ಸುಬ್ರಹ್ಮಣ್ಯ: ಕಸ್ತೂರಿರಂಗನ್ ವರದಿಯ ಹಿನ್ನೆಲೆಯಲ್ಲಿ ಈಗಾಗಲೇ ಹಲವು ಗ್ರಾಮಗಳ ಹಕ್ಕುಪತ್ರ ರದ್ದತಿಗೆ ಆದೇಶವಾಗಿದೆ. ಆದುದರಿಂದ ವಿಷಯ ಗಂಭೀರವಾಗಿದ್ದು ಜನತೆ ಎಚ್ಚೆತ್ತುಕೊಳ್ಳಬೇಕು. ಇದು ಎಚ್ಚರಿಕೆಯ ಕರೆಘಂಟೆ ಎಂದು ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಸಂಚಾಲಕ ಕಿಶೋರ್ ಶಿರಾಡಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸುಳ್ಯ, ಕಡಬ, ಬೆಳ್ತಂಗಡಿ ತಾಲೂಕಿನವರು ಮೊದಲು ತೊಂದರೆಗೆ ಒಳಗಾಗಲಿದ್ದಾರೆ. ಹಕ್ಕುಪತ್ರ ರದ್ದತಿಗೆ ಇಲಾಖೆಗಳಿಂದ ಆದೇಶವಾಗಿದ್ದು ಇದನ್ನು ತಿಳಿದುಕೊಂಡವರು, ಮುಂದೆ ತೊಂದರೆಗೆ ಒಳಗಾಗುವವರು ಸುಬ್ರಹ್ಮಣ್ಯ ಐನೆಕಿದು ಬ್ಯಾಂಕ್ ಸಭಾಂಗಣದಲ್ಲಿ ನ.28ರಂದು ನಡೆಯಲಿರುವ ಸಭೆಯಲ್ಲಿ ಪಾಲ್ಗೊಳ್ಳಬೇಕು. ಪ್ರತಿ ಬೂತ್‌ನಲ್ಲಿ ರೈತ ಜಾಗೃತಿಯ ರೂಪುರೇಷೆ ಸಭೆಯಲ್ಲಿ ತಯಾರಿಸಲಾಗುವುದು ಎಂದರು.
ಗಡಿ ಗುರುತು ಮಾಡಬೇಕು. ಅಲ್ಲದೆ ಜಂಟಿ ಸರ್ವೇ ನಡೆಸಬೇಕು ಎಂದು ಮನವಿ ಮಾಡಿದ್ದೇವೆ. ಆದರೆ ಮತ್ತೊಂದು ಕಡೆಯಿಂದ ಸಾವಿರ ಹಕ್ಕುಪತ್ರ ರದ್ದು ಮಾಡಬೇಕು ಎಂದು ಆದೇಶವಾಗಿದೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ. ಇದನ್ನು ತೀವ್ರವಾಗಿ ವಿರೋಧಿಸಲು ರೈತ ಜಾಗೃತಿ ಮಾಡಲು ಉದ್ದೇಶಿಸಲಾಗಿದೆ. ಬೂತ್‌ಮಟ್ಟದಲ್ಲಿ ರೈತ ಜಾಗೃತಿ ಆಂದೋಲನ ನಡೆಸಲಿದ್ದೇವೆ. ಪ್ರತಿ ಬೂತ್‌ನಲ್ಲಿ ಆಂದೋಲನ ನಡೆಯಲಿದೆ. ಜನರು ಜಾಗೃತರಾಗಬೇಕು. ಇನ್ನೂ ಜನತೆ ಸುಮ್ಮನೆ ಕೂತರೆ ಸಂಕಷ್ಟ ಎದುರಾಗುವುದು ಖಂಡಿತ ಎಂದರು.
ದಾಮೋದರ ಗುಂಡ್ಯ, ಚಂದ್ರಶೇಖರ ಬಾಳುಗೋಡು, ಜಯಪ್ರಕಾಶ್ ಕೂಜುಗೋಡು, ಅಚ್ಚುತ ಗೌಡ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.