲ್ಲಿ ನನ್ನನ್ನು ಹೀನಾಯವಾಗಿ ನಡೆಸಿಕೊಳ್ಳಲಾಯಿತು. ಅಗೌರವ ತೋರಲಾಗಿದೆ ಎಂದು ಪತ್ರದಲ್ಲಿ ಬರೆದಿರುವ ರಾಧಿಕಾ, ಅಯೋಧ್ಯೆಯಲ್ಲಿರುವ ಶ್ರೀ ರಾಮಮಂದಿರಕ್ಕೆ ಭೇಟಿ ನೀಡಿದ್ದಕ್ಕೆ ಹಲವು ಮಾತುಗಳನ್ನು ಕೇಳಬೇಕಾಯಿತು ಎಂದಿದ್ದಾರೆ.

"ಈ ವಿಷಯಕ್ಕಾಗಿ ಭಾರೀ ವಿರೋಧಗಳನ್ನು ಎದುರಿಸಬೇಕಾಯಿತು. ರಾಮಲಲ್ಲಾ ಮೂರ್ತಿಯ ದರ್ಶನ ಪಡೆದ ಕಾರಣ ಪಕ್ಷದೊಳಗೆ ಟೀಕೆಗಳು ಕೇಳಿಬಂದಿತು" ಎಂದು ಪತ್ರದ ಮೂಲಕ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net