More

    ಕರ್ನಾಟಕ ಚುಣಾವಣಾ ರಣಕಣದಲ್ಲಿ ವರ್ಕೌಟ್ ಆಯಿತೇ ತಾರಾ ಪ್ರಚಾರ?

    ಈ ಬಾರಿಯ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ರಾಜಕೀಯ ನಾಯಕರಷ್ಟೇ ಸಿನಿಮಾ ನಾಯಕರೂ ಮಿಂಚಿದರು. ವಿವಿಧ ಪಕ್ಷಗಳ ಪರ, ನಾಯಕರ ಪರ ಸಿನಿಮಾ ನಟ, ನಟಿಯರು ಭರ್ಜರಿ ಪ್ರಚಾರ ನಡೆಸಿದ್ದರು. ಸಿನಿಮಾ ಸ್ಟಾರ್​ಗಳ ಬೆಂಬಲ ರಾಜಕೀಯ ನಾಯಕರಿಗೆ ಮತಬಲವಾಗಿ ಬದಲಾಗಿದೆಯಾ? ತಾರೆಯರು ಏನಂತಾರೆ?

    ಬಿಜೆಪಿ ಪರ ಅಖಾಡಕ್ಕಿಳಿದಿದ್ದ ಕಿಚ್ಚ ಸುದೀಪ್

    ರಾಜ್ಯ ವಿಧಾನಸಭಾ ಚುನಾವಣೆ ಘೋಷಣೆಯಾದ ಬೆನ್ನಲ್ಲೇ ನಟ ಕಿಚ್ಚ ಸುದೀಪ್ ಬಿಜೆಪಿ ಪರ ನಿಂತರು. ‘ಸಿಎಂ ಬಸವರಾಜ ಬೊಮ್ಮಾಯಿಯವರನ್ನು ನಾನು ಮಾಮ ಎಂದು ಕರೆಯುತ್ತೇನೆ. ಅವರಿಗಾಗಿ ಅವರ ಪರ ಪ್ರಚಾರ ಮಾಡಲಿದ್ದೇನೆ. ಆದರೆ, ನಾನು ಪಕ್ಷ ಸೇರಿಕೊಳ್ಳುತ್ತಿಲ್ಲ’ ಎಂದು ಸುದೀಪ್ ಹೇಳಿಕೊಂಡಿದ್ದರು. ಶಿಗ್ಗಾವಿಯಲ್ಲಿ ಬಸವರಾಜ ಬೊಮ್ಮಾಯಿಯವರ ಪರ , ವಿಜಯೇಂದ್ರ ಪರ ಶಿವಮೊಗ್ಗದಲ್ಲಿ, ಶಿಡ್ಲಘಟ್ಟದಲ್ಲಿ ಸೀಕಲ್ ರಾಮಚಂದ್ರ ಗೌಡ, ಹಾವೇರಿಯಲ್ಲಿ ಬಿ.ಸಿ ಪಾಟೀಲ್, ಚಿಕ್ಕಬಳ್ಳಾಪುರದಲ್ಲಿ ಡಾ. ಕೆ. ಸುಧಾಕರ್, ಚಾಮರಾಜನಗರದಲ್ಲಿ ವಿ. ಸೋಮಣ್ಣ ಪರ ಪ್ರಚಾರ ಮಾಡಿದ ಸುದೀಪ್ ಬೈಲಹೊಂಗಲ, ಚಿತ್ರದುರ್ಗ, ಗುಂಡ್ಲುಪೇಟೆ, ಹುಬ್ಬಳ್ಳಿ ಧಾರವಾಡ, ಬಾಗಲಕೋಟೆ, ಬೆಳಗಾವಿ ಸೇರಿದಂತೆ ಹಲವೆಡೆ ಬಿಜೆಪಿ ಅಭ್ಯರ್ಥಿಗಳ ಪರ ರೋಡ್ ಶೋ, ಪ್ರಚಾರದಲ್ಲಿ ಪಾಲ್ಗೊಂಡಿದ್ದರು. ಸುದೀಪ್ ಪ್ರಚಾರ ನಡೆಸಿದವರ ಪೈಕಿ ಗೆದ್ದವರಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಬಿ.ವೈ. ವಿಜಯೇಂದ್ರ ಪ್ರಮುಖರು.

    ಮತದಾನ ಜಾಗೃತಿಯಲ್ಲಿ ಮಿಂಚು

    ಈ ಬಾರಿಯ ಚುನಾವಣೆಯಲ್ಲಿ ಹಿಂದಿನ ಚುನಾವಣೆಗಳಿಗೆ ಹೋಲಿಸಿದರೆ ಅತಿಹೆಚ್ಚು ಮತದಾನವಾಗಿತ್ತು. ಅದಕ್ಕೆ ಸಿನಿಮಾ ತಾರೆಯರ ಕೊಡುಗೆಯೂ ಇದೆ ಎನ್ನಬಹುದು. ಏಕೆಂದರೆ ಹಲವು ದಿನಗಳಿಂದ ಮತದಾನದ ಪ್ರಾಮುಖ್ಯತೆಯ ಬಗ್ಗೆ ಜಾಗೃತಿ ಮೂಡಿಸುತ್ತಿದ್ದ ಸ್ಟಾರ್​ಗಳು, ಮೇ 10ರ ಮತದಾನದ ದಿನ ಮತ ಹಾಕಿದ ಬಳಿಕ ಸೆಲ್ಪೀ ಕ್ಲಿಕ್ಕಿಸಿಕೊಂಡು, ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದರು.

    ಕಾಂಗ್ರೆಸ್ ಜತೆ ನಿಂತ ಶಿವರಾಜಕುಮಾರ್

    ಅತ್ತ ಕಿಚ್ಚ ಸುದೀಪ್ ಕಮಲ ಹಿಡಿದರೆ, ಇತ್ತ ಶಿವರಾಜಕುಮಾರ್ ಕೈ ಪರ ನಿಂತರು. ವರುಣಾದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಪರ ಪ್ರಚಾರ ನಡೆಸಿದ ಅವರು, ಹುಬ್ಬಳ್ಳಿ ಧಾರವಾಡದಲ್ಲಿ ಜಗದೀಶ್ ಶೆಟ್ಟರ್, ಸೊರಬದಲ್ಲಿ ಮಧು ಬಂಗಾರಪ್ಪ, ಬೆಳಗಾವಿಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್, ತೀರ್ಥಹಳ್ಳಿಯಲ್ಲಿ ಕಿಮ್ಮನೆ ರತ್ನಾಕರ್ ಪರ ಪ್ರಚಾರ ಮಾಡಿದರು. ವರುಣಾದಲ್ಲಿ ಸಿದ್ದರಾಮಯ್ಯ ಪರ ಶಿವರಾಜಕುಮಾರ್ ಜತೆ ನಟಿ, ಮಾಜಿ ಸಂಸದೆ ರಮ್ಯಾ, ನಟ ದುನಿಯಾ ವಿಜಯ್ ಹಾಗೂ ನಿಶ್ವಿಕಾ ನಾಯ್ಡು ಸಹ ಪ್ರಚಾರ ನಡೆಸಿದ್ದರು. ಶಿವರಾಜಕುಮಾರ್ ಪ್ರಚಾರ ನಡೆಸಿದ ಅಭ್ಯರ್ಥಿಗಳ ಪೈಕಿ ಸಿದ್ದರಾಮಯ್ಯ, ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಮಧು ಬಂಗಾರಪ್ಪ ಆಯ್ಕೆಯಾಗಿದ್ದಾರೆ.

    ಧ್ರುವ ಸರ್ಜಾ ತಾರಾ ಪ್ರಚಾರ

    ನಟ ಧ್ರುವ ಸರ್ಜಾ ಮೂವರು ಬಿಜೆಪಿ ಹಾಗೂ ಒಬ್ಬ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ನಡೆಸಿದ್ದರು. ಪದ್ಮನಾಭನಗರದಲ್ಲಿ ಆರ್. ಅಶೋಕ್, ದಾಸರಹಳ್ಳಿಯಲ್ಲಿ ಎಸ್. ಮುನಿರಾಜು ಹಾಗೂ ಶಿಡ್ಲಘಟ್ಟದಲ್ಲಿ ಸೀಕಲ್ ರಾಮಚಂದ್ರಗೌಡ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಆರ್.ವಿ. ದೇವರಾಜ್ ಪರ ಧ್ರುವ ರೋಡ್ ಶೋ ಹಾಗೂ ಪ್ರಚಾರ ನಡೆಸಿದ್ದರು. ಧ್ರುವ ಸರ್ಜಾ ಪ್ರಚಾರ ನಡೆಸಿದವರಲ್ಲಿ ಆರ್. ಅಶೋಕ್ ಮತ್ತು ಎಸ್. ಮುನಿರಾಜು ಗೆಲುವಿನ ನಗೆ ಬೀರಿದ್ದಾರೆ.

    ನನಗೆ ರಾಕೇಶ್ ಸಿದ್ದರಾಮಯ್ಯ ಅವರು ಚಿಕ್ಕಪ್ಪ ಆಗಬೇಕು. ಹೀಗಾಗಿಯೇ ಸಿದ್ದರಾಮಯ್ಯ ಪರ ಪ್ರಚಾರಕ್ಕೆ ಹೋಗಿದ್ದೆ. ವರುಣಾ ಕ್ಷೇತ್ರದ ಜನ ಸಿದ್ದರಾಮಯ್ಯ ಅವರನ್ನು ಗೆಲ್ಲಿಸುತ್ತಾರೆ ಎಂಬ ನಂಬಿಕೆಯಿತ್ತು. ಈಗ ಅವರೇನು ಆಶ್ವಾಸನೆಗಳನ್ನು ನೀಡಿದ್ದಾರೆ, ಅದನ್ನೆಲ್ಲಾ ಈಡೇರಿಸುವ ವಿಶ್ವಾಸವಿದೆ. ಕರ್ನಾಟಕದಲ್ಲಿ ಹೊಸ ಬದಲಾವಣೆಗಳಾಗುವ ಭರವಸೆಯಿದೆ.

    | ನಿಶ್ವಿಕಾ ನಾಯ್ಡು ನಟಿ

    ಹರ್ಷಿಕಾ ಪೂಣಚ್ಚ ಹಲವೆಡೆ ಸಂಚಾರ

    ನಟಿ ಹರ್ಷಿಕಾ ಪೂಣಚ್ಚ ಮತ್ತು ನಟ ಭುವನ್ ಪೊನ್ನಣ್ಣ ಸಹ ಈ ಬಾರಿಯ ಚುನಾವಣೆಯಲ್ಲಿ ಸಕ್ರಿಯವಾಗಿ ವಿವಿಧ ಅಭ್ಯರ್ಥಿಗಳ ಪರ ಪ್ರಚಾರಕ್ಕಿಳಿದಿದ್ದರು. ಡಾ. ಕೆ. ಸುಧಾಕರ್ ಪರ ಚಿಕ್ಕಬಳ್ಳಾಪುರದಲ್ಲಿ ಹಾಗೂ ಅನಿಲ್ ಮೆಣಸಿನಕಾಯಿ ಪರ ಗದಗ್​ನಲ್ಲಿ ಪ್ರಚಾರ ನಡೆಸಿದ್ದರು. ಅವರು ಪ್ರಚಾರ ನಡೆಸಿದ ಎರಡೂ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಪರಾಭವಗೊಂಡಿದ್ದಾರೆ.

    ಕಾಂಗ್ರೆಸ್ಸಿಗೆ ಲಿಂಗಾಯತರ ಶಾಪ ವಿಮೋಚನೆ: ಬಿಜೆಪಿಗೆ ಎಚ್ಚರಿಕೆ ಸಂದೇಶ ರವಾನೆ

    ಹಸ್ತಾಧಿಕಾರ ಮುಂದಿನ ವಾರ ಹೊಸ ಸರ್ಕಾರ: ಇಂದು ಸಿಎಲ್​ಪಿ ಸಭೆ, ಮುಂದಿನ ಚಟುವಟಿಕೆಗಳೇನು?

    ಯಡಿಯೂರಪ್ಪ ಕಣ್ಣೀರಿಗೆ ದುಬಾರಿ ಬೆಲೆತೆತ್ತ ಬಿಜೆಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts