ಸಿಎಂ ಗೃಹ ಕಚೇರಿ ಕೃಷ್ಣಾದಲ್ಲೂ ಕರೊನಾ ಭೀತಿ!

CM Home Office Krishna
Published on

ಬೆಂಗಳೂರು: ರಾಜ್ಯ ಸರ್ಕಾರದ ಶಕ್ತಿಕೇಂದ್ರ ವಿಧಾನಸೌಧದ ಪಕ್ಕದಲ್ಲೇ ಇರುವ ವಿಕಾಸಸೌಧಕ್ಕೂ ಇತ್ತೀಚೆಗೆ ಕರೊನಾ ಕಾಲಿಟ್ಟು ತಲ್ಲಣ ಮೂಡಿಸಿತ್ತು. ಈಗ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲೂ ಮಹಾಮಾರಿ ಕೋವಿಡ್​19 ಸೋಂಕಿನ ಭೀತಿ ಆವರಿಸಿದೆ.

ಸಿಎಂ ಯಡಿಯೂರಪ್ಪ ಅವರ ಗೃಹ ಕಚೇರಿ ಕೃಷ್ಣಾದ ಮಹಿಳಾ ಸಿಬ್ಬಂದಿಯ ಪತಿಗೆ ಕರೊನಾ ಸೋಂಕು ಪಾಸಿಟಿವ್​ ಬಂದಿದೆ. ಹಾಗಾಗಿ ಯಾರೊಬ್ಬರಿಗೂ ಕೃಷ್ಣಾದೊಳಗೆ ಬರಲು ಅವಕಾಶ ಇಲ್ಲ. ಮುಖ್ಯಮಂತ್ರಿಯ ಎಲ್ಲ ಕಾರ್ಯಕ್ರಮಗಳೂ ವಿಧಾನಸೌಧಕ್ಕೆ ಶಿಪ್ಟ್ ಆಗಿದೆ. ಇದನ್ನೂ ಓದಿರಿ ಸಚಿವ ಸುರೇಶ್ ಕುಮಾರ್ ವಿರುದ್ಧ ಪೊಲೀಸ್ ಆಯುಕ್ತರಿಗೆ ದೂರು!

ಸುಮಾರು ದಿನಗಳಿಂದ ಕೃಷ್ಣಾದಲ್ಲಿ ಮಹಿಳಾ ಪೊಲೀಸ್​ ಪೇದೆ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಪತಿಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಕೃಷ್ಣಾ ಕಚೇರಿಯನ್ನು ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಲಾಗುತ್ತಿದೆ. ಇಂದು ಯಾರೊಬ್ಬರಿಗೂ ಕಚೇರಿ ಪ್ರವೇಶಕ್ಕೆ ಅವಕಾಶ ಇರುವುದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net