ಇಂಥಾ ಕೃತ್ಯ ಹಿಂದೆಂದೂ ನಾನು ನೋಡಿಯೇ ಇಲ್ಲ: ಸಚಿವರಿಗೆ ಎಚ್ಚರಿಕೆ ಕೊಟ್ಟ ಸಿಎಂ ಹೇಳಿದ್ದಿಷ್ಟು

Untitled design - 2024-06-20T172839.544 (1)
Published on

ಬೆಂಗಳೂರು: ಇಂದು ರಾಜ್ಯ ಸಂಪುಟ ಸಭೆಯಲ್ಲಿ ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ನಟ ದರ್ಶನ್ ಮತ್ತು ಇತರೆ ಆರೋಪಿಗಳ ವಿಚಾರ ಬಲು ಜೋರಾಗಿ ಸದ್ದು ಮಾಡಿದ್ದು, ಇಂತಹ ಕ್ರೌರ್ಯವನ್ನು ಹಿಂದೆಂದೂ ನಾನು ನೋಡಿರಲಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಈ ವೇಳೆ ಸಭೆಗೆ ಹಾಜರಾದ ಸಚಿವರಿಗೆ ಮುಖ್ಯಮಂತ್ರಿಗಳು ಎಚ್ಚರಿಕೆಯ ಸಂದೇಶ ಕೂಡ ರವಾನಿಸಿದ್ದಾರೆ.

ಸಚಿವ ಸಂಪುಟ ಸಭೆ ನಡೆಯುವ ಮುನ್ನವೇ ಸಚಿವರಿಗೆ ತಾಕೀತು ಮಾಡಿದ ಸಿಎಂ, "ಇಂತಹ ಪ್ರಕರಣ ಕಂಡು ಭಾರೀ ಅಚ್ಚರಿಗೆ ಒಳಗಾಗಿದ್ದೇನೆ. ಇಂಥಾ ಕೃತ್ಯ ಹಿಂದೆಂದೂ ನೋಡಿಯೇ ಇರಲಿಲ್ಲ. ಈ ಪ್ರಕರಣದ ಬಗ್ಗೆ ಶಾಸಕರು ಅಥವಾ ಸಚಿವರು, ಯಾರೇ ಆಗಲಿ ತುಟಿ ಬಿಚ್ಚಬೇಡಿ. ಪರ-ವಿರೋಧದ ಚರ್ಚೆಗಳು ಬೇಡ" ಎಂದು ಸಚಿವರಿಗೆ ಎಚ್ಚರಿಕೆ ಸಂದೇಶ ಕೊಟ್ಟಿದ್ದಾರೆ.

ಸಿಎಂ ಆದೇಶಿಸುತ್ತಿದ್ದಂತೆ ಎಚ್ಚೆತ್ತುಕೊಂಡ ಸಚಿವರು ಪ್ರಕರಣದ ಬಗ್ಗೆ ತುಟಿಕ್-ಪಿಟಿಕ್ ಎನ್ನದೆ ಸುಮ್ಮನೆ ಕುಳಿತು, ಸಿದ್ದರಾಮಯ್ಯ ಅವರ ಮುಂದಿನ ಮಾತುಗಳನ್ನು ಆಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net