ಪಾರ್ಕ್​ನಲ್ಲಿ ಆಟವಾಡುತ್ತಿರುವಾಗಲೇ ಮಗುವಿನ ದುರ್ಮರಣ

amusement park
Published on

ಮಿಕೊಲೆವ್​ ಸಿಟಿ: ನಾಲ್ಕು ವರ್ಷದ ಹುಡುಗಿಯೊಬ್ಬಳು ಆಟವಾಡುತ್ತಿದ್ದ ವೇಳೆ ಉಸಿರುಗಟ್ಟಿ ಮೃತಪಟ್ಟಿರುವ ದುರ್ಘಟನೆ ಉಕ್ರೇನ್​​ನ ಮಿಕೊಲೆವ್​ ಸಿಟಿಯ ಅಮ್ಯುಸ್​ಮೆಂಟ್​ ಪಾರ್ಕ್​ನಲ್ಲಿ ನಡೆದಿದೆ. ಬಲೂನಿನ ಟ್ರ್ಯಾಂಪೊಲೈನ್‌ನ ಕುಣಿಕೆಗಳಲ್ಲಿ ವಲೇರಿಯಾ ಎಂಬ 4 ವರ್ಷದ ಮಗು ಉಸಿರುಗಟ್ಟಿ ಸಾವನ್ನಪ್ಪಿದ್ದಾಳೆ.

ಘಟನೆ ವಿವರ:
ವಲೇರಿಯಾ ಅಮ್ಯುಸ್​ಮೆಂಟ್ ಪಾರ್ಕ್​ನಲ್ಲಿ ಆಟವಾಡುತ್ತಿದ್ದ ವೇಳೆ ಒಮ್ಮಿಂದೊಮ್ಮೆಲೆ ನಗುವನ್ನು ನಿಲ್ಲಿಸಿದೆ. ಆಗ ಮಗುವಿನ ತಾಯಿ ಅನ್ನಾ, ತನ್ನ ಮಗುವಿನ ನಗು ಕೇಳುತ್ತಿಲ್ಲ ಈ ಕುರಿತು ಒಮ್ಮೆ ಪರೀಕ್ಷಿಸುವಂತೆ ಕೇಳಿಕೊಂಡಾಗ ಅಲ್ಲಿಯೇ ಇದ್ದ ಮೂವರು ಮಹಿಳಾ ಉದ್ಯೋಗಿಗಳು ತಮ್ಮ ಫೋನ್‌ಗಳಲ್ಲಿ ಬಿಜಿ ಇದ್ದರು.

ಈ ವೇಳೆ ಮತ್ತೊಮ್ಮೆ ಅನ್ನಾ ಅವರಿಗೆ ಕೇಳಿಕೊಂಡಾಗ ಪಾರ್ಕ್​ನ ಸಿಬ್ಬಂದಿ, ಮಗುವನ್ನು ಪರೀಕ್ಷಿಸಿದ್ದಾರೆ. ಆಗ ಮಗು ಹಗ್ಗದ ಕುಣಿಕೆಗಳಲ್ಲಿ ಸಿಕ್ಕಿಹಾಕಿಕೊಂಡಿರುವುದು ಕಂಡುಬಂದಿದೆ. ತಕ್ಷಣವೇ ಮಗುವಿನ ತಾಯಿ, ತನ್ನ ಮಗಳು ಪ್ರಜ್ಞೆ ಕಳೆದುಕೊಂಡಿದ್ದಾಳೆ ಎಂದು ಭಾವಿಸಿ ಅವಳನ್ನು ಎಬ್ಬಿಸಲು ಪ್ರಯತ್ನಿಸಿದ್ದಾಳೆ.

ಅಷ್ಟೋತ್ತಿಗೆ, ಸ್ಥಳೀಯರೊಬ್ಬರು ಆಂಬ್ಯುಲೆನ್ಸ್‌ಗೆ ಕರೆ ಮಾಡಿದ್ದಾರೆ. ವೈದ್ಯಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಮಗುವನ್ನು ಪರೀಕ್ಷಿಸಿದಾಗ ಮಗು ಅದಾಗಲೇ ಮೃತಪಟ್ಟಿತ್ತು. ಮೇಲ್ವಿಚಾರಣಾ ಸಿಬ್ಬಂದಿಗಳ ನಿರ್ಲಕ್ಷ್ಯತನವೇ ಘಟನೆಗೆ ಕಾರಣ ಎಂದು ಮಗುವಿನ ತಾಯಿ ಅನ್ನಾ ಆರೋಪಿಸಿದ್ದಾರೆ. ಘಟನೆ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net