ವರ್ಷದ ಆರಂಭದಲ್ಲೇ HMPV ಆತಂಕ: 2025ರಲ್ಲಿ ಈ 10 ರೋಗಗಳ ಬಗ್ಗೆ ಎಚ್ಚರಿಕೆ ವಹಿಸಲು ವೈದ್ಯರ ಸಲಹೆ! HMPV Outbreak

HMPV Outbreak
Published on

HMPV Outbreak : ಕರೊನಾ ಜನ್ಮಸ್ಥಳ ಎಂದೇ ಕರೆಯಲ್ಪಡುವ ಚೀನಾದಲ್ಲಿ ಮತ್ತೊಂದು ಅಪಾಯಕಾರಿ ವೈರಸ್ ಜಗತ್ತಿನೆಲ್ಲೆಡೆ ಮತ್ತೆ ಭೀತಿಯನ್ನು ಉಂಟುಮಾಡುತ್ತಿದೆ. ಆ ವೈರಸ್​ ಯಾವುದೆಂದರೆ, ಹ್ಯೂಮನ್ ಮೆಟಾಪ್ನ್ಯುಮೋನಿಯಾ ವೈರಸ್ (HMPV). ಇದು ಡ್ರ್ಯಾಗನ್ ಲ್ಯಾಂಡ್‌ನಲ್ಲಿ ಹರಡುತ್ತಿದೆ. ಈಗಾಗಲೇ ನೂರಾರು ಮಂದಿ ವೈರಸ್ ಸೋಂಕಿಗೆ ಒಳಗಾಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಆಘಾತಕಾರಿ ಸಂಗತಿ ಏನೆಂದರೆ, ಈ ವೈರಸ್​ ಭಾರತಕ್ಕೂ ಕಾಲಿಟ್ಟಿದೆ. ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ 8 ತಿಂಗಳ ಮಗುವಿನಲ್ಲಿ ಈ ವೈರಸ್ ಮೊದಲು ಪತ್ತೆಯಾಯಿತು. ದೇಶಾದ್ಯಂತ 5 ಮಂದಿಯಲ್ಲಿ ವೈರಸ್​ ಇರುವುದು ದೃಢವಾಗಿದೆ. ಹೀಗಾಗಿ ಜನರಲ್ಲಿ ಮತ್ತೆ ಆತಂಕ ಶುರುವಾಗಿದೆ.

ಸಾಂಕ್ರಾಮಿಕ ರೋಗವೆಂದು ಗುರುತಿಸಿಲ್ಲ

ಖುಷಿಯ ವಿಚಾರ ಏನೆಂದರೆ, 2024ರ ಏಪ್ರಿಲ್​ನಿಂದ ಚೀನಾದಲ್ಲಿ ಈ HMPV ಪ್ರಕರಣಗಳು ವರದಿಯಾಗಿವೆ. ಇದು ತೀವ್ರ ಪ್ರಭಾವವನ್ನ ಬೀರದ ಕಾರಣ ಚೀನಾ ಸರ್ಕಾರವು ಈ ವೈರಸ್ ಅನ್ನು ಇನ್ನೂ ಸಾಂಕ್ರಾಮಿಕ ರೋಗವೆಂದು ಗುರುತಿಸಿಲ್ಲ. ಚಳಿಗಾಲದಲ್ಲಿ ಈ ವೈರಸ್ ಮತ್ತಷ್ಟು ಹರಡುವ ಅಪಾಯವಿದೆ ಎಂದು ಸ್ಥಳೀಯ ಮಾಧ್ಯಮಗಳು ಬಹಿರಂಗಪಡಿಸಿದ್ದು, ಮಕ್ಕಳು ಮತ್ತು ವೃದ್ಧರ ಮೇಲೆ ಹೆಚ್ಚು ಪರಿಣಾಮ ಬೀರುವ ಸಾಧ್ಯತೆಯಿದೆ.

11 ರೋಗಗಳ ಬಗ್ಗೆ ವೈದ್ಯರ ಎಚ್ಚರಿಕೆ

ಚೀನಾದ HMPV ವೈರಸ್‌ನ ಪ್ರಭಾವದಿಂದಾಗಿ 2025ರಲ್ಲಿ ವೈದ್ಯರು 10 ಕಾಯಿಲೆಗಳ ಬಗ್ಗೆ ಹೆಚ್ಚು ಕಾಳಜಿ ವಹಿಸುವಂತೆ ಎಚ್ಚರಿಕೆ ನೀಡಿದ್ದಾರೆ. ಮಿರರ್ ವರದಿಯ ಪ್ರಕಾರ, ದಡಾರ, ಕಾಲರಾ, ಸ್ಕೇಬಿಸ್ ಮತ್ತು ಹಕ್ಕಿ ಜ್ವರ ಕೂಡ ಈ ವೈರಸ್‌ಗಳ ಪಟ್ಟಿಯಲ್ಲಿವೆ. ಚೀನಾ, ಜಪಾನ್ ಮತ್ತು ಭಾರತ ಸೇರಿದಂತೆ ಏಷ್ಯಾದ ಹಲವಾರು ದೇಶಗಳಲ್ಲಿ ಹ್ಯೂಮನ್ ಮೆಟಾಪ್ನ್ಯೂಮೋವೈರಸ್ (HMPV) ವೈರಸ್ ಪ್ರಕರಣಗಳ ಹೆಚ್ಚಳದ ಮಧ್ಯೆಯೇ ವೈದ್ಯರು ಈ ಎಚ್ಚರಿಕೆಯನ್ನು ನೀಡಿದ್ದಾರೆ. HMPV ಜೊತೆಗೆ ಇನ್ಫ್ಲುಯೆನ್ಸ್​ A, ಮೈಕೋಪ್ಲಾಸ್ಮಾ ನ್ಯುಮೋನಿಯಾ ಮತ್ತು Covid-19 ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ವರದಿಗಳು ಸೂಚಿಸುತ್ತಿವೆ.

ಎಚ್​ಎಂಪಿವಿ ವೈರಸ್ COVID-19 ವೈರಸ್​ನಂತೆ ತ್ವರಿತವಾಗಿ ಹರಡಬಹುದು. ಇದು ಹೆಚ್ಚಿನ ಮರಣ ಪ್ರಮಾಣಕ್ಕೆ ಕಾರಣವಾಗಬಹುದು. ವಿಶ್ವ ಆರೋಗ್ಯ ಸಂಸ್ಥೆ (WHO) ಈ ವೈರಸ್‌ನ ಬೆದರಿಕೆಯ ಬಗ್ಗೆ ಕಳವಳ ವ್ಯಕ್ತಪಡಿಸಿದೆ. 2024ರ ಅಕ್ಟೋಬರ್ ಮತ್ತು ಡಿಸೆಂಬರ್ ನಡುವೆ ಅಜ್ಞಾತ ಕಾಯಿಲೆಯಿಂದಾಗಿ ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯದಲ್ಲಿ 30ಕ್ಕೂ ಹೆಚ್ಚು ಜನರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಅಲ್ಲದೆ, ಇಲ್ಲಿಯವರೆಗೆ ವಿಶ್ವ ಆರೋಗ್ಯ ಸಂಸ್ಥೆ 400 ಪ್ರಕರಣಗಳನ್ನು ವರದಿ ಮಾಡಿದೆ.

ವೈದ್ಯರು ಎಚ್ಚರಿಸಿರುವ 10 ರೋಗಗಳ ವಿವರಗಳು ಇಲ್ಲಿವೆ...

ದಡಾರ

ದಡಾರ ರೋಗ ಹೆಚ್ಚು ಸಾಂಕ್ರಾಮಿಕ. ಗಾಳಿಯ ಮೂಲಕ ವೇಗವಾಗಿ ಹರಡುತ್ತದೆ. ವ್ಯಾಕ್ಸಿನೇಷನ್ ಪ್ರಮಾಣ ಕಡಿಮೆಯಾಗುತ್ತಿರುವ ಕಾರಣ ದಡಾರವು ಮತ್ತೆ ಸಕ್ರಿಯವಾಗುತ್ತಿದೆ. MMR ಲಸಿಕೆಯಿಂದ ತಡೆಗಟ್ಟಬಹುದಾದರೂ, ಇದು 2023ರಲ್ಲಿ 1,07,000 ಸಾವುಗಳಿಗೆ ಕಾರಣವಾಯಿತು. ಇದು ಮುಖ್ಯವಾಗಿ ಲಸಿಕೆ ಹಾಕದ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ.

ರೋಗಲಕ್ಷಣಗಳು: ಜ್ವರ ತರಹದ ಲಕ್ಷಣಗಳು. ಮತ್ತೊಂದು ಲಕ್ಷಣವೆಂದರೆ ಚರ್ಮದ ಅಲರ್ಜಿ.

ಡೆಂಘೆ

ಡೆಂಘೆಯನ್ನು 'ಬೋನ್ ಬ್ರೇಕರ್' ಕಾಯಿಲೆ ಎಂದು ಕರೆಯಲಾಗುತ್ತದೆ. ಪ್ರತಿ ವರ್ಷ ಲಕ್ಷಾಂತರ ಜನರು ಈ ಸೋಂಕಿಗೆ ಒಳಗಾಗುತ್ತಾರೆ. ಹವಾಮಾನ ಬದಲಾವಣೆಯಿಂದಾಗಿ ದಕ್ಷಿಣ ಯುರೋಪ್‌ನಲ್ಲಿ ಡೆಂಘೆ ಹೆಚ್ಚು ಹರಡುತ್ತಿದೆ.

ರೋಗಲಕ್ಷಣಗಳು: ಜ್ವರ, ತಲೆನೋವು, ಕೀಲು ನೋವು ಮತ್ತು ದದ್ದು. ತೀವ್ರತರವಾದ ಪ್ರಕರಣಗಳಲ್ಲಿ ವಾಂತಿ, ಒಸಡುಗಳಲ್ಲಿ ರಕ್ತಸ್ರಾವ ಮತ್ತು ಕಿಬ್ಬೊಟ್ಟೆಯ ನೋವು ಕಾರಣವಾಗಬಹುದು.

ಚಿಕೂನ್‌ಗುನ್ಯಾ

ಡೆಂಘೆಗೆ ಹೋಲುವ ಸೊಳ್ಳೆಯಿಂದ ಹರಡುವ ವೈರಸ್. ಪ್ರಸ್ತುತ ಯುರೋಪ್‌ನಲ್ಲಿ ಅಪರೂಪವಾಗಿದ್ದರೂ ತಾಪಮಾನ ಏರಿಕೆಯು ಈ ವೈರಸ್‌ನ ಹರಡುವಿಕೆಯನ್ನು ಹೆಚ್ಚಿಸುವ ಸಾಧ್ಯತೆಯಿದೆ.

ರೋಗಲಕ್ಷಣಗಳು: ಜ್ವರ ಹಾಗೂ ದೀರ್ಘಕಾಲದ ಕೀಲು ನೋವು. ಹೆಚ್ಚಿನ ಪ್ರಕರಣಗಳು ಒಂದು ವಾರದಲ್ಲಿ ಗುಣವಾಗುತ್ತವೆ.

ವೆಸ್ಟ್​ ನೈಲ್ ಜ್ವರ

ಇದು ಸೊಳ್ಳೆಗಳಿಂದ ಹರಡುತ್ತದೆ. ವೆಸ್ಟ್ ನೈಲ್ ವೈರಸ್ ಯುರೋಪಿನ ಭಾಗಗಳಲ್ಲಿ ನ್ಯೂರೋಇನ್ವೇಸಿವ್ ಕಾಯಿಲೆಯನ್ನು ಉಂಟುಮಾಡಿದೆ.

ರೋಗಲಕ್ಷಣಗಳು: ಜ್ವರ, ಆಯಾಸ, ಮೆನಿಂಜೈಟಿಸ್ ಅಥವಾ ಎನ್ಸೆಫಾಲಿಟಿಸ್ ಸಾಮಾನ್ಯವಾಗಿದೆ.

ಹಕ್ಕಿ ಜ್ವರ (H5N1)

ಮನುಷ್ಯನಿಂದ ಮನುಷ್ಯನಿಗೆ ಹರಡುವಿಕೆಯು ಅಪರೂಪವಾಗಿದ್ದರೂ, ಏವಿಯನ್ ಇನ್ಫ್ಲುಯೆನ್ಸ್​ನ ರೂಪಾಂತರಗಳು ಸಾಂಕ್ರಾಮಿಕ ರೋಗವನ್ನು ಉಂಟುಮಾಡಬಹುದು.

ರೋಗಲಕ್ಷಣಗಳು: ಅಧಿಕ ಜ್ವರ, ಆಯಾಸ ಮತ್ತು ತಲೆನೋವು. ತೀವ್ರತರವಾದ ಪ್ರಕರಣಗಳಲ್ಲಿ ಒಸಡುಗಳು ಅಥವಾ ಮೂಗಿನ ರಕ್ತಸ್ರಾವ ಉಂಟಾಗುತ್ತದೆ.

ಕಾಲರ

ಕಲುಷಿತ ನೀರಿನಿಂದ ಹೆಚ್ಚಾಗಿ ಹರಡುವ ಈ ಅತಿಸಾರ ರೋಗವು ಬಲವಂತದ ವಲಸೆ ಮತ್ತು ಹವಾಮಾನ ಬದಲಾವಣೆಯಿಂದ ಹೆಚ್ಚಾಗುವ ಸಾಧ್ಯತೆಯಿದೆ.

ರೋಗಲಕ್ಷಣಗಳು: ತೀವ್ರವಾದ ಅತಿಸಾರ, ವಾಂತಿ ಮತ್ತು ತ್ವರಿತ ನಿರ್ಜಲೀಕರಣವನ್ನು ಒಳಗೊಂಡಿವೆ.

ಆ್ಯಂಟಿಮೈಕ್ರೊಬಿಯಲ್-ರೆಸಿಸ್ಟೆಂಟ್ ಬ್ಯಾಕ್ಟೀರಿಯಾ

ವಿಶ್ವ ಆರೋಗ್ಯ ಸಂಸ್ಥೆ (WHO)ಯು ಪ್ರತಿಜೀವಕಗಳ ಬಳಕೆಯನ್ನು ಅತ್ಯಂತ ಅಪಾಯಕಾರಿ ಎಂದು ಪರಿಗಣಿಸುತ್ತದೆ. ಇದು ಇ. ಕೋಲಿಯಂತಹ ಬ್ಯಾಕ್ಟೀರಿಯಾದ ಪ್ರತಿರೋಧವನ್ನು ಹೆಚ್ಚಿಸುವ ಮೂಲಕ ಹೆಚ್ಚಿನ ಮರಣ ಪ್ರಮಾಣಕ್ಕೆ ಕಾರಣವಾಗಿದೆ.

ರೋಗಲಕ್ಷಣಗಳು: ಸೋಂಕಿನ ಪ್ರಕಾರವನ್ನು ಅವಲಂಬಿಸಿರುತ್ತದೆ. ಆದರೆ, ರೋಗಲಕ್ಷಣಗಳಲ್ಲಿ ಅತಿಸಾರ, ವಾಂತಿ ಮತ್ತು ಮೂತ್ರನಾಳದ ತೊಂದರೆಗಳು ಸೇರಿವೆ.

ಸ್ಕೇಬೀಸ್

ಹುಳಗಳಿಂದ ಉಂಟಾಗುವ ಚರ್ಮದ ಕಾಯಿಲೆ. ಕಿಕ್ಕಿರಿದ ಪರಿಸರದಲ್ಲಿ ಸ್ಕೇಬೀಸ್ ಬೆಳೆಯುತ್ತದೆ. 2024ರಲ್ಲಿ ಯುನೈಟೆಡ್​ ಕಿಂಗ್​ಡಮ್​ನಲ್ಲಿ ಸ್ಕೇಬಿಸ್​ 58% ಹೆಚ್ಚಳವಾಗಿದೆ.

ಲಕ್ಷಣಗಳು: ತುರಿಕೆ ವಿಶೇಷವಾಗಿ ರಾತ್ರಿಯಲ್ಲಿ. ಸಾಮಾನ್ಯವಾಗಿ ಬೆರಳುಗಳ ನಡುವೆ ಅಥವಾ ಚರ್ಮದ ಮಡಿಕೆಗಳಲ್ಲಿ ತುರಿಕೆ ಪರಿಣಾಮ ಬೀರುತ್ತದೆ.

ಕೋವಿಡ್ ರೂಪಾಂತರಗಳು

XEC ಹೈಬ್ರಿಡ್‌ನಂತಹ ಹೊಸ ರೂಪಾಂತರಗಳು ಹೊರಹೊಮ್ಮುತ್ತಲೇ ಇರುತ್ತವೆ. ಇದರಿಂದ ಸೋಂಕು ಮತ್ತು ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಹೆಚ್ಚಾಗುತ್ತಿದೆ.

ಲಕ್ಷಣಗಳು: ನಿರಂತರ ಕೆಮ್ಮು, ಜ್ವರ, ವಾಸನೆ ಅಥವಾ ರುಚಿಯ ನಷ್ಟ, ಜ್ವರ ತರಹದ ಲಕ್ಷಣಗಳು

ವೂಪಿಂಗ್ ಕೆಮ್ಮು

ಈ ಬ್ಯಾಕ್ಟೀರಿಯಾದ ಸೋಂಕು ಶಿಶುಗಳು ಮತ್ತು ಚಿಕ್ಕ ಮಕ್ಕಳ ಮೇಲೆ ಗಂಭೀರವಾಗಿ ಪರಿಣಾಮ ಬೀರುತ್ತದೆ. ಯುಕೆಯಲ್ಲಿ 2024ರಲ್ಲಿ ಪ್ರಕರಣಗಳ ಸಂಖ್ಯೆ 10,000 ಮೀರಿದೆ.

ರೋಗಲಕ್ಷಣಗಳು: ರೋಗಲಕ್ಷಣಗಳು ಸೌಮ್ಯವಾದ ಶೀತದಂತಹ ಅನಾರೋಗ್ಯ, ತೀವ್ರ ಕೆಮ್ಮು ಮತ್ತು ಉಸಿರಾಟದ ತೊಂದರೆಗಳನ್ನು ಒಳಗೊಂಡಿರುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net