

State Budget: ಇಂದು (ಮಾ.07) ಬಹುನಿರೀಕ್ಷಿತ ರಾಜ್ಯ ಬಜೆಟ್ (2025-26) ಆಯವ್ಯಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಲಿದ್ದಾರೆ. ಈ ಮೂಲಕ 16ನೇ ಬಜೆಟ್ ಮಂಡಿಸಿದ ದಾಖಲೆಯನ್ನೂ ಬರೆಯಲಿದ್ದಾರೆ. ಕಳೆದ ಬಾರಿಗಿಂತ ಈ ಬಾರಿಯ ಬಜೆಟ್ ಗಾತ್ರ ಶೇ.10ರಷ್ಟು ವೃದ್ಧಿಯೊಂದಿಗೆ 4.15 ಲಕ್ಷ ಕೋಟಿ ರೂ. ದಾಟುವ ಸಾಧ್ಯತೆಯಿದೆ.
15 ಬಜೆಟ್ ಮಂಡನೆ ಹೆಗ್ಗಳಿಕೆ ಹೊಂದಿರುವ ಸಿದ್ದರಾಮಯ್ಯ, ಇಂದು 16ನೇ ರಾಜ್ಯ ಬಜೆಟ್ ಮಂಡಿಸುವ ಮೂಲಕ ದಾಖಲೆ ಬರೆಯಲು ಸಜ್ಜಾಗಿದ್ದಾರೆ. ಕೇಂದ್ರ ಬಜೆಟ್ ನಂತರದಲ್ಲಿ ರಾಜ್ಯ ಬಜೆಟ್ ಮಂಡನೆಗೆ ಎದುರುನೋಡುತ್ತಿರುವ ರಾಜ್ಯದ ಜನತೆಗೆ ಏನೆಲ್ಲಾ ಸಿಗಲಿದೆ? ಎಂಬ ಪ್ರಶ್ನೆಗಳು ಸದ್ಯ ಚರ್ಚೆಯಲ್ಲಿವೆ.
ಗ್ಯಾರಂಟಿ ಯೋಜನೆ, ಮೆಟ್ರೋ, ವೈದ್ಯಕೀಯ ಕಾಲೇಜು, ಕೈಗಾರಿಕೆ, ಹೋಟೆಲ್ ಉದ್ಯಮ, ಉನ್ನತ ಶಿಕ್ಷಣ ಇಲಾಖೆ, ಹೈಟೆಕ್ ರಸ್ತೆಗಳ ಅಭಿವೃದ್ಧಿಗೆ ಬಜೆಟ್ನಲ್ಲಿ ಘೋಷಣೆಯಾಗುವ ಸಾಧ್ಯತೆಯಿದೆ ಎಂಬ ನಿರೀಕ್ಷೆಗಳು ಹೆಚ್ಚಿವೆ.