ನವದೆಹಲಿ: ಜೂ. 01ರಿಂದ ಪ್ರಾರಂಭವಾದ ಐಸಿಸಿ ಟಿ20 ವಿಶ್ವಕಪ್ ಪಂದ್ಯವಾಳಿಗಳಲ್ಲಿ ಭಾರೀ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದ ತಂಡಗಳೇ ಅತ್ಯಂತ ಕಳಪೆ ಪ್ರದರ್ಶನ ತೋರುವ ಮೂಲಕ ಕ್ರಿಕೆಟ್ ಅಭಿಮಾನಿಗಳ ವ್ಯಾಪಕ ಟೀಕೆಗಳಿಗೆ ಗುರಿಯಾಗಿವೆ. ಈ ಪೈಕಿ ಬಾಬರ್ ಆಜಂ ನೇತೃತ್ವದ ಪಾಕಿಸ್ತಾನ ತಂಡ ಅಗ್ರಸ್ಥಾನದಲ್ಲಿದೆ. ಈ ಬಾರಿಯ ವಿಶ್ವಕಪ್ ಟೂರ್ನಿಯಿಂದ ಅಧಿಕೃತವಾಗಿ ಹೊರಬಿದ್ದ ಪಾಕ್ಗೆ ಮಾಜಿ ಕ್ರಿಕೆಟಿಗರಿಂದ ವ್ಯಾಪಕ ಟೀಕೆಗಳು ಹರಿದುಬಂದಿವೆ.
ಇದನ್ನೂ ಓದಿ: ರೇಣುಕಸ್ವಾಮಿ ಹತ್ಯೆ ಕೇಸ್ನಲ್ಲಿ ಚಿಕ್ಕಣ್ಣನಿಗೂ ಢವಢವ ಶುರು; ಈ ನಟನಿಗೂ ನೋಟಿಸ್ ಕೊಡಲಿದ್ದಾರಂತೆ ಪೊಲೀಸರು
ಗ್ರೂಪ್ ಸ್ಟೇಜ್ ಟೂರ್ನಿಯಿಂದ ನಿರ್ಗಮಿಸಿರುವ ಪಾಕ್ಗೆ ಇತರೆ ದೇಶಗಳ ಮಾಜಿ ಕ್ರಿಕೆಟಿಗರಿಗಿಂತ ಪಾಕಿಸ್ತಾನದ ಮಾಜಿ ಆಟಗಾರರ ಟೀಕೆ, ಟಿಪ್ಪಣಿಗಳೇ ಹೆಚ್ಚಾಗಿವೆ. ಟಿ20 ವಿಶ್ವಕಪ್ನಲ್ಲಿ ಬಾಬರ್ ಆಜಂ ತಂಡ ನೀಡಿದ ಅತ್ಯಂತ ಕಳಪೆ ಪ್ರದರ್ಶನಕ್ಕೆ ಸಿಡಿಮಿಡಿಗೊಂಡಿದ್ದ ಮಾಜಿ ಕ್ಯಾಪ್ಟನ್ ಶಾಹೀದ್ ಆಫ್ರಿದಿ, ತಂಡದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ಇದೀಗ ಇದೇ ವಿಷಯವನ್ನು ಎತ್ತಿ ಹಿಡಿದ ಶೋಯಿಬ್ ಮಲಿಕ್ ಕೂಡ ಬಾಬರ್ ನಾಯಕತ್ವದಿಂದ ನಮಗೆ ಏನು ಪ್ರಯೋಜವಿಲ್ಲ ಎಂದಿದ್ದಾರೆ.
“ಟಿ20 ವಿಶ್ವಕಪ್ 2024ರ ಟೂರ್ನಿಯಲ್ಲಿ ಬಾಬರ್ ಆಜಂ ನೇತೃತ್ವದಲ್ಲಿ ಪಾಕಿಸ್ತಾನ ಸರಣಿ ಗೆಲುವನ್ನು ನೋಡಲೇ ಇಲ್ಲ. ಸೂಪರ್ 8 ಪ್ರವೇಶಿಸಲು ಕೂಡ ಪಾಕ್ ಇದೀಗ ವಿಫಲವಾಗಿದೆ. ಇದಕ್ಕೆ ಕಾರಣ, ಕಳೆದ ಪಂದ್ಯಗಳಲ್ಲಿ ಭಾರತ, ಯುಎಸ್ಎ ಸೇರಿದಂತೆ ಇತರೆ ತಂಡಗಳ ವಿರುದ್ಧ ಹೀನಾಯ ಸೋಲು. ಬಾಬರ್ ಉತ್ತಮ ಬ್ಯಾಟ್ಸ್ಮನ್. ಆದರೆ, ನಾಯಕನ ಸ್ಥಾನ ಅವರ ಅತ್ಯುತ್ತಮ ಪ್ರದರ್ಶನದ ಮೇಲೆ ಭಾರೀ ಒತ್ತಡ ಬೀರಿದೆ ಎಂಬುದು ನನ್ನ ಅನಿಸಿಕೆ” ಎಂದರು.
ಇದನ್ನೂ ಓದಿ: ಮೋದಿ ಪ್ರಧಾನಿಯಾಗಿ ಆಯ್ಕೆಯಾಗಿದ್ದಕ್ಕೆ ಉರುಳು ಸೇವೆ ಮಾಡಿ ಹರಕೆ ತೀರಿಸಿದ ಅಭಿಮಾನಿ
“ನನ್ನ ಪ್ರಕಾರ, ಬಾಬರ್ ಆಜಂ ತಕ್ಷಣ ತಮ್ಮ ಕ್ಯಾಪ್ಟನ್ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಅವರ ನಾಯಕತ್ವದಲ್ಲಿ ಉತ್ತಮ ಬೆಳವಣಿಗೆ ಇದ್ದರೆ, ನಾಯಕನಾಗಿಯೇ ಮುಂದುವರೆಯಲಿ. ಇಲ್ಲದೆ ಹೋದರೆ ಸ್ಥಾನ ತ್ಯಜಿಸಿ, ರನ್ ಗಳಿಸುವತ್ತ ಹೆಚ್ಚು ಗಮನ ಹರಿಸಲಿ” ಎಂದು ಮಲಿಕ್ ಹೇಳಿದ್ದಾರೆ,(ಏಜೆನ್ಸೀಸ್).
ಚಿತ್ರರಂಗದಲ್ಲಿ ‘ಸಾರಥಿ’ಗಿರುತ್ತ ಉಳಿವು? ಮುಂದಿನ ಚಿತ್ರಗಳ ಕಥೆಯೇನು? ಹೀಗಿದೆ ವರದಿ