ಸಿಎನ್​ಜಿ ಬೆಲೆಯಲ್ಲಿ ದಿಢೀರ್​ ಏರಿಕೆ! ಇದೊಂದು ನಗರದಲ್ಲಿ ಮಾತ್ರ ಹಿಂದಿನ ಬೆಲೆಯೇ ಮುಂದುವರಿಯಲಿದೆ| CNG Price Hike

ವಿಜಯವಾಣಿ - 2024-11-25T195953.131
Published on

ನವದೆಹಲಿ: ದೇಶದಲ್ಲಿ ಸಿಎನ್​ಜಿ ಗ್ಯಾಸ್​ ದರ ಏರಿಕೆಯಾಗಿದ್ದು, ಕೆಜಿಗೆ 2 ರೂ.ನಂತೆ ಹೆಚ್ಚಾಗಿದೆ. ಶೀಘ್ರದಲ್ಲೇ ವಿಧಾನಸಭಾ ಚುನಾವಣೆ ನಡೆಯಲಿರುವ ಹಿನ್ನಲೆ ದೆಹಲಿಯಲ್ಲಿ ಬೆಲೆ ಏರಿಸಿಲ್ಲ. ಆದರೆ, ದೆಹಲಿಯ ನೆರೆಯ ನಗರಗಳಾದ ನೋಯ್ಡಾ, ಗ್ರೇಟರ್ ನೋಯ್ಡಾ, ಘಾಜಿಯಾಬಾದ್ ಮತ್ತು ಗುರುಗ್ರಾಮ್​ನಲ್ಲಿ ದರವನ್ನು ಹೆಚ್ಚಿಸಲಾಗಿದೆ. ಮುಂಬೈ ಮತ್ತು ದೇಶದ ಇತರ ನಗರಗಳಲ್ಲಿ ಸಿಎನ್‌ಜಿ ಬೆಲೆಯನ್ನು ಏರಿಸಿರುವ (CNG Price) ಕಂಪನಿಗಳು, ದಿಢೀರ್​ ಏರಿಕೆ ಹಿಂದಿರುವ ಕಾರಣವನ್ನು ಇನ್ನೂ ಸ್ಪಷ್ಟಪಡಿಸಿಲ್ಲ.

ಕಳೆದ ಎರಡು ತಿಂಗಳಿನಿಂದ ಸಿಎನ್​ಜಿ ಬೆಲೆಯಲ್ಲಿ ಯಾವುದೇ ಬದಲಾವಣೆ ಇರಲಿಲ್ಲ. ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಬೆಲೆ ಏರಿಕೆ ಜಾರಿಗೆ ಬಂದಿದೆ. ಇದರೊಂದಿಗೆ ಮುಂಬೈನಲ್ಲಿ ಸಿಎನ್​ಜಿ ದರ ಕೆಜಿಗೆ 77 ರೂ.ಗೆ ಏರಿಕೆಗೊಂಡಿದೆ. ಪ್ರಸ್ತುತ ದೆಹಲಿಯ ನೆರೆಯ ನಗರಗಳಾದ ನೋಯ್ಡಾ, ಗ್ರೇಟರ್ ನೋಯ್ಡಾ ಮತ್ತು ಗಾಜಿಯಾಬಾದ್‌ನಲ್ಲಿ ಹೊಸ ಬೆಲೆಯು 81.70 ರೂ.ಗೆ ಬಂದು ನಿಂತಿದೆ.

ಹರಿಯಾಣದ ಗುರುಗ್ರಾಮ್‌ನಲ್ಲಿ ಸಿಎನ್‌ಜಿ ಪ್ರತಿ ಕೆಜಿಗೆ 82.12 ರೂ.ಗೆ ಏರಿಕೆಯಾಗಿದೆ. ಆದರೆ. ದೆಹಲಿಯಲ್ಲಿ ಈ ಹಿಂದಿದ್ದ 75.09 ರೂ.ನಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎಂಬುದು ಗಮನಾರ್ಹ. ಫೆಬ್ರವರಿಯಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯ ನಂತರ ದೆಹಲಿಯಲ್ಲಿ ಸಿಎನ್‌ಜಿ ಬೆಲೆಗಳು ಏರಿಕೆಯಾಗುವ ಸಾಧ್ಯತೆಗಳಿವೆ ಎಂದು ವರದಿ ಉಲ್ಲೇಖಿಸಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net