ಚೀನಾ ಯೋಧರ ಕಾಲರ್​ನಲ್ಲಿ ಗುಂಡುಪಿನ್​ ಏಕಿದೆ? ಕಾರಣ ತಿಳಿದ್ರೆ ನಿಮ್ಮ ಹುಬ್ಬೇರೋದು ಖಚಿತ! China Army

China Army
Published on

China Army : ಮಿಲಿಟರಿ ಸೇವೆಯು ಸಾಕಷ್ಟು ಶಿಸ್ತು ಮತ್ತು ಧೈರ್ಯದ ಅಗತ್ಯವಿರುವ ಕೆಲಸವಾಗಿದೆ. ಪ್ರತಿಯೊಬ್ಬ ಸೈನಿಕನಿಗೆ ಅತ್ಯಂತ ಕಠಿಣ ತರಬೇತಿಯನ್ನು ನೀಡಿದ ನಂತರವೇ ದೇಶದ ಭದ್ರತಾ ಕೆಲಸಕ್ಕೆ ನಿಯೋಜಿಸಲಾಗುತ್ತದೆ. ಪ್ರತಿಯೊಂದು ದೇಶವು ಕೂಡ ತನ್ನದೇಯಾದ ಸೈನಿಕರ ಸಮವಸ್ತ್ರವನ್ನು ಹೊಂದಿದೆ. ಈ ಸಮವಸ್ತ್ರಗಳು ತುಂಬಾ ವಿಭಿನ್ನವಾಗಿರುತ್ತವೆ.

ಇದೀಗ ಚೀನಾದ ಸೈನಿಕರ ಸಮವಸ್ತ್ರವೂ ವಿಶೇಷವಾಗಿ ಗಮನ ಸೆಳೆದಿದೆ. ಅದಕ್ಕೆ ಕಾರಣ ಯೋಧರ ಕೊರಳಪಟ್ಟಿಗಳ ಮೇಲೆಗುಂಡು ಪಿನ್‌ಗಳನ್ನು ಅಂಟಿಸಿರುವುದು. ಇದಕ್ಕೆ ಸಂಬಂಧಿಸಿದ ಫೋಟೋ ವೈರಲ್​ ಆಗುತ್ತಿದ್ದಂತೆ ಕಾರಣ ಏನೆಂದು ತಿಳಿದುಕೊಳ್ಳಲು ಅನೇಕರು ಗೂಗಲ್​ ಸರ್ಚ್​ ಮಾಡುತ್ತಿದ್ದಾರೆ.

ಗುಂಡುಪಿನ್​ಗಳನ್ನು ಕುತ್ತಿಗೆಯಲ್ಲಿ ಪಕ್ಕದಲ್ಲೇ ಅಂಟಿಕೊಂಡಿರುವ ರೀತಿಯಲ್ಲಿ ಇರಿಸಲಾಗುತ್ತದೆ. ಇದಕ್ಕೆ ಒಂದು ಕಾರಣವೂ ಇದೆ. 2009 ರಲ್ಲೇ ನ್ಯೂಯಾರ್ಕ್ ಟೈಮ್ಸ್ ಈ ಬಗ್ಗೆ ಸುದ್ದಿಯನ್ನು ಪ್ರಕಟಿಸಿತು. ಸೈನಿಕರು ತಮ್ಮ ಕುತ್ತಿಗೆಯನ್ನು ಸದಾ ಗಟ್ಟಿಯಾಗಿರಿಸಲು ಅಥವಾ ನೇರವಾಗಿರಿಸಲು ಈ ರೀತಿಯಾಗಿ ಪಿನ್‌ಗಳನ್ನು ಧರಿಸುತ್ತಾರೆ ಎಂದು ಹೇಳಲಾಗಿದೆ.

ಕುತ್ತಿಗೆಯನ್ನು ಬಾಗಿಸಿದಾಗ ಪಿನ್​ಗಳು ಕುತ್ತಿಗೆಗೆ ಚುಚ್ಚುವ ರೀತಿಯಲ್ಲಿ ಕಾಲರ್​ನಲ್ಲಿ ಇರಿಸಲಾಗಿದೆ. ಸೈನಿಕರು ತಮ್ಮ ಕುತ್ತಿಗೆಯನ್ನು ಸದಾ ನೇರವಾಗಿರಿಸಲು ಈ ರೀತಿ ಮಾಡಲಾಗುತ್ತದೆ. ಅಲ್ಲದೆ, ಸದಾ ಅಲರ್ಟ್​ ಆಗಿರಲು ಈ ರೀತಿ ಮಾಡಲಾಗುತ್ತದೆ. ಇದನ್ನು ಹೆಚ್ಚಾಗಿ ಪರೇಡ್​ ಸಂದರ್ಭಗಳನ್ನು ಅನುಸರಿಸಲಾಗುತ್ತದೆ.

ಚೀನಾ ಸೈನಿಕರು ಶಿಸ್ತನ್ನು ಕಾಪಾಡಿಕೊಳ್ಳುವ ಬಗ್ಗೆ ಬಹಳ ಜಾಗರೂಕರಾಗಿದ್ದಾರೆ. ಅದಕ್ಕಾಗಿಯೇ ಅವರು ಅಂತಹ ಕಠಿಣ ವಿಧಾನಗಳನ್ನು ಅನುಸರಿಸುತ್ತಾರೆ. ಆದರೆ, ಇದು ಎಲ್ಲರಿಗೂ ಅನ್ವಯಿಸುವುದಿಲ್ಲ. ಯಾರು ನೇರವಾಗಿ ನಿಲ್ಲುವುದಿಲ್ಲವೋ ಅವರ ವಿರುದ್ಧ ಈ ಕ್ರಮ ಕೈಗೊಳ್ಳಲಾಗುತ್ತದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net