ಬೆಂಗಳೂರು: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಎಚ್ಚರಿಕೆ ಸಂದೇಶ ರವಾನಿಸಿರುವ ಲಿಂಗಾಯತ ಸಮುದಾಯ, ಕಾಂಗ್ರೆಸ್ಗೆ ಶಾಪ ವಿಮೋಚನೆ ಮಾಡಿದೆ.
ಬರೋಬ್ಬರಿ 35 ವರ್ಷಗಳ ಬಳಿಕ ಕಾಂಗ್ರೆಸ್ಗೆ ಶಾಪ ವಿಮೋಚನೆಯಾಗಿದೆ. ಈ ಬಾರಿ 36 ಲಿಂಗಾಯತ ಶಾಸಕರು ಆಯ್ಕೆಯಾಗಿದ್ದಾರೆ. ಒಟ್ಟು 51 ಲಿಂಗಾಯತರಿಗೆ ಕಾಂಗ್ರೆಸ್ ಟಿಕೆಟ್ ನೀಡಿತ್ತು. ಅದರಲ್ಲಿ 36 ಮಂದಿ ವಿಜಯಶಾಲಿಗಳಾಗಿದ್ದಾರೆ. ಕಳೆದ ಬಾರಿಗೆ ಹೋಲಿಸಿದರೆ, ಈ ಬಾರಿ ಲಿಂಗಾಯತ ಸಮುದಾಯಕ್ಕೆ ಕಾಂಗ್ರೆಸ್ ಹೆಚ್ಚು ಟಿಕೆಟ್ ನೀಡಿದೆ.
ಇದನ್ನೂ ಓದಿ: ಬೆಂಗ್ಳೂರಲ್ಲಿ ಕಾಂಗ್ರೆಸ್ 12, ಬಿಜೆಪಿ 15: ರಾಜಧಾನಿ ಮತದಾರರ ಮನಸೆಳೆದ ನರೇಂದ್ರ ಮೋದಿ ರೋಡ್ ಶೋ
ಬಿಜೆಪಿ ವಿರುದ್ಧ ಸಿಟ್ಟು
ಲಿಂಗಾಯತ ನಾಯಕತ್ವವನ್ನು ಕಡೆಗಣಿಸಿದ್ದಕ್ಕೆ ಈ ಬಾರಿ ಲಿಂಗಾಯತ ಸಮುದಾಯ ಬಿಜೆಪಿ ವಿರುದ್ಧ ಆಕ್ರೋಶಗೊಂಡಿದ್ದು, ಅದರ ಪರಿಣಾಮ ಫಲಿತಾಂಶದ ಮೇಲೆ ಬೀರಿದೆ. 36 ಲಿಂಗಾಯತ ಕಾಂಗ್ರೆಸ್ ಶಾಸಕರನ್ನು ಆರಿಸಿ ಕಳುಹಿಸುವ ಮೂಲಕ ಬಿಜೆಪಿಗೆ ಎಚ್ಚರಿಕೆ ಸಂದೇಶವನ್ನು ರವಾನಿಸಿದೆ.
ಕಳೆದ 30 ವರ್ಷದಿಂದ ಬಿಜೆಪಿ ಪರ
ಲಿಂಗಾಯತ ಸಮುದಾಯ ಕಳೆದ 30 ವರ್ಷಗಳಿಂದ ಬಿಜೆಪಿ ಪರ ನಿಂತಿದ್ದರು. ಆದರೆ, ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಹಾಗೂ ಜಗದೀಶ ಶೆಟ್ಟರ್ ಕಡಗಣನೆಯಿಂದಾಗಿ ಬಿಜೆಪಿ ವಿರುದ್ಧ ಲಿಂಗಾಯತ ಸಮುದಾಯ ತಿರುಗಿ ಬಿದ್ದಿದೆ. ಈ ಎಲ್ಲ ಆಕ್ರೋಶವನ್ನು ಚುನಾವಣೆಯಲ್ಲಿ ಹೊರ ಹಾಕಿದ್ದಾರೆ.
ಕಾಂಗ್ರಸ್ಸಿನಲ್ಲಿ ಈಗ ಲಿಂಗಾಯತ ಶಾಸಕರದ್ದೆ ಬಲ
2018ರಲ್ಲಿ 47 ಲಿಂಗಾಯತರಿಗೆ ಕಾಂಗ್ರೆಸ್ ಟಿಕೆಟ್ ನೀಡಿತ್ತು. ಅದರಲ್ಲಿ 17 ಜನರು ಮಾತ್ರ ಆಯ್ಕೆಯಾಗಿದ್ರು. ಒಟ್ಟು 51 ಲಿಂಗಾಯತರಿಗೆ ಕಾಂಗ್ರೆಸ್ ಟಿಕೆಟ್ ನೀಡಿತ್ತು. ಅದರಲ್ಲಿ 36 ಮಂದಿ ವಿಜಯಶಾಲಿಗಳಾಗಿದ್ದಾರೆ. ಈ ಬಾರಿ ಲಿಂಗಾಯತ ಸಮುದಾಯ ಕಾಂಗ್ರೆಸ್ಸಿಗೆ ಜೈ ಎಂದಿದೆ.
ಇದನ್ನೂ ಓದಿ: ವರುಣದಲ್ಲಿ ವಿ. ಸೋಮಣ್ಣ ಹೀನಾಯ ಸೋಲು: ಪ್ರತಾಪ್ ಸಿಂಹ ಹೇಳಿಕೆಗಳೇ ಮುಳುವಾಯಿತು!
ಇನ್ನೂ 45 ಒಕ್ಕಲಿಗರಿಗೆ ಕಾಂಗ್ರೆಸ್ ಟಿಕೆಟ್ ನೀಡಿತ್ತು. ಅದರಲ್ಲಿ 21 ಕ್ಷೇತ್ರದಲ್ಲಿ ಒಕ್ಕಲಿಗರಿಗೆ ಗೆಲುವಾಗಿದೆ. ಪರಿಶಿಷ್ಟ ಪಂಗಡದಲ್ಲಿ 15, ಪರಿಶಿಷ್ಟ ಜಾತಿಯಲ್ಲಿ 11, ಮುಸ್ಲಿಂ 9, ಕುರುಬ 8, ರೆಡ್ಡಿ ಸಮುದಾಯದ 4, ಬ್ರಾಹ್ಮಣ, ಈಡಿಗ, ಭೋವಿ ಸಮುದಾಯದ ತಲಾ 3, ಮರಾಠ, ಬಿಲ್ಲವ ತಲಾ 2 ಹಾಗೂ ಬಂಟ, ಕೊಡವ, ಪರಿಶಿಷ್ಟ ಕ್ರಿಶ್ಚಿಯನ್, ಜೈನ್, ಲಂಬಾಣಿ, ಕೊರಚ, ಬಲಿಜ, ಬೆಸ್ತ, ರಜಪೂತ್ ಮತ್ತು ಉಪ್ಪಾರ ಸಮುದಾಯದ ತಲಾ ಒಬ್ಬ ಅಭ್ಯರ್ಥಿಗಳಿಗೆ ಗೆಲುವಾಗಿದೆ.
ಹೊನ್ನಾಳಿಯಲ್ಲಿ ಹೀನಾಯ ಸೋಲು: ರಾಜಕೀಯ ನಿವೃತ್ತಿ ಮಾತನಾಡಿ ಕಣ್ಣೀರಿಟ್ಟ ರೇಣುಕಾಚಾರ್ಯ
ಭಾರತದಲ್ಲಿ ಬಹುತೇಕ ತಗ್ಗಿದ ಕೋವಿಡ್: ಆರೋಗ್ಯ ತುರ್ತಸ್ಥಿತಿ ಅಂತ್ಯ, ವಿಶ್ವ ಆರೋಗ್ಯ ಸಂಸ್ಥೆ ಘೋಷಣೆ