ರೂಪುಗೊಳ್ಳಲಿದೆ ಪ್ರಬಲ ಗಜಕೇಸರಿ ರಾಜಯೋಗ: ಈ ರಾಶಿಯವರಿಗೆ ಅದೃಷ್ಟವೋ ಅದೃಷ್ಟ, ಹಣದ ಸಮಸ್ಯೆ ದೂರ! Gajakesari Raja Yoga

Gajakesari Raja Yoga
Published on

Gajakesari Raja Yoga : ಜ್ಯೋತಿಷ್ಯದ ಆಧಾರದ ಮೇಲೆ, ಒಬ್ಬರು ಜನಿಸಿದ ರಾಶಿ, ನಕ್ಷತ್ರ ಹಾಗೂ ಗ್ರಹಗಳ ಸ್ಥಾನ ವ್ಯಕ್ತಿಯ ಭವಿಷ್ಯದ ಜೀವನವನ್ನು ನಿರ್ಧರಿಸುತ್ತದೆ. ಅಲ್ಲದೆ, ಧನಾತ್ಮಕ ಹಾಗೂ ಋಣಾತ್ಮಕ ಅಂಶಗಳ ಮೇಲೆ ಪ್ರಭಾವ ಬೀರುತ್ತದೆ ಎಂದು ನಂಬಲಾಗಿದೆ.

ಗ್ರಹಗಳ ಸ್ಥಾನಗಳಲ್ಲಿನ ಅಸಮತೋಲನದಿಂದ ಎರಡು ಗ್ರಹಗಳು ಒಟ್ಟಿಗೆ ಸೇರಿದಾಗ ಕೆಲವು ಯೋಗಗಳು ರೂಪುಗೊಳ್ಳುತ್ತವೆ ಎಂದು ನಂಬಲಾಗಿದೆ. ಈ ರೀತಿಯಾಗಿ ರೂಪುಗೊಳ್ಳುವ ಅಪರೂಪದ ಯೋಗಗಳ ಪ್ರಭಾವವು ಎಲ್ಲ 12 ರಾಶಿಗಳ ಮೇಲೆ ಧನಾತ್ಮಕ ಮತ್ತು ಋಣಾತ್ಮಕ ಪರಿಣಾಮಗಳನ್ನು ಬೀರುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

ಗುರು ಮತ್ತು ಚಂದ್ರನ ಸಂಯೋಗದಿಂದ ಗಜಕೇಸರಿ ರಾಜಯೋಗ ಉಂಟಾಗಲಿದೆ. 2025ರ, ಮೇ 28 ರಂದು ಚಂದ್ರ ಮತ್ತು ಗುರು ಗ್ರಹ ಮಿಥುನ ರಾಶಿಯಲ್ಲಿ ಒಟ್ಟಿಗೆ ಸೇರುವುದುರಿಂದ ಗಜಕೇಸರಿ ಯೋಗ ರೂಪುಗೊಳ್ಳುತ್ತದೆ. ಈ ಯೋಗವು ಶಕ್ತಿಯುತ ಮತ್ತು ಮಂಗಳಕರವಾದ ಜ್ಯೋತಿಷ್ಯ ಜೋಡಣೆಯಾಗಿದೆ. ಗುರು ಮತ್ತು ಚಂದ್ರರು ಒಂದೇ ಜಾತಕದಲ್ಲಿ ಅಥವಾ ಪರಸ್ಪರ ದೃಷ್ಟಿಯಲ್ಲಿದ್ದಾಗ ಇದು ಸಂಭವಿಸುತ್ತದೆ. ವೈದಿಕ ಜ್ಯೋತಿಷ್ಯದಲ್ಲಿ ಇದು ಅತ್ಯಂತ ಅನುಕೂಲಕರವಾದ ಗ್ರಹಗಳ ಜೋಡಣೆಗಳಲ್ಲಿ ಒಂದಾಗಿದೆ.

ಈ ಗಜಕೇಸರಿ ಯೋಗವು 2025ರಲ್ಲಿ ಕೆಲವು ರಾಶಿಚಕ್ರ ಚಿಹ್ನೆಗಳಿಗೆ ಅದೃಷ್ಟವನ್ನು ತರಲಿದ್ದು, ಆರ್ಥಿಕವಾಗಿ ಮುಂದುವರಿಯುವ ಅವಕಾಶವನ್ನು ಒದಗಿಸಲಿದೆ. ಆ ರಾಶಿಗಳು ಯಾವುವು ಎಂಬುದನ್ನು ನಾವೀಗ ತಿಳಿಯೋಣ.

ಮಿಥುನ ರಾಶಿ

ಎರಡು ಪ್ರಬಲ ಗ್ರಹಗಳ ಸಂಯೋಗದಿಂದ ರೂಪುಗೊಳ್ಳುವ ಗಜಕೇಸರಿ ಯೋಗವು ಮಿಥುನ ರಾಶಿಯವರ ಜೀವನದಲ್ಲಿ ಪ್ರಮುಖ ಬದಲಾವಣೆಯನ್ನು ತರಲಿದೆ. ವೃತ್ತಿ ಮತ್ತು ವೈಯಕ್ತಿಕ ಜೀವನದ ವಿಷಯದಲ್ಲಿ ಅವರಿಗೆ ಉತ್ತಮ ಪ್ರಯೋಜನಗಳು ಸಿಗಲಿವೆ. ಈ ಅವಧಿಯಲ್ಲಿ ಹೊಸ ಉದ್ಯಮಗಳನ್ನು ಪ್ರಾರಂಭಿಸಲು ಅವಕಾಶವಿರುತ್ತದೆ. ಆಲೋಚನೆ ಮತ್ತು ಬುದ್ಧಿವಂತಿಕೆಯಲ್ಲಿ ಹೊಸ ಉತ್ಸಾಹ ಇರುತ್ತದೆ. ಇವರು ಮುಟ್ಟಿದ್ದೆಲ್ಲಾ ಚಿನ್ನವಾಗುತ್ತದೆ. ಆರ್ಥಿಕ ಸ್ಥಿತಿಯಲ್ಲಿ ಹಿಂದೆಂದೂ ಕಾಣದ ಬೆಳವಣಿಗೆ ಕಂಡುಬರಲಿದೆ.

ವೃಷಭ ರಾಶಿ

ವೃಷಭ ರಾಶಿಯ ಮೊದಲ ಮನೆಯಲ್ಲಿ ಗಜಕೇಸರಿ ರಾಜಯೋಗವು ರೂಪುಗೊಳ್ಳುತ್ತದೆ. ಈ ಯೋಗದಿಂದ ಅವರು ಎಲ್ಲ ಕ್ಷೇತ್ರಗಳಲ್ಲಿಯೂ ಉತ್ತಮ ಯಶಸ್ಸನ್ನು ಸಾಧಿಸುತ್ತಾರೆ. ಬಹುದಿನಗಳಿಂದ ಕಂಡಿದ್ದ ಕನಸುಗಳು ಶೀಘ್ರದಲ್ಲೇ ನನಸಾಗಲಿವೆ. ನೀವು ಯಾವುದೇ ಕ್ಷೇತ್ರವನ್ನು ಕೈಗೆತ್ತಿಕೊಂಡರೂ, ನೀವು ಯಶಸ್ವಿಯಾಗುವುದು ಖಚಿತ. ವೃತ್ತಿಯಲ್ಲಿ ಉತ್ತಮ ಪ್ರಗತಿಯನ್ನು ಪಡೆಯುವ ಹೆಚ್ಚಿನ ಅವಕಾಶವಿದೆ ಮತ್ತು ಹಣಕಾಸಿನ ಪರಿಸ್ಥಿತಿಯಲ್ಲಿ ಸುಧಾರಣೆಗೆ ಹೆಚ್ಚಿನ ಅವಕಾಶವಿದೆ.

ಧನುಸ್ಸು ರಾಶಿ

ಧನುಸ್ಸು ರಾಶಿಯ 6ನೇ ಮನೆಯಲ್ಲಿ ಗಜಕೇಸರಿ ರಾಜಯೋಗ ರೂಪುಗೊಳ್ಳಲಿದೆ. ನೀವು ಪಿತ್ರಾರ್ಜಿತ ಆಸ್ತಿಯನ್ನು ಹೊಂದಿದ್ದರೆ, ಅದು ಪ್ರಸ್ತುತದಲ್ಲಿ ಉಪಯುಕ್ತವಾಗಲಿದೆ. ನೀವು ಮಾಡುತ್ತಿರುವ ಕೆಲಸದ ಮೇಲೆ ನೀವು ಸಂಪೂರ್ಣವಾಗಿ ಗಮನಹರಿಸಬಹುದು. ಹಣಕಾಸಿನ ಪರಿಸ್ಥಿತಿಯಲ್ಲಿ ಗಮನಾರ್ಹ ಬೆಳವಣಿಗೆಯ ಜತೆಗೆ ಮನೆ ಮತ್ತು ವಾಹನ ಖರೀದಿಸಲು ಅವಕಾಶವಿರುತ್ತದೆ. ಸ್ನೇಹಿತರು ಮತ್ತು ಸಂಬಂಧಿಕರಿಂದ ಅನಿರೀಕ್ಷಿತ ಹಣಕಾಸಿನ ನೆರವು ಸಿಗುವ ಸಾಧ್ಯತೆ ಇದೆ.

ಕುಂಭ ರಾಶಿ

ಕುಂಭ ರಾಶಿಯ 4ನೇ ಮನೆಯಲ್ಲಿ ಗಜಕೇಸರಿ ರಾಜಯೋಗ ನಿರ್ಮಾಣವಾಗಲಿದೆ. ನೀವು ಯಾವುದೇ ಕೆಲಸವನ್ನು ತೆಗೆದುಕೊಂಡರೂ, ದೊಡ್ಡ ಅದೃಷ್ಟವು ನಿಮ್ಮನ್ನು ಕಾಯುತ್ತಿದೆ. ಅಪೂರ್ಣ ಕಾಮಗಾರಿಗಳಿದ್ದರೆ ಪೂರ್ಣಗೊಳ್ಳಲಿದೆ. ಇಲ್ಲಿಯವರೆಗೆ ನೀವು ಪಟ್ಟ ಶ್ರಮಕ್ಕೆ ದುಪ್ಪಟ್ಟು ಪ್ರತಿಫಲ ದೊರೆಯಲಿದೆ ಮತ್ತು ನೀವು ಹಣವನ್ನು ಉಳಿಸುತ್ತೀರಿ.

ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ ವಿಜಯವಾಣಿ ಡಾಟ್​ ನೆಟ್​ ಸೈಟ್ ಜವಾಬ್ದಾರರಾಗಿರುವುದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net