More

  ಇಪಿಎಫ್​ಒ ಹಣ ವಾಪಸು ಪಡೆಯಲು ಸ್ವಯಂಚಾಲಿತ ವ್ಯವಸ್ಥೆ ಶುರು

  ನವದೆಹಲಿ: ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯು (ಇಪಿಎಫ್​ಒ) ಶಿಕ್ಷಣ, ಮದುವೆ ಮತ್ತು ವಸತಿ ಉದ್ದೇಶಗಳಿಗಾಗಿ ಸದಸ್ಯರು ತಮ್ಮ ಖಾತೆಯಿಂದ ಹಣ ಹಿಂತೆಗೆದುಕೊಳ್ಳುವ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಸ್ವಯಂ ಕ್ಲೈಮ್‌ ಇತ್ಯರ್ಥ (ಅಟೋ ಕ್ಲೈಮ್​ ಸೆಟಲ್​ಮೆಂಟ್​) ವ್ಯವಸ್ಥೆಯನ್ನು ಘೋಷಿಸಿದೆ. ಹಣ ವಾಪಸಾತಿ ಕ್ಲೈಮ್​ಗಳ ಪ್ರಕ್ರಿಯೆಯನ್ನು ಐಟಿ ವ್ಯವಸ್ಥೆ ಮೂಲಕ ಸ್ವಯಂಚಾಲಿತವಾಗಿ ಮಾಡುವ ವ್ಯವಸ್ಥೆ ಇದಾಗಿದ್ದು, ಇದರಿಂದ 6 ಕೋಟಿ ಚಂದಾದಾರರಿಗೆ ಪ್ರಯೋಜನವಾಗಲಿದೆ.

  ಅನಾರೋಗ್ಯ-ಸಂಬಂಧಿತ ಮುಂಗಡಗಳಿಗಾಗಿ ಏಪ್ರಿಲ್ 2020 ರಲ್ಲಿ ಈ ಸ್ವಯಂಚಾಲಿತ ವ್ಯವಸ್ಥೆಯನ್ನು ಪ್ರಾರಂಭಿಸಲಾಗಿದೆ. ಈಗ ಎಲ್ಲ ರೀತಿಯ ಕ್ಲೈಮ್‌ಗಳನ್ನು ನಿಭಾಯಿಸಲು ಈ ಸ್ವಯಂಚಾಲಿತ ವ್ಯವಸ್ಥೆಯನ್ನು ವಿಸ್ತರಿಸಲಾಗಿದೆ ಎಂದು ಇಪಿಎಫ್​ಒ ಹೇಳಿದೆ.

  ಇದಲ್ಲದೆ, ಅನಾರೋಗ್ಯಕ್ಕೆ ಸಂಬಂಧಿಸಿದ ಕ್ಲೈಮ್‌ಗಳ ಮಿತಿಯನ್ನು 50,000 ರೂಪಾಯಿಯಿಂದ 1,00,000 ರೂಪಾಯಿಯವರೆಗೆ ಈಗ ಹೆಚ್ಚಿಸಲಾಗಿದೆ ಎಂದು ಇಪಿಎಫ್​ಒ ತಿಳಿಸಿದೆ.

  ವಸತಿ, ಮದುವೆ ಮತ್ತು ಶಿಕ್ಷಣದ ಉದ್ದೇಶಗಳಿಗೆ ತಮ್ಮ ಖಾತೆಯಿಂದ ಹಣವನ್ನು ಕಡಿಮೆ ಸಮಯದಲ್ಲಿ ಪಡೆದುಕೊಳ್ಳಲು ಈ ಸ್ವಯಂಚಾಲಿತ ವ್ಯವಸ್ಥೆಯು ಸದಸ್ಯರಿಗೆ ನೆರವಾಗಲಿದೆ. ಶಿಕ್ಷಣ, ಮದುವೆ ಅಥವಾ ವಸತಿ ಸಂಬಂಧಿತ ಅವಶ್ಯಕತೆಗಳನ್ನು ತ್ವರಿತವಾಗಿ ಪೂರೈಸಲು ಈ ವ್ಯವಸ್ಥೆ ಗಣನೀಯವಾಗಿ ಸಹಾಯ ಮಾಡುತ್ತದೆ ಎಂದು ಇಪಿಎಫ್‌ಒ ಪ್ರಕಟಣೆಯಲ್ಲಿ ತಿಳಿಸಿದೆ.

  ರಜನೀಕಾಂತ್ ಮಗಳು- ಅಳಿಯ ಇಬ್ಬರೂ ಬೇರೆಯವರ ಜತೆ ಡೇಟಿಂಗ್​ ಮಾಡಿ ಪರಸ್ಪರರಿಗೆ ಮೋಸ ಮಾಡಿದ್ದಾರೆ: ಗಾಯಕಿಯ ಆಘಾತಕಾರಿ ಹೇಳಿಕೆ

  ಪ್ರೀತಿ ಜಿಂಟಾ ಹಾಗೂ ನನ್ನ ಗಂಡ ಡೇಟಿಂಗ್​ ನಡೆಸಿದ್ದರು… ನಾನು ಬಾಯ್​ಫ್ರೆಂಡ್​ ಸ್ನ್ಯಾಚರ್​ ಅಲ್ಲ.. ಹೀಗಿದೆ ನಟಿಯ ಸ್ಪಷ್ಟನೆ

  ರಣಬೀರ್ ಕಪೂರ್ ಅವರ ರಾಮಾಯಣ ಭಾರತೀಯ ಚಿತ್ರರಂಗದ ಅತ್ಯಂತ ದುಬಾರಿ ಚಿತ್ರ: ಇದರ ಬಜೆಟ್​ ಎಷ್ಟು ಗೊತ್ತೆ?

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts