ವಿಕಾಸಸೌಧಕ್ಕೂ ಕಾಲಿಟ್ಟಿತು ಕರೊನಾ!

vikasasoudha
Published on

ಬೆಂಗಳೂರು: ರಾಜ್ಯದ ಎಲ್ಲ ಜಿಲ್ಲೆಗಳನ್ನೂ ನಡುಗಿಸಿರುವ ಕರೊನಾ ಸೋಂಕು ಈಗ ಸರ್ಕಾರದ ಶಕ್ತಿಕೇಂದ್ರವಾದ ವಿಧಾನಸೌಧದ ಪಕ್ಕದಲ್ಲೇ ಇರುವ ವಿಕಾಸಸೌಧಕ್ಕೂ ಕಾಲಿರಿಸಿದೆ.

ವಿಕಾಸಸೌಧದ ನೆಲಮಹಡಿಯಲ್ಲಿರುವ ಆಹಾರ ಇಲಾಖೆಯ ಕಚೇರಿಯಲ್ಲಿ ಕೆಲಸ ಮಾಡುವ ಸುಮಾರು 40 ವರ್ಷ ವಯಸ್ಸಿನ ಮಹಿಳಾ ಸಿಬ್ಬಂದಿಯೊಬ್ಬರಿಗೆ (ಸ್ಟೆನೋ) ಕರೊನಾ ಪಾಸಿಟಿವ್ ಬಂದಿದೆ ಎಂದು ವರದಿಯಾಗಿದೆ.

ಇದರಿಂದ ಆತಂಕಗೊಂಡಿರುವ ಸಚಿವಾಲಯದ ಸಿಬ್ಬಂದಿ ಇಂದು ಮುಖ್ಯ ಕಾರ‌್ಯದರ್ಶಿ ವಿಜಯಭಾಸ್ಕರ್ ಅವರನ್ನು ಭೇಟಿ ಮಾಡಿ, ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಸಚಿವಾಲಯದ ಉದ್ಯೋಗಿಗಳ ಆರೋಗ್ಯ ರಕ್ಷಣೆ ಕುರಿತು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net