ಸ್ನೇಹಿತರನ್ನು ರಕ್ಷಿಸಲು ಹೋಗಿ ಪ್ರಾಣಕಳೆದುಕೊಂಡ ಬಾಲಕರು

drown
Published on

ಗುಜರಾತ್​: ಸ್ನೇಹಿತರನ್ನು ರಕ್ಷಿಸಲು ಹೋಗಿ ತಮ್ಮ ಪ್ರಾಣವನ್ನೇ ಕಳೆದುಕೊಂಡ ಘಟನೆ ಗುಜರಾತ್​ನ ಬೋಟಾದ ಹತ್ತಿರ ನಡೆದಿದೆ. ಘಟನೆಯಲ್ಲಿ ಐವರು ಬಾಲಕರು ಮೃತಟ್ಟಿದ್ದು, ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ. 

ರಜೆಯಿದ್ದ ಕಾರಣ ಬಾಲಕರು ಕೃಷ್ಣಸಾಗರ ಸರೋವರದ ನೀರಿನಲ್ಲಿ ಈಜುವ ವೇಳೆ ಐವರ ಪೈಕಿ ಇಬ್ಬರು ಬಾಲಕರು ಮುಳುಗುತ್ತಿದ್ದರು. ಇದನ್ನು ಗಮನಿಸಿ ದಡದಲ್ಲಿದ್ದ ಮೂವರು ಸಹಾಯಕ್ಕೆಂದು ಕೂಡಲೇ ನೀರಿಗೆ ಇಳಿದಿದ್ದಾರೆ. ನೀರಿನಲ್ಲಿ ಸೆಳೆತ ಜಾಸ್ತಿಯಿದ್ದ ಕಾರಣ, ಸೆಳೆತಕ್ಕೆ ಸಿಲುಕಿ ಎಲ್ಲರೂ ಮೃತಪಟ್ಟಿದ್ದಾರೆ.

ಸ್ಥಳೀಯರ ಮೂಲಕ ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿ, ಕಾರ್ಯಾಚರಣೆ ನಡೆಸಿ ಐದು ಮೃತದೇಹಗಳನ್ನು ಹೊರತೆಗೆದಿದ್ದಾರೆ. ಮೃತ ಬಾಲಕರು 13 ರಿಂದ 17 ವರ್ಷದವರಾಗಿದ್ದು, ಸ್ಥಳೀಯ ನಿವಾಸಿಗಳು ಎಂದು ಪೊಲೀಸರು ತಿಳಿಸಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net