ಹೊನ್ನಾಳಿಯಲ್ಲಿ ಹೀನಾಯ ಸೋಲು: ರಾಜಕೀಯ ನಿವೃತ್ತಿ ಮಾತನಾಡಿ ಕಣ್ಣೀರಿಟ್ಟ ರೇಣುಕಾಚಾರ್ಯ

PM Renukacharya
Published on

ದಾವಣಗೆರೆ: ರಾಜ್ಯ ವಿಧಾನಸಭಾ ಚುನಾವಣೆ 2023ರಲ್ಲಿ ಹೀನಾಯ ಸೋಲು ಅನುಭವಿಸಿದ ದುಃಖದಲ್ಲಿ ಹೊನ್ನಾಳಿಯ ರೇಣುಕಾಚಾರ್ಯ ರಾಜಕೀಯ ನಿವೃತ್ತಿಗೆ ಮುಂದಾಗಿದ್ದಾರೆ.

ನಿನ್ನೆ ತಡರಾತ್ರಿ ಹೊನ್ನಾಳಿಯ ತಮ್ಮ ನಿವಾಸದಲ್ಲಿ ರೇಣುಕಾಚಾರ್ಯ ಅವರು ನಿವೃತ್ತಿಯ ಮಾತುಗಳನ್ನಾಡಿದರು. ಕ್ಷೇತ್ರದ ಜನರಿಗೆ ಸಾಕಷ್ಟು ಕೆಲಸ ಮಾಡಿ ಕೊಟ್ಟರು ಗೆಲ್ಲಲಿಲ್ಲ ಅಂತ ಕಣ್ಣೀರು ಹಾಕಿದರು. ಸಾಕಷ್ಟು ಬೆಂಬಲಿಗರ ಮುಂದೆ ನೋವು ತಡೆಯಲಾಗದೆ ಕಣ್ಣೀರು ಸುರಿಸಿದರು.

ಒಂದು ಸುತ್ತಿನಲ್ಲೂ ಮುನ್ನಡೆ ಸಾಧಿಸದೆ ಇರುವುದಕ್ಕೆ ರೇಣುಕಾಚಾರ್ಯ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ನಾನು ಕ್ಷೇತ್ರದ ಜನರಿಗೆ ಹಗಲಿರುಳು ಕೆಲಸ ಮಾಡಿದೆ. ಆದರೂ ಈ ರೀತಿ ಸೋಲು ಆಯ್ತಲ್ಲ ಅಂತ ನೋವಿನಿಂದ ಕಣ್ಣೀರು ಹಾಕಿದರು. ಅಭಿಮಾನಿಗಳು ಮತ್ತು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಾ ರಾಜಕೀಯ ನಿವೃತ್ತಿಯನ್ನು ಪ್ರಸ್ತಾಪ ಮಾಡಿದರು.

ರೇಣುಕಾಚಾರ್ಯರ ನಿವೃತ್ತಿ ನಿರ್ಧಾರಕ್ಕೆ ಅಭಿಮಾನಿಗಳು ವಿರೋಧ ವ್ಯಕ್ತಪಡಿಸಿದರು. ಅಲ್ಲದೆ, ಬಿಜೆಪಿಯ ಹರಿಹರ ಶಾಸಕ ಬಿ.ಪಿ. ಹರೀಶ್​ ರೇಣುಕಾಚಾರ್ಯಗೆ ಧೈರ್ಯ ಹೇಳಿದರು. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net