More

    ಭಾರತದ ಈ ಪ್ರದೇಶದಲ್ಲಿ ಚಿನ್ನ, ಹಣ ಬದಲು 21 ವಿಷಕಾರಿ ಹಾವುಗಳೇ ವರದಕ್ಷಿಣೆ! ಕಾರಣ ಹುಬ್ಬೇರಿಸುವಂತಿದೆ

    ನವದೆಹಲಿ: ವರದಕ್ಷಿಣೆಯು ಕಾನೂನು ಬದ್ಧವಾಗಿ ತಪ್ಪಾಗಿದ್ದರು ಕೂಡ ಹೆಣ್ಣು ಮಕ್ಕಳ ಮದುವೆ ವೇಳೆ ಚಿನ್ನ, ಹಣ, ವಾಹನ ಇತ್ಯಾದಿಗಳನ್ನು ವರನಿಗೆ ನೀಡುವ ಪದ್ಧತಿ ಇಂದಿಗೂ ನಮ್ಮ ಸಮಾಜದಲ್ಲಿ ಜೀವಂತವಾಗಿದೆ. ಗಂಡನ ಮನೆಯಲ್ಲಿ ತಮ್ಮ ಮಗಳ ಆರಾಮಾಗಿರಲಿ, ಗೌರವ ಸಿಗಲಿ ಅಂತ ಇಂತಹ ಉಡುಗೊರೆಗಳನ್ನು ನೀಡುತ್ತಾರೆ. ಕೆಲವರು ಚಿನ್ನ ಮತ್ತು ನಗದು ಜೊತೆಗೆ ಕಾರು ಮತ್ತು ಮನೆಗಳನ್ನು ಉಡುಗೊರೆಯಾಗಿ ನೀಡುತ್ತಾರೆ. ಕರ್ನಾಟಕ ಮಾತ್ರವಲ್ಲದೆ, ಭಾರತದ ವಿವಿಧ ರಾಜ್ಯಗಳಲ್ಲಿ ಈ ವ್ಯವಸ್ಥೆ ಜಾರಿಯಲ್ಲಿದೆ.

    ಮದುವೆಗೆ ಸಂಬಂಧಿಸಿದ ವಿವಿಧ ಪದ್ಧತಿಗಳು ಮತ್ತು ಆಚರಣೆಗಳು ಅನೇಕ ಸ್ಥಳಗಳಲ್ಲಿ ಅಸ್ತಿತ್ವದಲ್ಲಿವೆ. ಮಧ್ಯಪ್ರದೇಶದ ‘ಗೋರಿಯಾ’ ಸಮುದಾಯದ ಮದುವೆ ಆಚರಣೆಗಳು ಇದೀಗ ಬಹಳ ಚರ್ಚೆಯಾಗುತ್ತಿವೆ. ಈ ಜಾತಿಗೆ ಸೇರಿದವರು ತಮ್ಮ ಹೆಣ್ಣು ಮಕ್ಕಳ ಮದುವೆಯ ದಿನ ಚಿನ್ನ ಅಥವಾ ಹಣವನ್ನು ವರದಕ್ಷಿಣೆಯಾಗಿ ನೀಡುವುದಿಲ್ಲ. ಬದಲಿಗೆ 21 ವಿಷಕಾರಿ ಹಾವುಗಳನ್ನು ನೀಡಲಾಗುತ್ತದೆ.

    ಮದುವೆಯ ದಿನ ವಧುವಿನ ತಂದೆ ವರನಿಗೆ ಈ ವಿಚಿತ್ರ ಉಡುಗೊರೆಯನ್ನು ಹಸ್ತಾಂತರಿಸುತ್ತಾರೆ. ವರನೊಂದಿಗೆ ಅತ್ತೆ ಮನೆಗೆ ಹೋಗುವ ವಧು ಈ ಹಾವುಗಳನ್ನು ತನ್ನೊಂದಿಗೆ ಕೊಂಡೊಯ್ಯಬೇಕು ಎಂಬ ಸಂಪ್ರದಾಯವೂ ಇದೆ.

    ಗೋರಿಯಾ ಸಮುದಾಯದಲ್ಲಿ ಮದುವೆಯು ಜೀವನದ ಅತ್ಯಂತ ಪವಿತ್ರ ಭಾಗವಾಗಿದೆ. ತಂದೆಯು ತನ್ನ ಮಗಳಿಗೆ ಹಾವುಗಳನ್ನು ಉಡುಗೊರೆಯಾಗಿ ನೀಡದಿದ್ದರೆ, ಮದುವೆಯು ಸುಗಮವಾಗಿ ನಡೆಯುವುದಿಲ್ಲ ಎಂದು ನಂಬಲಾಗಿದೆ. ಅದಕ್ಕಾಗಿಯೇ ಹುಡುಗಿಯ ಮದುವೆ ನಿಗದಿಯಾದ ದಿನದಿಂದಲೇ ತಂದೆ ಹಾವು ಹಿಡಿಯುವ ಕಾರ್ಯದಲ್ಲಿ ತೊಡಗುತ್ತಾರೆ ಎಂದು ಹೇಳಲಾಗುತ್ತದೆ.

    ಗೋರಿಯಾ ಕುಲದವರ ಉದ್ಯೋಗವೆಂದರೆ ಹಾವು ಹಿಡಿಯುವುದು. ಹಾಗಾಗಿಯೇ ಹಾವುಗಳು ಅವರಿಗೆ ಪ್ರಿಯ. ಹಾವುಗಳನ್ನು ಹಿಡಿದಿಟ್ಟು ಪೆಟ್ಟಿಗೆಗಳಲ್ಲಿ ಇರಿಸಿದಾಗ ಅವುಗಳು ಕಳೆದುಹೋದರೆ ಅಥವಾ ಯಾವುದೇ ಸಂದರ್ಭದಲ್ಲಿ ಸತ್ತರೆ ದುರದೃಷ್ಟವೆಂದು ಪರಿಗಣಿಸಲಾಗುತ್ತದೆ. (ಏಜೆನ್ಸೀಸ್​)

    ರಸ್ತೆ ಏನು ನಿಮ್ಮ ಅಪ್ಪನ ಮನೆ ಆಸ್ತಿಯಾ? ಶಾಸಕ-ಮೇಯರ್​ ದಂಪತಿಗೆ KSRTC ಡ್ರೈವರ್​ ತಾಯಿಯಿಂದ ತರಾಟೆ

    ಮಹಿಳೆ ಹಸಿದಿದ್ದಾಗ ಬಾಯಿಗೆ ಅನ್ನ ಹಾಕಿ ಅದನ್ನಲ್ಲ… ಭಾರಿ ಸಂಚಲನ ಸೃಷ್ಟಿಸಿದ ನಟಿ ರಶ್ಮಿ ಪೋಸ್ಟ್​

    ಚಲಿಸುವ ದೋಣಿ ಏರಿ ಮೀನುಗಾರನನ್ನೇ ದಿಟ್ಟಿಸಿ ನೋಡಿದ ಈ ವಿಚಿತ್ರ ಜೀವಿ ಯಾವುದು? ವಿಡಿಯೋ ವೈರಲ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts