More

  ಊಟದ ಹಣ ಕೇಳಿದ ಡಾಬಾ ಮಾಲೀಕನ ಮೇಲೆ ಹಲ್ಲೆ; ಅಪರಾಧಿಗೆ ಜೈಲು ಶಿಕ್ಷೆ

  ರಾಣೆಬೆನ್ನೂರ: ಊಟ ಮಾಡಿದ ಹಣ ಕೇಳಿದ ಡಾಬಾ ಮಾಲೀಕನ ಮೇಲೆ ಹಲ್ಲೆ ಮಾಡಿದ ಅಪರಾಧಿಗೆ 2.6 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 1 ಸಾವಿರ ರೂ. ದಂಡ ವಿಧಿಸಿ 1ನೇ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ಬಿ. ಸಿದ್ದರಾಜು ಸೋಮವಾರ ತೀರ್ಪು ನೀಡಿ ಆದೇಶಿಸಿದ್ದಾರೆ.
  ಆಂಧ್ರ ಪ್ರದೇಶದ ನಂದ್ಯಾಲ ಜಿಲ್ಲೆಯ ನಂದಿಪಾಡು ಗ್ರಾಮದ ಗುರಪ್ಪ (45) ಶಿಕ್ಷೆಗೊಳಗಾದ ಅಪರಾಧಿ.
  ಈತ 2023 ಜೂನ್ 8ರಂದು ಹಲಗೇರಿ ರಸ್ತೆಯ ಆರಾದ್ಯ ಡಾಬಾದಲ್ಲಿ ಊಟ ಮಾಡಿದ ಬಳಿಕ ಹಣ ಕೇಳಿದ ಡಾಬಾ ಮಾಲೀಕ ಬಸವರಾಜ ಎಂಡಿಗೇರ ಮೇಲೆ ಹಲ್ಲೆ ಮಾಡಿ ಚಾಕುವಿನಿಂದ ಹೊಟ್ಟೆಗೆ ಚುಚ್ಚಿ ಕೊಲೆಗೆ ಯತ್ನಿಸಿದ್ದನು. ಈ ಕುರಿತು ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
  ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಸಾಕ್ಷಾೃಧಾರಗಳ ಸಮೇತ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗೆ ಶಿಕ್ಷೆ ವಿಧಿಸಿ ಆದೇಶಿಸಲಾಗಿದೆ. ಸರ್ಕಾರದ ಪರವಾಗಿ ಸರ್ಕಾರಿ ಸಹಾಯಕ ಅಭಿಯೋಜಕ ಸಂತೋಷಕುಮಾರ ಎಸ್.ಎಂ. ವಾದ ಮಂಡಿಸಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts