ಚಿತ್ರದುರ್ಗದ ಭೈರಾಪುರ ಸೇತುವೆ ಬಳಿ ಹಳೇ ಕಾಲದ ನಾಣ್ಯಗಳು ಪತ್ತೆ!

coinss chitradurga
Published on

ಚಿತ್ರದುರ್ಗ: ಜಿಲ್ಲೆಯ ಮೊಳಕಾಲ್ಮೂರು ತಾಲೂಕಿ ಭೈರಾಪುರ ಬಳಿ ಹಳೇ ಕಾಲದ್ದೆನ್ನಲಾದ ನಾಣ್ಯಗಳು ಪತ್ತೆಯಾಗಿವೆ.

coinss chitradurga

ಹದಿನೈದು ವರ್ಷದ ಹಿಂದೆ ಈ ಸೇತುವೆ ನಿರ್ಮಾಣ ಆಗಿದೆ. ಸೇತುವೆ ನಿರ್ಮಾಣಕ್ಕೆ ಅರಣ್ಯ ಭಾಗದಿಂದ ಮಣ್ಣು ತರಲಾಗಿತ್ತು ಎನ್ನಲಾಗಿದೆ. ಬಹುತೇಕ ನಾಣ್ಯ ಛತ್ರಪತಿ ಶಿವಾಜಿಯ ಮುಖಚಿತ್ರ ಹೊಂದಿವೆ. ಹಿಂಬದಿ ಕತ್ತಿ-ಗುರಾಣಿ ಚಿತ್ರವಿದ್ದು 1674 ಎಂದು ದಾಖಲಾಗಿದೆ.

ಕುರಿಗಾಹಿಗಳು ಮೇಯಿಸಲು ಹೋಗಿದ್ದಾಗ ಸೇತುವೆ ಕೆಳಭಾಗದಲ್ಲಿ ನಾಣ್ಯಗಳು ಸಿಕ್ಕಿವೆ. ತಾಮ್ರದ ಮಾದರಿಯ ಐವತ್ತಕ್ಕೂ ಹೆಚ್ಚು ನಾಣ್ಯಗಳು ಪತ್ತೆಯಾಗಿವೆ. ಸೇತುವೆ ಬಳಿ‌ ಸಿಕ್ಕ ನಾಣ್ಯಗಳನ್ನು ಮನೆಗೆ ಜನರು ತೆಗೆದುಕೊಂಡು ಹೋಗಿದ್ದಾರೆ. ಅಧಿಕಾರಿಗಳು, ಸಂಶೋಧಕರು ಪರಿಶೀಲನೆ ನಡೆಸಲಿ ಎಂದು ಗ್ರಾಮದ ಚಿತ್ತಯ್ಯ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net