

HMPV : ಹೊಸ ವರ್ಷವನ್ನು ಇನ್ನೂ ಪೂರ್ಣ ಹೃದಯದಿಂದ ಸ್ವಾಗತಿಸಿಲ್ಲ ಅಷ್ಟರಲ್ಲಾಗಲೇ ವಿಶ್ವವನ್ನೇ ಬೆಚ್ಚಿಬೀಳಿಸುವ ವೈರಸ್ ಒಂದು ಜೀವ ತೆಳೆದಿದೆ. ಈ ಹಿಂದೆ ವಿಶ್ವವನ್ನೇ ನಡುಗಿಸಿದ್ದ ಮಹಾಮಾರಿ ಕರೊನಾ ವೈರಸ್ ಗುಣಲಕ್ಷಣಗಳನ್ನೇ ಹೋಲುವ ಮತ್ತೊಂದು ವೈರಸ್ ಚೀನಾದಲ್ಲಿ ಹರಡುತ್ತಿದೆ. ಹೊಸ ವರ್ಷದ ಸಂತೋಷ ಮತ್ತು ನಿರೀಕ್ಷೆಗಳನ್ನು ಈ ವೈರಸ್ ಕಸಿದುಕೊಂಡಿದ್ದು, ಜನರಲ್ಲಿ ತೀವ್ರ ಭಯ ಹುಟ್ಟಿಸುತ್ತಿದೆ.
2025ರ ಆರಂಭದಲ್ಲೇ ಈ ವೈರಸ್ ಪತ್ತೆಯಾಗಿದ್ದು, ಈ ವರ್ಷವು ವೈರಸ್ನಿಂದ ನರಕವಾಗುತ್ತಾ? ಈ ವೈರಸ್ ಎಂತಹ ದುಷ್ಕೃತ್ಯಗಳನ್ನು ಸೃಷ್ಟಿಸುವ ಸಾಧ್ಯತೆಯಿದೆ? ಬಲ್ಗೇರಿಯನ್ನ ನಿಗೂಢ ಮಹಿಳೆ ಹಾಗೂ ಅತೀಂದ್ರಿಯ ಭವಿಷ್ಯಗಾರ್ತಿ ಎಂದೇ ಖ್ಯಾತಿ ಪಡೆದಿರುವ ಬಾಬಾ ವಂಗಾ ಮತ್ತು ಫ್ರೆಂಚ್ ತತ್ವಜ್ಞಾನಿ ಹಾಗೂ ಪ್ರವಾದಿ ನಾಸ್ಟ್ರಾಡಾಮಸ್ ಹೇಳಿದ್ದು ನಿಜವಾಗುವುದೇ? 2025 ಜಗತ್ತಿನ ವಿನಾಶ ಆರಂಭ ಎಂದು ಭವಿಷ್ಯ ನುಡಿದಿದ್ದರು. ಈ ವೈರಸ್ ಅದರ ಮುನ್ಸೂಚನೆಯೇ?
ಚೀನಾದಲ್ಲಿ ಹುಟ್ಟಿಕೊಂಡ ವೈರಸ್ ಹೊಸ ವರ್ಷದ ಆರಂಭದಲ್ಲಿ ಜಗತ್ತನ್ನು ಜಾಗೃತಗೊಳಿಸುತ್ತಿದೆ. ಕರೊನಾ ಬಿಟ್ಟುಹೋದ ದುಃಸ್ವಪ್ನದಿಂದ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಅಷ್ಟರಲ್ಲೇ ಅದೇ ರೋಗಲಕ್ಷಣಗಳನ್ನು ಹೊಂದಿರುವ ಮತ್ತೊಂದು ವೈರಸ್ ಹರಡುತ್ತಿದ್ದಂತೆ ಹೊಸ ಭಯ ಪ್ರಾರಂಭವಾಗಿದೆ. ಚೀನಾದಲ್ಲಿ HMPV (ಹ್ಯೂಮನ್ ಮೆಟಾಪ್ನ್ಯೂಮೋವೈರಸ್) ಭಯ ಹುಟ್ಟಿಸುತ್ತಿದೆ. ಚೀನಾದಲ್ಲಿ ಆಸ್ಪತ್ರೆಗಳು ರೋಗಿಗಳಿಂದ ತುಂಬಿ ತುಳುಕುತ್ತಿವೆ. ಹೀಗಾಗಿ ಜಗತ್ತಿನ ಇತರೆ ರಾಷ್ಟ್ರಗಳು ಅಲರ್ಟ್ ಆಗಿವೆ. ಭಾರತವೂ ಕೂಡ ಕಟ್ಟುನಿಟ್ಟಿನ ಕ್ರಮವನ್ನು ತೆಗೆದುಕೊಂಡಿದೆ. ಆದರೂ, ಭಾರತಕ್ಕೆ ಈ ವೈರಸ್ ಕಾಲಿಟ್ಟಿದೆ. ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ HMPV ವೈರಸ್ ಪತ್ತೆಯಾಗಿದೆ. 8 ತಿಂಗಳ ಮಗುವಿನಲ್ಲಿ ಈ ವೈರಸ್ ಕಾಣಿಸಿಕೊಂಡಿದೆ.
ಈ HMPV ವೈರಸ್, ಕರೊನಾದಂತೆ ಒಂದು ಸಾಂಕ್ರಾಮಿಕ ರೋಗ. ಇದು ಕೂಡ ಮಾರಣಾಂತಿಕವಾಗಿದೆ ಎಂದು ಹೇಳಲಾಗುತ್ತಿದೆ. HMPV ಸೋಂಕಿತ ಜನರು ಕೆಮ್ಮು, ಜ್ವರ ಮತ್ತು ಉಸಿರಾಟದ ತೊಂದರೆ ಅನುಭವಿಸುತ್ತಾರೆ. ಈ ವೈರಸ್ 200 ರಿಂದ 400 ವರ್ಷಗಳ ಹಿಂದೆ ಪಕ್ಷಿಗಳಿಂದ ಹುಟ್ಟಿಕೊಂಡಿದೆ ಎಂದು ನಂಬಲಾಗಿದೆ. ಅಂದಿನಿಂದ, ಈ ವೈರಸ್ ಪದೇಪದೆ ರೂಪಾಂತರಗೊಳ್ಳುತ್ತಿದೆ. ಪ್ರಸ್ತುತ, ಇದು ಪಕ್ಷಿಗಳಿಗೆ ಸೋಂಕು ತಗುಲುವುದಿಲ್ಲ. ಈ ವೈರಸ್ ಅನ್ನು 2001 ರಲ್ಲಿ ಮಾನವರಲ್ಲಿ ಗುರುತಿಸಲಾಯಿತು. ಈ ವೈರಸ್ ಸೋಂಕು ಹೆಚ್ಚಾದಾಗ ಅದು ಬ್ರಾಂಕೈಟಿಸ್ ಮತ್ತು ನ್ಯುಮೋನಿಯಾವನ್ನು ಉಂಟುಮಾಡುವ ಸಾಧ್ಯತೆಯಿದೆ. ವೈರಸ್ ಆಕ್ರಮಣ ಸಮಯ ಸಾಮಾನ್ಯವಾಗಿ 3 ರಿಂದ 6 ದಿನಗಳು. ಮಕ್ಕಳು, ವೃದ್ಧರು ಮತ್ತು ದುರ್ಬಲ ರೋಗನಿರೋಧಕ ಶಕ್ತಿ ಹೊಂದಿರುವವರು ಈ ವೈರಸ್ ಸೋಂಕಿಗೆ ಒಳಗಾಗುವ ಸಾಧ್ಯತೆಯಿದೆ. HMPV ವೈರಸ್ ಎಲ್ಲಾ ವಯಸ್ಸಿನ ಜನರಿಗೆ ಮಾರಕವಾಗಿದೆ.
ಕರೊನಾ ಒಂದು ಸ್ಯಾಂಪಲ್ ಅಷ್ಟೇ. ಮುಂದಿನ ದಿನಗಳಲ್ಲಿ ಇನ್ನಷ್ಟು ಅನಾಹುತಗಳನ್ನು ಕಾಣಬಹುದಾಗಿದೆ ಎಂದು ಕೋವಿಡ್ ಅವಧಿಯಲ್ಲೇ ಹೇಳಲಾಗಿತ್ತು. ಅನೇಕ ರೋಗಗಳು ಜಗತ್ತನ್ನು ಆವರಿಸಲು ಕಾಯುತ್ತಿವೆ. ಸ್ವಲ್ಪ ಯಾಮಾರಿದರೂ ಬಲಿಯಾಗಬೇಕಾಗುತ್ತದೆ. 2025ರಲ್ಲಿ ಕಾಡುವ ರೋಗಗಳು ಯಾವುವು? ಈ ವರ್ಷ ನಾವು ನರಕವನ್ನು ನೋಡಲಿದ್ದೇವೆಯೇ? ವೈದ್ಯರು ಯಾವ ಎಚ್ಚರಿಕೆಗಳನ್ನು ನೀಡುತ್ತಾರೆ? ಜಗತ್ತಿನ ಬೆಳವಣಿಗೆಗಳು ಏನು ಹೇಳುತ್ತಿವೆ? ಎನ್ನುವುದನ್ನು ನೋಡುವುದಾದರೆ ಆರೋಗ್ಯ ಬಿಕ್ಕಟ್ಟನ್ನು ಉಂಟುಮಾಡುವ ಮತ್ತು 2025ರಲ್ಲಿ ಮತ್ತೊಂದು ಸಾಂಕ್ರಾಮಿಕ ರೋಗವಾಗುವ ಅಪಾಯದಲ್ಲಿರುವ ರೋಗಗಳನ್ನು ಗುರುತಿಸಲಾಗಿದೆ. ಇವುಗಳಲ್ಲಿ 5 ರೋಗಗಳು ತುಂಬಾ ಭಯಾನಕವಾಗಿವೆ. ಇದರೊಂದಿಗೆ, ಜಗತ್ತು ಭಯಾನಕ ಸನ್ನಿವೇಶಗಳನ್ನು ಎದುರಿಸುವುದು ಖಚಿತವಾಗಿದೆ.
* ಸಿಡುಬು
* ಹಕ್ಕಿ ಜ್ವರ
* ದಡಾರ
* ಡೆಂಗ್ಯೂ
* ಚಿಕೂನ್ ಗುನ್ಯಾ
* ಪಶ್ಚಿಮ ನೈಲ್ ಜ್ವರ
* ಸ್ಕೇಬೀಸ್
* ಕಾಲರಾ
* ಮಂಕಿ ಫಾಕ್ಸ್
ಈಗಾಗಲೇ ಈ ರೋಗಗಳು ವಿಶ್ವದಲ್ಲಿ ಅಲ್ಲಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿವೆ. ಮುಂದಿನ ದಿನಗಳಲ್ಲಿ ಈ ರೋಗಗಳ ತೀವ್ರತೆ ಹೆಚ್ಚಾಗಲಿದೆ ಎಂದು ಹೇಳಲಾಗುತ್ತಿದೆ. ಅದರಲ್ಲೂ ಮಂಕಿಫಾಕ್ಸ್, ಹಕ್ಕಿ ಜ್ವರ, ಡೆಂಗ್ಯೂ, ಚಿಕನ್ ಗುನ್ಯಾ ಮತ್ತು ಪಶ್ಚಿಮ ನೈಲ್ ಜ್ವರ ಹೆಚ್ಚು ಅಪಾಯಕಾರಿಯಾಗಲಿವೆ ಎಂದು ಕೆಲ ಸಂಶೋಧನೆಗಳು ಎಚ್ಚರಿಸಿವೆ. ಅತಿ ಹೆಚ್ಚು ನಗರೀಕರಣ, ಪರಿಸರ ನಾಶ ಹಾಗೂ ಹವಾಮಾನ ಬದಲಾವಣೆಗಳಿಂದ ಈ ಪರಿಸ್ಥಿತಿ ನಿರ್ಮಾಣವಾಗಲಿದೆ. ಎಚ್ಎಂಪಿವಿ ವರ್ಷದ ಆರಂಭದಲ್ಲೇ ಶಾಕ್ ಕೊಟ್ಟಿದ್ದು, ಮುಂದಿನ ದಿನಗಳಲ್ಲಿ ಈ ರೋಗ ಯಾವ ರೀತಿ ಪರಿಣಾಮ ಬೀರುತ್ತೆ ಎಂಬುದನ್ನು ಕಾದು ನೋಡಬೇಕಾಗುತ್ತದೆ. ಬಾಬಾ ವಂಗಾ ಮತ್ತು ನಾಸ್ಟ್ರಾಡಾಮಸ್ ಹೇಳಿದ ಭವಿಷ್ಯವಾಣಿಗಳ ಮೇಲೂ ಈ ವೈರಸ್ ಬೆಳಕು ಚೆಲ್ಲಿದೆ. (ಏಜೆನ್ಸೀಸ್)