ದೇವರ ಮೈ ಮೇಲಿದ್ದ ಸರ, ತಾಳಿ ಚೈನ್ ಕದ್ದು ಖದೀಮರು ಎಸ್ಕೇಪ್​​

Yadgiri
Published on

ಯಾದಗಿರಿ: ದೇವರ ಮೈಮೇಲಿದ್ದ ಆಭರಣಗಳು ಕಳ್ಳತನ ಮಾಡಿ ಖದೀಮರು ಸ್ಥಳದಿಂದ ಪರಾರಿಯಾಗಿರುವ ಘಟನೆ ಯಾದಗಿರಿ ಜಿಲ್ಲೆಯ ಗುರುಮಠಕಲ್‌ ತಾಲೂಕಿನ ಕಾಳಬೆಳಗುಂದಿ ಗ್ರಾಮದಲ್ಲಿ ನಡೆದಿದೆ.

ಕಾಳಬೆಳಗುಂದಿ ಗ್ರಾಮದ ಭದ್ರಕಾಳಿ ದೇವಸ್ಥಾನದಲ್ಲಿ ರಾತ್ರಿ ವೇಳೆ ಕಳ್ಳರ ಕೈಚಳಕ ತೋರಿಸಿದ್ದಾರೆ. ದೇವರ ಮೈಮೇಲಿದ್ದ ಆಭರಣಗಳು ಕಳ್ಳತನವಾಗಿದೆ. ದೇವರ ಮೈಮೇಲಿದ್ದ 12 ಗ್ರಾಂ ಚಿನ್ನದ ಬೋರಮಳ ಸರ ಹಾಗೂ ತಾಳಿ ಚೈನ್, 45 ಗ್ರಾಂ ಬೆಳ್ಳಿಯ ಲೋಟ ಹಾಗೂ ಆರತಿ ತಟ್ಟೆ ಕಳ್ಳತನವಾಗಿದೆ.

Yadgiri
Yadgiri

ನಿನ್ನೆ ರಾತ್ರಿ ವೇಳೆ ಕಳ್ಳರು ಕೈಚಳಕ ತೋರಿರುವುದನ್ನು ಗಮನಿಸಿ ಗ್ರಾಮಸ್ಥರು ಪೊಲೀಸರ ಬಳಿ ದೂರು ನೀಡಿದ್ದಾರೆ. ಸ್ಥಳಕ್ಕೆ ಸೈದಾಪುರ ಠಾಣೆಯ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಸೈದಾಪುರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net