More

    ವರುಣದಲ್ಲಿ ವಿ. ಸೋಮಣ್ಣ ಹೀನಾಯ ಸೋಲು: ಪ್ರತಾಪ್​ ಸಿಂಹ ಹೇಳಿಕೆಗಳೇ ಮುಳುವಾಯಿತು!

    ಮೈಸೂರು: ರಾಜ್ಯದ ಹೈವೋಲ್ಟೇಜ್​ ಕ್ಷೇತ್ರ ವರುಣದಲ್ಲಿ ವಿ. ಸೋಮಣ್ಣ ಅವರ ಹೀನಾಯ ಸೋಲಿಗೆ ಸಂಸದ ಪ್ರತಾಪ್​ ಸಿಂಹ ನೀಡಿದ ಹೇಳಿಕೆಗಳೇ ಕಾರಣ ಎಂದು ಹೇಳಲಾಗುತ್ತಿದೆ.

    ತಮ್ಮ ವ್ಯಾಪ್ತಿ ಬಿಟ್ಟು ಪ್ರತಾಪ್​ ಸಿಂಹ ವರುಣಕ್ಕೆ ಸೀಮಿತವಾದರು. ಅಲ್ಲದೆ, ಬೇಕಾಬಿಟ್ಟಿ ನಾಲಿಗೆ ಹರಿಬಿಟ್ಟರು. ದಲಿತರು, ಹಿಂದುಳಿದವರು ಹಾಗೂ ಮಹಿಳೆಯರಿಗೆ ಪ್ರತಾಪ್ ಸಿಂಹ ಹೇಳಿಕೆಗಳು ಇಷ್ಟವಾಗಲಿಲ್ಲ. ಮೈಸೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳಿಗೆ ಒಮ್ಮೆಯೂ ಪ್ರತಾಪ್ ಸಿಂಹ ಭೇಟಿ ನೀಡಲಿಲ್ಲ. ಅಲ್ಲದೆ, ಸಿದ್ದರಾಮಯ್ಯ ವಿರುದ್ಧ ಪ್ರತಾಪ್ ಸಿಂಹ ನಿರಂತರ ವಾಗ್ದಾಳಿ ನಡೆಸಿದ್ದು ವಿ. ಸೋಮಣ್ಣ ಸೋಲಿನ ಮೇಲೆ ತೀವ್ರ ಪರಿಣಾಮ ಬೀರಿದೆ.

    ಇದನ್ನೂ ಓದಿ: ಹಸ್ತಾಧಿಕಾರ ಮುಂದಿನ ವಾರ ಹೊಸ ಸರ್ಕಾರ: ಇಂದು ಸಿಎಲ್​ಪಿ ಸಭೆ, ಮುಂದಿನ ಚಟುವಟಿಕೆಗಳೇನು?

    ವರುಣಗೆ ಭೇಟಿ ನೀಡಿದ ವೇಳೆ ಪ್ರತಾಪ್ ಸಿಂಹರನ್ನು ಹಲವು ಗ್ರಾಮಗಳಲ್ಲಿ ತಡೆದಿದ್ದರು. ಲಿಂಗಾಯತರನ್ನ ಓಲೈಸಿಕೊಳ್ಳಲು ಹೆಚ್ಚು ಒತ್ತು ನೀಡಿ, ಕ್ಷೇತ್ರದಲ್ಲಿ ಪ್ರಮುಖ ಮುಖಂಡರಿಗಷ್ಟೇ ಮಹತ್ವ ನೀಡಿದರು. ಬಹುಮುಖ್ಯವಾಗಿ ವಿ. ಸೋಮಣ್ಣ ಅವರಿಗೆ ಕ್ಷೇತ್ರ ಪರಿಚಯವಿರಲಿಲ್ಲ. ಗೋವಿಂದರಾಜನಗರದಂತೆ ಅಭಿವೃದ್ದಿ ಮಾಡುತ್ತೇನೆ ಎಂಬ ಒಂದೇ ಹೇಳಿಕೆಯನ್ನು ನಿರಂತರವಾಗಿ ಹೇಳಿದರು. ವಸತಿ ಸಚಿವರಾಗಿ ಮನೆಗಳನ್ನು ನೀಡದೆ ಇದ್ದದ್ದು ಸೋಲಿಗೆ ಕಾರಣ ಎಂದು ಹೇಳಲಾಗುತ್ತಿದೆ.

    ನಿನ್ನೆ (ಮೇ 13) ಹೊರಬಿದ್ದ ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶದಲ್ಲಿ ಕಾಂಗ್ರೆಸ್​ 135 ಸ್ಥಾನಗಳಲ್ಲಿ ಜಯಭೇರಿ ಬಾರಿಸುವ ಮೂಲಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಬಿಜೆಪಿ 66 ಸ್ಥಾನಗಳನ್ನು ಗಳಿಸಿದರೆ, ಜೆಡಿಎಸ್​ ಕೇವಲ 19 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. (ದಿಗ್ವಿಜಯ ನ್ಯೂಸ್​)

    ಯಡಿಯೂರಪ್ಪ ಕಣ್ಣೀರಿಗೆ ದುಬಾರಿ ಬೆಲೆತೆತ್ತ ಬಿಜೆಪಿ

    ಬಿಜೆಪಿ ಹಿನ್ನಡೆಗೆ ಅ’ಸಂತೋಷ’

    ವರದಕ್ಷಿಣೆಯಾಗಿ ಬೈಕ್​ ಕೇಳಿದ ವರನಿಗೆ ಮಂಟಪದಲ್ಲೇ ಚಪ್ಪಲಿ ಏಟು ಕೊಟ್ಟ ಮಾವ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts