ರಾಜಧಾನಿಯ ಮೆಟ್ರೋ ನಿಲ್ದಾಣದಲ್ಲಿ ನೂರಾರು ಕಾಂಡೋಮ್​ ಪ್ಯಾಕೆಟ್ಸ್​​ ಪತ್ತೆ: ಉಚಿತ ವಿತರಣೆ ನೆನೆದ ನೆಟ್ಟಿಗರು! Condom

Condom
Published on

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಮೆಟ್ರೋ ನಿಲ್ದಾಣದಲ್ಲಿ ನೂರಾರು ಕಾಂಡೋಮ್​ ( Condom ) ಪ್ಯಾಕೆಟ್​ಗಳು ಪತ್ತೆಯಾಗಿದ್ದು, ಅದಕ್ಕೆ ಸಂಬಂಧಿಸಿದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ.

ಮೆಟ್ರೋ ನಿಲ್ದಾಣದ ಗೇಟ್ ಹಿಂದೆ ಇಟ್ಟಿದ್ದ ಕಾಂಡೋಮ್ ಬಾಕ್ಸ್ ಯುವಕನೊಬ್ಬನಿಗೆ ಸಿಕ್ಕಿದೆ. ಅದಕ್ಕೆ ಸಂಬಂಧಿಸಿದ ಫೋಟೋವನ್ನು ರೆಡ್ಡಿಟ್​ ಜಾಲತಾಣದಲ್ಲಿ ಪೋಸ್ಟ್​ ಮಾಡಿರುವ ಯುವಕ, ಫೋನ್‌ ಮತ್ತು ಲ್ಯಾಪ್‌ಟಾಪ್‌ಗಳನ್ನು ಕಳೆದುಕೊಳ್ಳುವುದು ಮತ್ತು ಪ್ರಯಾಣದ ಸಮಯದಲ್ಲಿ ಜನರು ನಿದ್ರಿಸುವುದು ದೆಹಲಿ ಮೆಟ್ರೋದಲ್ಲಿ ಕಂಡುಬರುವಂತಹ ಸಾಮಾನ್ಯ ದೃಶ್ಯಗಳಾಗಿವೆ. ಆದರೆ, ಇಷ್ಟು ದೊಡ್ಡ ಕಾಂಡೋಮ್ ಬಾಕ್ಸ್ ಸಿಗುವುದು ನಿಜಕ್ಕೂ ಅಪರೂಪದ ಅನುಭವ ಎಂದು ಯುವಕ ರೆಡ್ಡಿಟ್‌ನಲ್ಲಿ ಬರೆದುಕೊಂಡಿದ್ದಾನೆ.

ಯುವಕ ಹಂಚಿಕೊಂಡಿರುವ ಫೋಟೋದಲ್ಲಿ ಬಾಕ್ಸ್​ ಜತೆಗೆ ಹಲವಾರು ಕಾಂಡೋಮ್ ಪ್ಯಾಕೆಟ್‌ಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ಕಾಣಿಸುತ್ತಿವೆ. ಈ ಬಾಕ್ಸ್​ನಲ್ಲಿ ಕೇವಲ ಮೂರು ಪ್ಯಾಕೆಟ್‌ಗಳು ಮಾತ್ರ ಓಪನ್​ ಆಗಿದ್ದವು ಎಂದು ಯುವಕ ಹೇಳಿದ್ದಾನೆ. ಆತ ಫೋಟೋ ಹಂಚಿಕೊಳ್ಳುತ್ತಿದ್ದಂತೆ ಅಲ್ಪಾವಧಿಯಲ್ಲಿಯೇ ಆ ಫೋಟೋ ಜಾಲತಾಣದಲ್ಲಿ ವೈರಲ್ ಆಗಿದೆ.

Posts from the delhi community on Reddit

ಸಾರ್ವಜನಿಕ ಆರೋಗ್ಯ ಅಭಿಯಾನದ ಭಾಗವಾಗಿ ದೆಹಲಿ ಮೆಟ್ರೋ ಈ ಹಿಂದೆ ಕಾಂಡೋಮ್‌ಗಳನ್ನು ವಿತರಿಸಿದ ಕ್ಷಣವನ್ನು ಕೆಲ ನೆಟ್ಟಿಗರು ನೆನಪಿಸಿಕೊಂಡರೆ, ಇನ್ನು ಕೆಲವರು ಈ ಕಾಂಡೋಮ್​ಗಳನ್ನು ನೋಡಿದ ಪ್ರಯಾಣಿಕರು ಏನು ಯೋಚಿಸಿರಬಹುದು ಎಂದು ತಮಾಷೆ ಮಾಡಿದ್ದಾರೆ.

ಇನ್ನು ಕಾಂಡೋಮ್​ಗಳು ಸಾಮಾನ್ಯವಾಗಿ ಬಸ್ ನಿಲ್ದಾಣಗಳು, ರೈಲ್ವೆ ನಿಲ್ದಾಣಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಲಭ್ಯವಾಗುವುದನ್ನು ನಾವು ಕೇಳಿದ್ದೇವೆ ಮತ್ತು ನೋಡಿದ್ದೇವೆ ಎಂದು ವ್ಯಕ್ತಿಯೊರ್ವ ಕಾಮೆಂಟ್ ಮಾಡಿದರೆ, ನಾನು ಕಾಂಡೋಮ್‌ಗಳ ಬಗ್ಗೆ ಗರ್ಭನಿರೋಧಕ ತರಗತಿಗಳಲ್ಲಿ ಮಾತ್ರ ಕಲಿತಿದ್ದೇನೆ. ನಿಜಕ್ಕೂ ಜನರು ಅವುಗಳನ್ನು ಬಳಸುತ್ತಾರೆಯೇ? ಇದು ಆರೋಗ್ಯ ಇಲಾಖೆಯ ಒಂದು ಉತ್ತಮ ಯೋಜನೆ ಎಂದು ವೈದ್ಯಕೀಯ ವಿದ್ಯಾರ್ಥಿಯೊಬ್ಬರು ಕಾಮೆಂಟ್​ ಮಾಡಿದ್ದಾರೆ. ಮೊದಲಿಗೆ ನಾನಾದನ್ನು ಆಟಿಕೆ ಅಥವಾ ಪಟಾಕಿ ಎಂದು ಭಾವಿಸಿದ್ದೆ. ಕಾಮೆಂಟ್‌ಗಳನ್ನು ಓದಿದ ನಂತರ ಅದು ಕಾಂಡೋಮ್ ಎಂದು ನನಗೆ ಅರಿವಾಯಿತು ಎಂದು ಮತ್ತೊಬ್ಬ ವ್ಯಕ್ತಿ ಬರೆದುಕೊಂಡಿದ್ದಾರೆ.

ಇವು ಗ್ರಾಮೀಣ ಪ್ರದೇಶಗಳಲ್ಲಿ ಉಚಿತವಾಗಿ ವಿತರಿಸಲಾಗುವ ಸರ್ಕಾರಿ ಉತ್ಪನ್ನಗಳು. ಸಾಧ್ಯವಾದರೆ ದಯವಿಟ್ಟು ಅವುಗಳನ್ನು ಸರ್ಕಾರಿ ಆಸ್ಪತ್ರೆಗೆ ಹಿಂತಿರುಗಿಸಿ ಎಂದು ಮತ್ತೊಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಉಚಿತ ವಿತರಣೆಗೆ ಉದ್ದೇಶಿಸಲಾಗಿದ್ದ ಕಾಂಡೋಮ್‌ಗಳನ್ನು ಬೇರೆಡೆಗೆ ಕದ್ದು ಸಾಗಿಸಲು ಯತ್ನಿಸಿರುವಂತೆ ತೋರುತ್ತದೆ. ಇದು ಸರ್ಕಾರಿ ವ್ಯವಸ್ಥೆಯಲ್ಲಿ ಕಂಡುಬರುವ ಸಾಮಾನ್ಯ ದೃಶ್ಯವಾಗಿದೆ ಎಂದು ಮಗದೊಬ್ಬ ನೆಟ್ಟಿಗ ಕಾಮೆಂಟ್​ ಮಾಡಿದ್ದಾನೆ.

ಅಂದಹಾಗೆ, ಗರ್ಭನಿರೋಧಕ ಉತ್ಪನ್ನಗಳ ಅತಿದೊಡ್ಡ ತಯಾರಕರಲ್ಲಿ ಒಂದಾದ HLL ಲೈಫ್‌ಕೇರ್, 2014 ರಲ್ಲಿ ದೆಹಲಿ ಮೆಟ್ರೋ ರೈಲು ನಿಗಮ (DMRC) ದೊಂದಿಗೆ ಪಾಲುದಾರಿಕೆ ಮಾಡಿಕೊಂಡು ವಿವಿಧ ಮೆಟ್ರೋ ನಿಲ್ದಾಣಗಳಲ್ಲಿ ವೆಂಡಿಂಗ್ ಯಂತ್ರಗಳನ್ನು ಸ್ಥಾಪಿಸಿತು. ಈ ಯಂತ್ರಗಳು ಕಾಂಡೋಮ್‌ಗಳ ಜೊತೆಗೆ ಗರ್ಭನಿರೋಧಕ ಮಾತ್ರೆಗಳು ಮತ್ತು ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು ಒದಗಿಸುತ್ತಿತ್ತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net