More

    ಚುನಾಯಿತ ನೂತನ ಕಾಂಗ್ರೆಸ್ ಶಾಸಕರು ಬೆಂಗಳೂರಿಗೆ ದೌಡು

    ಚುನಾಯಿತ ನೂತನ ಕಾಂಗ್ರೆಸ್ ಶಾಸಕರು ಬೆಂಗಳೂರಿಗೆ ದೌಡು
    ವಿಜಯವಾಣಿ ಸುದ್ದಿಜಾಲ ಕಲಬುರಗಿ
    ವಿಧಾನ ಸಭೆ ಚುನಾವಣೆಯ ಫಲಿತಾಂಶ ಪ್ರಕಟಗೊಂಡ ಸ್ಪಷ್ಟ ಬಹುಮತ ಪಡೆದ ಕಾಂಗ್ರೆಸ್ ಪಕ್ಷವು, ವಿಜೇತರಾದ ಎಲ್ಲರಿಗೆ ಕೂಡಲೇ ಬೆಂಗಳೂರಿಗೆ ಹೊರಟು ಬರುವಂತೆ  ಪಕ್ಷದ ನಾಯಕರು ಬುಲಾವ್ ನೀಡಿದ್ದಾರೆ. ಹೀಗಾಗಿ ಫಲಿತಾಂಶ ಪ್ರಕಟಗೊಂಡ ಬಳಿಕ ತಮ್ಮ ಆಪ್ತರ ಜತೆಗೆ ಚರ್ಚೆ ನಡೆಸಿದ ನಂತರ  ವಿಧಾನ ಸಭೆ ಮುಖ್ಯಸಚೇತಕ ಡಾ.ಅಜಯಸಿಂಗ್ ಧರ್ಮಸಿಂಗ್, ಚುನಾಯಿತರಾದ  ಪ್ರಿಯಾಂಕ್ ಖರ್ಗೆ,  ಬಿ.ಆರ್.ಪಾಟೀಲ್,  ಅಲ್ಲಮಪ್ರಭು ಪಾಟೀಲ್, ಎಂ.ವೈ.ಪಾಟೀಲ್, ಡಾ.ಶರಣಪ್ರಕಾಶ ಪಾಟೀಲ್, ಕನ್ನಿಜ್ ಫಾತಿಮಾ ಇಸ್ಲಾಂ ಅವರಿಗೆ ಬುಲಾವ್ ಬಂದಿದೆ. ಹೀಗಾಗಿ ಶನಿವಾರ ರಾತ್ರಿಯೇ ಬಹುತೇಕರು ಬೆಂಗಳೂರಿಗೆ ಪ್ರಯಾಣ ಬೆಳೆಸಿದರು. ಕೆಲವರು ಭಾನುವಾರ ಬೆಳಗ್ಗೆ ತೆರಳುವ ಸಾಧ್ಯತೆ ಇದೆ.

    ಇಂದು ಸಂಜೆ ಬೆಂಗಳೂರಿನ ಖಾಸಗಿ ಹೋಟೆಲ್‌ ದಲ್ಲಿ ಶಾಸಕರ ಸಭೆ ನಡೆಯಲಿದೆ. ಅದರಲ್ಲಿ ಎಲ್ಲರು ಭಾಗಿ ಅಗುವರು.

    ಸರ್ಕಾರ ರಚನೆಗೆ ಕಸರತ್ತುಗಳು ಶುರುವಾದ ಬೆನ್ನಲ್ಲಿಯೇ ಪಕ್ಷದ ಶಾಸಕಾಂಗ ನಾಯಕನ ಆಯ್ಕೆ ಮಾಡುವುದು. ಬಳಿಕ ಮಂತ್ರಿಮAಡಲರಚನೆ ಇತ್ಯಾದಿ ಕುರಿತು  ಗರ್ಮಾಗರಂ ಆಗಿ ನಡೆದಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts