ಇಲ್ಲಿನ ಜನರಿಗೆ ಗುಡ್ಡ ಹತ್ತಿದರೆ ಮಾತ್ರ ಸಿಗುತ್ತೆ ಆಯುಷ್ಮಾನ್ ಕಾರ್ಡ್!

ayushman
Published on

ಚಿಕ್ಕಮಗಳೂರು: ಇದು ಒಂಥರಾ ವಿಚಿತ್ರ ಸನ್ನಿವೇಶ. ಇಲ್ಲಿನ ಜನ ಆಯುಷ್ಮಾನ್ ಕಾರ್ಡ್ ಬೇಕು ಅಂದ್ರೆ ಗುಡ್ಡ ಹತ್ತಬೇಕು. ಒಬ್ಬರೋ ಇಬ್ಬರೋ ಅಲ್ಲ, ಪ್ರತಿದಿನವೂ ಹೀಗೆ ನೂರಾರು ಜನ ಇಲ್ಲಿ ಗುಡ್ಡ ಹತ್ತುತ್ತಾರೆ. ಗುಡ್ಡ ಹತ್ತಿದ ನಂತರವೇ ಅವರಿಗೆ ಆಯುಷ್ಮಾನ್ ಕಾರ್ಡ್ ಸಿಗುತ್ತದೆ.

ಹೌದು. ಇದು ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ಸಂಸೆ ಸಮೀಪದ ಕಾರ್ಲೆ ಕಳಕೋಡು ಗ್ರಾಮದ ಪರಿಸ್ಥಿತಿ. ಇಲ್ಲಿ ಬಹುತೇಕ ಸಮಯ ವಿದ್ಯುತ್ ಹಾಗೂ ನೆಟ್ವರ್ಕ್ ಇರುವುದಿಲ್ಲ. ಧರ್ಮಸ್ಥಳ ಸಂಘದವರು ಅಯುಷ್ಮಾನ್ ಕಾರ್ಡ್ ನೋಂದಣಿ ಕಾರ್ಯಕ್ರಮ ಇಟ್ಟುಕೊಂಡಿದ್ದರು. ನೆಟ್ವರ್ಕ್ ಸಿಗದೇ ಇದ್ದುದರಿಂದ ಕಾರ್ಡ್ ನೋಂದಣಿಗೆ ಸಂಘಟಕರು ಮತ್ತು ಸ್ಥಳೀಯರು ಪಕ್ಕದ ಬೆಟ್ಟ ಹತ್ತಿದರು. ಅಲ್ಲೇ ಕಾರ್ಡ್ ನೋಂದಣಿ ಮಾಡಿದರು.

ಬಹಳ ದಿನಗಳಿಂದ ಈ ಪರಿಸ್ಥಿತಿ ಇದೆ. ಸಂಬಂಧಿಸಿದ ಅಧಿಕಾರಿಗಳು ಈ ಗ್ರಾಮದ ವಿದ್ಯುತ್ ಮತ್ತು ನೆಟ್ವರ್ಕ್ ಸಮಸ್ಯೆ ಬಗೆಹರಿಸಬೇಕು ಎಂಬುದು ಗ್ರಾಮಸ್ಥರ ಆಗ್ರಹ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net