

ದೆಹಲಿ: ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್ (CISCE), ಭಾರತೀಯ ಪ್ರೌಢ ಶಿಕ್ಷಣ ಪ್ರಮಾಣಪತ್ರ(ICSE) ಮತ್ತು ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ (ISC) ನಡೆಸಿದ 10 ಮತ್ತು 12ನೇ ತರಗತಿಯ ಪರೀಕ್ಷಾ ಫಲಿತಾಂಶಗಳನ್ನು ಭಾನುವಾರ ಮಧ್ಯಾಹ್ನ 3 ಗಂಟೆಗೆ ಪ್ರಕಟಿಸಲಿದೆ.
ವಿದ್ಯಾರ್ಥಿಗಳು http://cisce.org ಅಥವಾ http://results.cisce.org ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ತಮ್ಮ ಫಲಿತಾಂಶಗಳನ್ನು ಪರಿಶೀಲಿಸಬಹುದು. ಈ ವರ್ಷ ಸುಮಾರು 2.5 ಲಕ್ಷ ವಿದ್ಯಾರ್ಥಿಗಳು 10 ಮತ್ತು 12ನೇ ತರಗತಿಯ ಸಿಐಎಸ್ಸಿಯ ಪರೀಕ್ಷೆಗೆ ಹಾಜರಾಗಿದ್ದರು.
ಈ ಕೆಳಗಿನ ಹಂತಗಳನ್ನು ಅನುಸರಿಸಿ ಫಲಿತಾಂಶವನ್ನು ಪರೀಕ್ಷಿಸಬಹುದು:
ವಿದ್ಯಾರ್ಥಿಗಳು ಸಿಐಎಸ್ಸಿಯ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ, ಮುಖಪುಟದಲ್ಲಿ ಫಲಿತಾಂಶ ಟ್ಯಾಬ್ ಮೇಲೆ ಕ್ಲಿಕ್ ಮಾಡಿ. ನಂತರ ICSE ಅಥವಾ ISC ಸಂಬಂಧಿತ ಕೋರ್ಸ್ ಆಯ್ಕೆ ಮಾಡಿಕೊಳ್ಳಿ. ಈಗ ನಿಮ್ಮ ಯೂನಿಕ್ ಐಡಿ ನಮೂದಿಸಿ, ಫಲಿತಾಂಶ ಪಡೆಯಬಹುದು. (ಏಜೆನ್ಸೀಸ್)