2023 ವರ್ಷ ಹೇಗಿದೆ? ಯಾರ ಗ್ರಹಗತಿಗಳು ಹೇಗಿರಲಿವೆ? ಯಾವ ರಾಶಿಯಲ್ಲಿ ಜನಿಸಿದವರು ಯಾವ ಫಲ ಹೊಂದಿರುತ್ತಾರೆ? ಈ ಹಿನ್ನೆಲೆಯಲ್ಲಿ 2023ನೇ ವರ್ಷದ ರಾಶಿ ಫಲಗಳ ಮಾಹಿತಿ ಇಲ್ಲಿದೆ...

2023
Published on

2023 ವರ್ಷ ಹೇಗಿದೆ? ಯಾರ ಗ್ರಹಗತಿಗಳು ಹೇಗಿರಲಿವೆ? ಯಾವ ರಾಶಿಯಲ್ಲಿ ಜನಿಸಿದವರು ಯಾವ ಫಲ ಹೊಂದಿರುತ್ತಾರೆ ಎಂಬ ಕುತೂಹಲ ಸಹಜ. ಈ ಹಿನ್ನೆಲೆಯಲ್ಲಿ 2023ನೇ ವರ್ಷದಲ್ಲಿ ದ್ವಾದಶ ರಾಶಿಯ ಫಲಾಫಲಗಳ ಮಾಹಿತಿ ಇಲ್ಲಿದೆ.

ಕರೊನಾ ಕರಿನೆರಳಿನಿಂದ ಬದುಕು ಸಹಜ ಸ್ಥಿತಿಗೆ ಬಂದ ವರ್ಷವಾಗಿ 2022 ಸಮಾಧಾನ ತಂದಿತು. ಹಾಗಾದರೆಹಾಗಾದರೆ 2023 ವರ್ಷ ಹೇಗಿದೆ? ಯಾರ ಗ್ರಹಗತಿಗಳು ಹೇಗಿರಲಿವೆ? ಯಾವ ರಾಶಿಯಲ್ಲಿ ಜನಿಸಿದವರು ಯಾವ ಫಲ ಹೊಂದಿರುತ್ತಾರೆ ಎಂಬ ಕುತೂಹಲ ಸಹಜ. ಈ ಹಿನ್ನೆಲೆಯಲ್ಲಿ 2023ನೇ ವರ್ಷದಲ್ಲಿ ದ್ವಾದಶ ರಾಶಿಯ ಫಲಾಫಲಗಳ ಮಾಹಿತಿ ಇಲ್ಲಿದೆ.

ಮೇಷ: ಈ ರಾಶಿಯಲ್ಲಿ ಅಶ್ವಿನಿ, ಭರಣಿ, ಕೃತ್ತಿಕಾ 3 ಪಾದಗಳು ಬರುವುದರಿಂದ ಗುರುವು ದ್ವಾದಶದಲ್ಲಿ ದುರ್ಬಲನಾಗಿದ್ದು, ಗುರು ಮೇಷ ರಾಶಿಗೆ ಬರುವವರೆಗೂ, ಶುಭ ಫಲಕ್ಕಾಗಿ ಕಾಯಬೇಕು. ಜನವರಿ 17ಕ್ಕೆ ಶನಿಯು ಏಕಾದಶಕ್ಕೆ ಬಂದು ನಿಂತು ಹೋದ ಕಾರ್ಯವನ್ನು ನಡೆಸಿ ನಿಮಗೆ ಧನ-ವೆಚ್ಚವನ್ನು ಕಡಿಮೆ ಮಾಡಿ ಲಾಭ, ಕೀರ್ತಿ, ಹೆಸರನ್ನು ತಂದುಕೊಡುತ್ತಾನೆ. ಮೇಷ ರಾಶಿಯವರು ಸೂರ್ಯನಾರಾಯಣನನ್ನು ಪೂಜಿಸಿದರೆ ವಿಶೇಷವಾದ ಪ್ರಗತಿಯೂ ಸಂತೋಷವೂ ಉಂಟಾಗುವುದು. ಸುಬ್ರಹ್ಮಣ್ಯ ದೇವರ ಆರಾಧನೆಯಿಂದ ಆರೋಗ್ಯವನ್ನು ಹಾಗೂ ಸಂಪತ್ತನ್ನು ವೃದ್ಧಿಸಿಕೊಳ್ಳಬೇಕು. ಶುಭ ಸಂಖ್ಯೆ - 9 ವೃಷಭ: ಜನವರಿಯಿಂದ ಮಾ.21ರವರೆಗೂ ಗುರು ಏಕಾದಶ ಫಲವನ್ನು, ಶನಿಯು 94 ಫಲವನ್ನು ಕೊಟ್ಟು ಅಸಾಧ್ಯವಾದ ಕೆಲಸಗಳನ್ನು ಮಾಡಿಸುತ್ತಾನೆ. ಏ.21ರಿಂದ ಗುರುಬಲವು ಕ್ಷೀಣಿಸುತ್ತದೆ. ದ್ವಾದಶ ಗುರು ದತ್ತಾತ್ರೇಯನನ್ನು ಪೂಜಿಸಿದರೆ ಗುರುಬಲದಿಂದ ಶೇಕಡವಾರು 60 ಶುಭ ಫಲವನ್ನು ಪಡೆಯಬಹುದು. ದಶಮಕ್ಕೆ ಸ್ವಕ್ಷೇತ್ರ ಸರಿಬರುವುದರಿಂದ ಯಾವ ಕೆಡುಕು, ಅಪಕೀರ್ತಿ ಬರುವ ಸಾಧ್ಯತೆ ಇಲ್ಲ. ಆದಾಗ್ಯೂ 10ರ ಶನಿಗೆ ಶನಿ ಅಷ್ಟೋತ್ತರವನ್ನು, ದ್ವಾದಶ ಗುರುವಿಗೆ ಗುರು ಅಷ್ಟೋತ್ತರವನ್ನು ಪಾರಾಯಣ ಮಾಡಿ ಕಡಲೇಬೇಳೆ, ಬೆಲ್ಲವನ್ನು ದಾನವಾಗಿ ಕೊಡಬೇಕು. ಇದರಿಂದ ಶುಭಫಲವು ನಿಮ್ಮಂತೆ ನಡೆಯುತ್ತದೆ. ಶುಭ ಸಂಖ್ಯೆ - 2 ಮಿಥುನ: ಅಷ್ಟಮ ಶನಿಯು ಒಂಬತ್ತಕ್ಕೆ ಬಂದು ಮೇಷದಲ್ಲಿ ಗುರು ಪ್ರವೇಶಿಸಿ ಏಕಾದಶ ಸ್ಥಾನದ ಫಲವನ್ನು ನೀಡುತ್ತಾನೆ. ಅಸಾಧ್ಯವಾದದ್ದನ್ನು ಸಾಧ್ಯ ಮಾಡಿಸಿ ನೀವು ಕಳೆದುಕೊಂಡ ವ್ಯಕ್ತಿತ್ವವನ್ನು, ಆರೋಗ್ಯವನ್ನು ನೀಡಿ ನಿಮ್ಮ ಸರ್ವತೋಮುಖ ಅಭಿವೃದ್ಧಿ ಹಾಗೂ ಯಶಸ್ಸನ್ನು ತಂದುಕೊಡುತ್ತಾನೆ. ಬುಧನೇ ಮಿಥುನಾಧಿಪತಿ ಆಗಿರುವುದರಿಂದ ಮಹಾವಿಷ್ಣುವನ್ನು ಪೂಜಿಸಿ. ಶ್ರೀ ವೆಂಕಟೇಶ್ವರ ಸಹಸ್ರನಾಮ ಪಾರಾಯಣ ಮಾಡಿದರೆ ನೀವು ಅಧಿಕ ಲಾಭವನ್ನೂ ಸುಖವನ್ನೂ ಪಡೆಯಬಹುದು. ಶುಭ ಸಂಖ್ಯೆ - 3 ಕಟಕ: ಸಪ್ತಮ ಶನಿಯು ಅಷ್ಟಮಕ್ಕೆ ಸರಿದು ಸ್ವಕ್ಷೇತ್ರಕ್ಕೆ ಬರುವುದರಿಂದ ಯಾವ ರೀತಿಯ ಶರೀರ ದೌರ್ಬಲ್ಯವಾಗಲಿ, ನಷ್ಟಗಳಾಗಲಿ ಆಗುವುದಿಲ್ಲ. ಒಂಬತ್ತರಲ್ಲಿ ಮೀನ ರಾಶಿಯ ಗುರುವು ಸಾಮರ್ಥ್ಯವನ್ನು, ಆರೋಗ್ಯವನ್ನು ಶುಭ ಚಿಂತನೆಗಳನ್ನು ನೀಡಿ ಕಾರ್ಯ ಸಾಧಿಸುತ್ತಾನೆ. ಏ.21ರ ನಂತರದಲ್ಲಿ ಗುರು 10ನೇ ಮನೆಗೆ ಬರುವುದರಿಂದ ವಿಚಾರಗಳನ್ನು, ವಿಷಯಗಳನ್ನು ಸಮತೋಲನದಲ್ಲಿ ಇಟ್ಟು ಸಾಧಕ-ಬಾಧಕಗಳನ್ನು ಅರಿತು ಕೆಲಸ ಮಾಡಿಕೊಳ್ಳಿ. ‘ಚಂದ್ರಮಾ ಮನಸೋ ಜಾತಃ’ ಎಂಬ ಶ್ಲೋಕಾರ್ಥದಲ್ಲಿ ನಿಮ್ಮ ಮನಸ್ಸೆಂಬುದು ಚಂದ್ರನೇ ಆಗಿರುವುದರಿಂದ ಉದ್ವೇಗ ಬೇಡ. ಶಿವಾರ್ಥವನ್ನು ಮಾಡಬೇಕು. ಸೋಮವಾರದಂದು ಚಂದ್ರಾಷ್ಟಕ ಪಾರಾಯಣ ಮಾಡಬೇಕು. ಶುಭ ಸಂಖ್ಯೆ - 5 ಸಿಂಹ: ಜನವರಿ 1ರಿಂದ 17ರ ವರೆಗೂ ಶನಿಯು ಷಷ್ಠದಲ್ಲಿದ್ದು ಆನಂತರ ಸಪ್ತಮಕ್ಕೆ ಬಂದು ಸೇರುತ್ತಾನೆ. ಗುರುವು ಸ್ವಕ್ಷೇತ್ರದಲ್ಲಿ ಅಷ್ಟಮದಲ್ಲಿ ತನ್ನ ಸ್ವಂತ ಮನೆಯಲ್ಲಿ ಇರುವುದರಿಂದ ಯಾವ ಆತಂಕವೂ ಬಾರದೆ ಪೂರ್ವಜನ್ಮದ ಪುಣ್ಯವು ನಿಮ್ಮನ್ನು ಸದೃಢವಾಗಿ ಕಾಪಾಡಿ ಏ.21ರಿಂದ ಗುರುವು 9ಕ್ಕೆ ಬಂದು ನಿಮ್ಮ ಜೀವನದ ಪ್ರಯಾಣವು ಸುಖಕರವಾಗಿದ್ದು, ನಿರೀಕ್ಷಿತ ಮಟ್ಟದಲ್ಲಿ ಲಾಭವು, ಧೈರ್ಯ, ಕೀರ್ತಿ ಯಶಸಸ್ಸನ್ನು ಕೊಟ್ಟು ನಿಮ್ಮನ್ನು ಬೆಳೆಸಿ, ಉಳಿಸಿ, ಆರೋಗ್ಯವನ್ನು ಇಟ್ಟು ಸಲಹುತ್ತಾನೆ. ಆದಿತ್ಯಹೃದಯ ಪಾರಾಯಣವನ್ನು ಸಿಂಹ ರಾಶಿಯವರು ಮಾಡಲೇಬೇಕು. ಸಿಂಹಕ್ಕೆ, ಸಿಂಹವಾಹನಕ್ಕೆ ಅಧಿಪತಿ ದುರ್ಗೆ ಆಗಿರುವುದರಿಂದ ದುರ್ಗಾಷ್ಟ್ರೆೊತ್ತರ ಪಾರಾಯಣ ಮಾಡಿ ಆನಂದವನ್ನು, ಸುಖವನ್ನು ತಂದುಕೊಳ್ಳಿರಿ. ಶುಭ ಸಂಖ್ಯೆ - 1 ಕನ್ಯಾ: ಈ ರಾಶಿಯವರಿಗೆ ಪಂಚಮ ಶನಿಯು ಷಷ್ಠಕ್ಕೆ ಹೋಗಿ ತಮಗೆ ತಮಗೆ ಆಗಿರುವ ನಷ್ಟ, ಕಷ್ಟವನ್ನು ದೂರ ಮಾಡಿ ವಿಶೇಷವಾದ ಯೋಗಗಳನ್ನು ಕೊಟ್ಟು ನಿಮ್ಮ ಮನೆಯಲ್ಲಿ ಮಂಗಳಕಾರ್ಯವನ್ನು ನಡೆಸುತ್ತಾನೆ. ಸಪ್ತಮದಲ್ಲಿ ಗುರುಬಲ ಇರುವುದರಿಂದ ಏ.21ರವರೆಗೂ ವಿಪರೀತ ರಾಜಯೋಗ ಹರಿದುಬಂದು ಋಣಬಾಧೆ ಕಳೆದುಕೊಂಡು ಸುಖ, ಸಂತೋಷದಲ್ಲಿ ಬಾಳುವ ಕಾಲವನ್ನು ಚೆನ್ನಾಗಿ ಉಪಯೋಗಿಸಿಕೊಂಡು ಜೀವನದಲ್ಲಿ ಬೇಕಾದ ಅಪೇಕ್ಷೆಯನ್ನು ಈಡೇರಿಸಿಕೊಳ್ಳಬಹುದು. ಗುರುವು ಏ.21ಕ್ಕೆ ಅಷ್ಟಮಕ್ಕೆ ಬರುತ್ತಾನೆ. ಶ್ರದ್ಧಾ-ಭಕ್ತಿಯಿಂದ ಗುರುಸೇವೆ ಮಾಡಿ ನಿಮ್ಮ ಜೀವನದಲ್ಲಿ ಮಾರ್ಗ ಹಾಕಿಕೊಟ್ಟ ಗುರುವಿಗೆ ವಂದಿಸಿ ಗುರು ಪ್ರಿತ್ಯರ್ಥವಾಗಿ ಸುಗಂಧ, ದ್ರವ್ಯಾದಿಗಳನ್ನು ಕೊಟ್ಟು ಆಶೀರ್ವಾದ ಪಡೆಯಿರಿ. ವಿಷ್ಣುಸಹಸ್ರನಾಮ ಪಾರಾಯಣ ಮಾಡುವುದನ್ನು ಮರೆಯಬೇಡಿ. ಶುಭ ಸಂಖ್ಯೆ - 7. ತುಲಾ: ಈ ಸಂವತ್ಸರದಲ್ಲಿ ಎರಡು ಗ್ರಹಣಗಳು ಬಂದುಹೋಗಿವೆ. ದೀಪಾವಳಿಯಂದು ಬಂದ ಗ್ರಹಣವು ನಿಮಗೆ ಶುಭವಾಗಿ ಪರಿಣಮಿಸಿ ಅದರ ಫಲವನ್ನು ಈಗ ನಿರೀಕ್ಷಿಸಬಹುದು. ಚತುರ್ಥದಲ್ಲಿ ಶನಿಯು ಸ್ವಕ್ಷೇತ್ರ ಪಂಚಮಕ್ಕೆ ಬಂದು, ಮೇಷದಲ್ಲಿ ಗುರುವು ಸಪ್ತಮಕ್ಕೆ ಬರುವುದು ಶುಭ ಸಂಕೇತವಾಗಿದೆ. ನಿಮ್ಮ ಕಾರ್ಯಾಚರಣೆಯಲ್ಲಿ ಛಲದಿಂದ ಕಾರ್ಯವನ್ನು ಸಾಧಿಸಿ ಕೀರ್ತಿಯನ್ನು ಸಂಪಾದಿಸುವ ಕಾಲವು ನಿಮಗೆ ಒದಗಿ ಬಂದಿದೆ. ಪಂಚಮ ಶನಿಯು ಸ್ವಕ್ಚೇತ್ರದಲ್ಲಿರುವುದರಿಂದ ಚಿಂತೆ ಮಾಡುವ ಅಗತ್ಯ ಇಲ್ಲ. ಆದರೆ, ರಾಶ್ಯಾಧಿಪತಿ ಶುಕ್ರನಿಗೆ ಚಾಮುಂಡೇಶ್ವರಿಯನ್ನು ಪೂಜಿಸಿ ಖಡ್ಗಮಾಲಾ ಸ್ತೋತ್ತವನ್ನು ಪಾರಾಯಣ ಮಾಡಿ ಕಾರ್ಯಕ್ಷೇತ್ರದಲ್ಲಿ ಕೀರ್ತಿಯನ್ನು, ನಿಧಿಯನ್ನು ಪಡೆಯಬಹುದು. ಶುಭ ಸಂಖ್ಯೆ - 4.

ವೃಶ್ಚಿಕ: ಬಂದದ್ದೆಲ್ಲ ಬರಲಿ, ಗೋವಿಂದ ನಾಮ ಸ್ಮರಣೆಯೇ ನಿಮ್ಮನ್ನು, ನಿಮ್ಮ ಜೀವನಶೈಲಿಯಲ್ಲಿ ಉತ್ತುಂಗಕ್ಕೆ ಕೊಂಡೊಯ್ದು ಬಾರದಿರುವ ಹಣವನ್ನು ಬರುವಂತೆ ಮಾಡಿ ನಿಮ್ಮ ಸಾಲ ತೀರಿಸಿ, ನಿಮ್ಮ ಕೈಯಲ್ಲಿ ಯಥೇಚ್ಚವಾದ ಹಣ ನಿಲ್ಲುವ ಕಾಲ ಬಂದಿದೆ. ಮೂರರ ಶನಿ ನಾಲ್ಕಕ್ಕೆ ಜರುಗಿ ಐದನೇ ಮನೆಯ ಗುರುವು ಷಷ್ಠಕ್ಕೆ ಬಂದರೂ, ರಾಶ್ಯಾಧಿಪತಿ ಷಣ್ಮುಖ ದೇವರ ಪ್ರಾರ್ಥನೆಯಿಂದ ಏನನ್ನು ಗಳಿಸಬಹುದೋ, ಉಳಿಸಬಹುದು. ಲಕ್ಷ್ಮೀನರಸಿಂಹನನ್ನು ಆರಾಧಿಸಿ. ಕೇತುವಿನ ಪ್ರಿತ್ಯರ್ಥಕ್ಕಾಗಿ ಇಡಗುಂಜಿಗೆ ಹೋಗಿ ಗಣೇಶನಿಗೆ ವಿನಾಯಕ ಶಾಂತಿಯನ್ನು ಮಾಡಿಬಂದಲ್ಲಿ ಸಮಯವು ಇನ್ನೂ ಒಳ್ಳೆಯ ಫಲ ಕೊಡುತ್ತದೆ.

ಶುಭ ಸಂಖ್ಯೆ - 8.

ಧನುಸ್ಸು: ಏಳೂವರೆ ವರ್ಷದ ಶನಿ ಸಂಚಾರದಿಂದ ಹೊರಗೆ ಬರುವ ಕಾಲವು ಸನ್ನಿಹಿತವಾಗಿದೆ. ಜ.17ರಿಂದ ಅಡ್ಡಿ ಆತಂಕ ಇಲ್ಲದ ರಾಜಮಾರ್ಗದಲ್ಲಿ ನೀವು ನಡೆಯುವ ಕಾಲವಾಗಿರುತ್ತದೆ. ಏ.21ರಿಂದ ಪಂಚಮಕ್ಕೆ ಗುರು ಬಂದು ನಿಮ್ಮನ್ನು ರಕ್ಷಿಸಿ, ನಿಮ್ಮ ಇಷ್ಟಾರ್ಥಗಳನ್ನು ಪೂರೈಸಿ ರಾಜಯೋಗವನ್ನು, ವಿಪರೀತ ಧನವನ್ನು, ಶಾಂತಿಯನ್ನು, ಜನಾನುರಾಗವನ್ನು ಕೊಟ್ಟು ನಿಮ್ಮ ಮನಸ್ಸು ಸಂತೋಷದಿಂದ ಸ್ವತಂತ್ರವಾಗಿ ಹಾರಾಡುವಂತೆ ಮಾಡುವವನೇ ಗುರು ಹಾಗೂ ತೃತೀಯ ಶನಿ ಆಗಿದ್ದು ಏನನ್ನಾದರೂ ಪಡೆಯಬಹುದು. ಈ ರಾಶಿಯವರು ಶ್ರೀರಾಮಚಂದ್ರನು ದಶರಥನನ್ನು ಪೂಜಿಸಿದಂತೆ ನಿಮ್ಮ ತಂದೆ-ತಾಯಿಗಳ ಪಾದಧೂಳಿಯನ್ನು ಶಿರಕ್ಕೆ ಧರಿಸಿದರೆ ರಾಜಯೋಗವು ನಿಮ್ಮ ಮನೆಯ ಬಾಗಿಲಿಗೆ ಬರುತ್ತದೆ. ದಕ್ಷಿಣಾಮೂರ್ತಿಯನ್ನು ಆರಾಧಿಸಿ. ಕುಲದೇವರನ್ನು, ದುರ್ಗಾಸಪ್ತಸತಿ ಪಾರಾಯಣ ಮಾಡಿಸಿ ಪುಣ್ಯವನ್ನು ವೃದ್ಧಿಸಿಕೊಳ್ಳಿರಿ.

ಶುಭ ಸಂಖ್ಯೆ - 8.

ಮಕರ: ಒಟ್ಟಾರೆ ಏಳೂವರೆ ವರ್ಷದ ಶನಿ ಸಂಚಾರದಲ್ಲಿ 5ನೇ ಸಂಚಾರವನ್ನು ಜ.17ರಂದು ಪೂರೈಸಿ ಕಡೇ ಸುತ್ತಿನ ಎರಡೂವರೆ ವರ್ಷದ ಕಾಲಕ್ಕೆ ಕುಂಭಕ್ಕೆ ಶನಿ ಬರುತ್ತಾನೆ. ಸ್ವಕ್ಚೇತ್ರವನ್ನು ಸೇರುವುದರಿಂದ ಭಯ-ಭೀತಿ ಬೇಡ. ದುಃಖ ನಾಶಗೊಳಿಸಿ ಕಷ್ಟ, ಕತ್ತಲೆ ನೀಗಿಸಿ ಬೆಳಕನ್ನು ತೋರಿ ದೇವರೇ ನಿಮ್ಮನ್ನು ಮುಂದೆ ಕೊಂಡೊಯ್ಯುತ್ತಾನೆ. ಗುರುವು 2ನೇ ಮನೆಯಲ್ಲಿದ್ದು ನಿಮ್ಮ ಶ್ರೇಯೋಭಿವೃದ್ಧಿಯನ್ನು ಹೆಚ್ಚಿಸುತ್ತಾನೆ. ಆದರೆ, ಶನಿಯು ಕಡೆಯ ಸುತ್ತಿನಲ್ಲಿರುವುದರಿಂದ ಧೈವಬಲ ವೃದ್ಧಿಸಿಕೊಂಡೇ ತಾವು ಸಾಗಬೇಕು. ತುಮಕೂರು ಪಾವಗಡ ಹತ್ತಿರವಿರುವ ಶನೈಶ್ಚರ ದೇವಸ್ಥಾನಕ್ಕೆ ತೆರಳಿ ಪೂಜೆ ಮಾಡಿಸಿಕೊಂಡು ಬನ್ನಿ. ಅದೇ ಪೂಜೆಯನ್ನು ಮುಂದುವರಿಸಿಕೊಂಡು ಬಂದಲ್ಲಿ ಶನಿ ಸಂತೃಪ್ತಿಗೊಂಡು ಬೇಕಾದ್ದನ್ನು ನೀಡುತ್ತಾನೆ. ಪ್ರತಿ ಮಾಸದಲ್ಲಿ ಅಮಾವ್ಯಾಸೆ ದಿನ ಎಳ್ಳುಬೆಲ್ಲ, ಎಣ್ಣೆಯನ್ನು ದಕ್ಷಿಣೆಯೊಂದಿಗೆ ಶಿವಾಲಯಕ್ಕೆ ಸಮರ್ಪಿಸಿ.

ಶುಭ ಸಂಖ್ಯೆ - 10

ಕುಂಭ: ಮಕರ ಕುಂಭಾಪತಿಯು ದ್ವಾದಶ ಬಿಟ್ಟು ಜನ್ಮವನ್ನು ಸೇರಿ ನಿಮ್ಮ ಜೀವನಶೈಲಿಯನ್ನು ತಿದ್ದಿ ನಿಮಗೆ ಸೂಕ್ತವಾದ ದಾರಿಯನ್ನು ತೋರಿಸುವುದರಲ್ಲಿ ಸಂದೇಹವೇ ಇಲ್ಲ. ಗುರುವು ತೃತೀಯದಲ್ಲಿದ್ದು, ಏ.21ರಿಂದ ತೃತೀಯಕ್ಕೆ ಬಂದ ಗುರು ಅಶುಭನಲ್ಲ. ಎರಡನೇ ಮನೆಯಲ್ಲಿರುವಾಗ ಎಲ್ಲ ಸುಖ-ಸಂಪತ್ತನ್ನು ಕೊಟ್ಟು ರಕ್ಷಿಸುತ್ತಾನೆ. ಜನ್ಮ ಶನಿಯು ಕೆಲ ಆರೋಗ್ಯ ಸಮಸ್ಯೆಯನ್ನು ತಂದು ಧನವು ಸರಿಯಾದ ಸಮಯಕ್ಕೆ ಬಾರದೆ ನಿರಾಶೆಗೊಳಿಸುವುದು. ಧೈರ್ಯ ಸಂಕಲ್ಪದಲ್ಲಿ ಮುಂದೆ ಅದು ಒಳ್ಳೆಯ ಫಲವನ್ನೇ ನೀಡುತ್ತದೆ. ದುರ್ಗಾದೇವಿ ಪೂಜೆಯನ್ನು ಶುದ್ಧ ಅಷ್ಟಮಿಯಂದು ಮಾಡಿದರೆ ನಿಂದನೆ, ಅಪವಾದ ದೂರವಾಗಿ, ಭವಸಾಗರವನ್ನು ದಾಟಿಸಲು ಅಷ್ಟದಶಭುಜ ದುರ್ಗೆ ಹರಸುತ್ತಾಳೆ. ಶನಿ ಸಂಚಾರ ಮುಂದೆ ಹೋಗಿ ಶುಕ್ರವಾರದಂದು ತುಪ್ಪದಲ್ಲಿ ದೇವರಿಗೆ ಆರತಿ ಮಾಡಿ ರಕ್ಷೆಯನ್ನು ಮನೆಮಂದಿಗೆಲ್ಲಾ ಇಟ್ಟು ಸುಖ-ಶಾಂತಿಯನ್ನು ಪಡೆದುಕೊಳ್ಳಬಹುದು.

ಶುಭ ಸಂಖ್ಯೆ - 5

ಮೀನ: ಸ್ವಕ್ಷೇತ್ರದವರಿಗೆ ಗುರುವು ಅಶುಭವನ್ನು ಉಂಟುಮಾಡುವುದಿಲ್ಲ. ಏಕಾದಶ ಶನಿಯು ದ್ವಾದಶಕ್ಕೆ ಬಂದು ಏಳೂವರೆ ವರ್ಷದ ಸಂಚಾರವು ಆರಂಭವಾಗುತ್ತದೆ. ದ್ವಿತೀಯ ಗುರುವು ಶನಿ ಗ್ರಹದ ಅಶುಭವನ್ನು ತಡೆದು ನಿಮ್ಮನ್ನು ರಕ್ಷಿಸಿ ಅನಂತವಾದ ಸುಖ-ಶಾಂತಿಯನ್ನು ಕೊಡುವುದರಲ್ಲಿ ಸಂಶಯವೇ ಇಲ್ಲ. ಮನುಷ್ಯನು ದುಃಖವನ್ನು ದೂರವಿಟ್ಟರೆ ಸುಖದ ಹಾದಿ ತಾನಾಗಿಯೇ ಕಾಣುತ್ತದೆ. ಮಾಡಿದ ಪಾಪ ಪುಣ್ಯಗಳಿಂದ ಕೆರೆ ಬತ್ತಿ ಹೋಗಬಹುದು. ಆದರೆ, ಕಾರಣವಿಲ್ಲದೆ ದುಃಖಿಸಿದರೆ ಅನರ್ಥಕ್ಕೆ ಕಾರಣವಾಗುತ್ತದೆ. ಗುರುವೊಬ್ಬನೇ ನಿಮಗೆ ಶೇ.70 ಶುಭ ನೀಡುತ್ತಾನೆ. ಹೀಗಿರುವಾಗ ಭಯ ಬೇಡ. ವಿಚಾರವನ್ನು, ವಿಷಯವನ್ನು ಸದ್ಗುರು ಪಾದದಲ್ಲಿ ಇರಿಸಿ ಮುಂದೆ ಸಾಗಿ. ಕೊಲ್ಲೂರು ಮೂಕಾಂಬಿಕೆಯನ್ನು ಪೂಜಿಸಿ. ಶ್ರೀಕ್ಷೇತ್ರ ಸಾಲಿಗ್ರಾಮದ ಗುರು ನರಸಿಂಹನನ್ನು ಆರಾಧಿಸಿ ಶುಭವನ್ನು ಪಡೆದು ಶಿವಶಾಸ್ತ್ರವನ್ನು ಪಾರಾಯಣ ಮಾಡಿ ಮನೆದೇವರಿಗೆ, ರಾಷ್ಯಾಭಿಷೇಕ ಶಾಂತಿ ಮಾಡಿಸಿದರೆ ಸುಖವಾಗಿ ಇರಬಹುದು.

ಶುಭ ಸಂಖ್ಯೆ - 6.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net