ಎರಡು ದಿನದ ಹಿಂದೆ ಸಿಡಿ ಯುವತಿ ಮೊಬೈಲ್​ ದೆಹಲಿಯಲ್ಲಿ ಆನ್​! ಈಗೆಲ್ಲಿದ್ದಾಳೆ?

CD case
Published on

ಬೆಂಗಳೂರು: ಮಾಜಿ ಸಚಿವ ಜಾರಕಿಹೊಳಿಯದ್ದು ಎನ್ನಲಾದ ಸೆಕ್ಸ್​ ಸಿಡಿಯಲ್ಲಿ ಕಾಣಿಸಿಕೊಂಡಿದ್ದ ಯುವತಿ ಸಿಡಿ ಹೊರಬಂದ ಕೂಡಲೇ ಸಿಡಿ ಕೇಸ್​ನ ಶಂಕಿತ ಕಿಂಗ್​ಪಿನ್, ಹ್ಯಾಕರ್ ಜತೆ ಬೆಂಗಳೂರು ಬಿಟ್ಟಿದ್ದಾಳೆ. ಬೆಂಗಳೂರಿಂದ ನೇರವಾಗಿ ಗೋವಾ ತಲುಪಿದ್ದ ಅವರು ಈಗ ಎಲ್ಲಿದ್ದಾರೆ ಗೊತ್ತಾ?

ಎಸ್​ಐಟಿ ತಂಡ ವಿಚಾರಣೆ ನಡೆಸಲು ಯುವತಿಗಾಗಿ ಹುಡುಕಾಟ ನಡೆಸುತ್ತಿದೆ. ಶಂಕಿತ ಕಿಂಗ್​ಪಿನ್​, ಹ್ಯಾಕರ್​ ಮತ್ತು ಯುವತಿ ಮೂವರು ಗೋವಾದಲ್ಲೇ ಇದ್ದುಕೊಂಡು ಕರ್ನಾಟಕದಲ್ಲಿ ಆಗುತ್ತಿರುವ ಸಿಡಿ ಕೇಸ್​ನ ಬೆಳವಣಿಗೆ ಬಗ್ಗೆ ಮಾಹಿತಿ ಪಡೆಯುತ್ತಿದ್ದರು. ಖಾಕಿ ಕಣ್ಣು ತಮ್ಮತ್ತ ಬಿದ್ದಿದೆ ಎಂದು ಗೊತ್ತಾಗುತ್ತಿದ್ದಂತೆ ಆ ಮೂವರು ಅಲ್ಲಿಂದ ಎಸ್ಕೇಪ್ ಆಗಿದ್ದಾರೆ. ಊರೂರು ಸುತ್ತುತ್ತಿರುವ ಆರೋಪಿಗಳು ದಿನಕ್ಕೊಂದು ಜಾಗ ಬದಲಿಸುತ್ತಿದ್ದಾರಂತೆ. ಎರಡು ದಿನದ ಹಿಂದೆ ಯುವತಿಯ ಮೊಬೈಲ್ ದೆಹಲಿಯಲ್ಲಿ ಆನ್ ಆ್ಯಂಡ್ ಆಫ್ ಆಗಿದೆ! ಇದನ್ನೂ ಓದಿರಿ ತವರು ಮನೆಯಲ್ಲಿ ಮಗಳು ಆತ್ಮಹತ್ಯೆ! ಸಾವಿಗೂ ಮುನ್ನ ಮನದ ದುಃಖ ಅಕ್ಷರಕ್ಕಿಳಿಸಿದ ಸುಂದರಿ

ಎಸ್ಐಟಿ ತಂಡ ಯುವತಿಯನ್ನ ಪತ್ತೆ ಹಚ್ಚಲು ನಿರಂತರ ಕಾರ್ಯಾಚರಣೆ ನಡೆಸುತ್ತಲೇ ಇದೆ. ಎರಡು ದಿನಗಳ ಹಿಂದೆ ಯುವತಿ ಮೊಬೈಲ್ ದೆಹಲಿಯಲ್ಲಿ ಆನ್ ಆಗಿ ಮತ್ತೆ ಆಫ್ ಆಗಿದೆ. ಸದ್ಯ ಎಸ್ಐಟಿ ಟೀಂ ದೆಹಲಿಗೆ ತೆರಳಿದೆ. ದೆಹಲಿಯಲ್ಲೇ ಯುವತಿ ಇರಬಹುದಾ? ಆಕೆಯ ಜತೆ ಕಿಂಗ್​ಪಿನ್ ಮತ್ತು ಹ್ಯಾಕರ್ ಕೂಡ ಇರಬಹುದಾ? ಎಂಬ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿರಿ ಸಿಡಿ ಕೇಸ್​ನ ಯುವತಿ ಮನೆಯಲ್ಲಿ ಲಕ್ಷಲಕ್ಷ ಹಣ ಪತ್ತೆ! ಕಿಂಗ್​ಪಿನ್​​ ಮನೆಯಲ್ಲಿ ‘ಸ್ವರ್ಣ’ ಸಂಪತ್ತು

ಮೊದಲಿಗೆ ಗೋವಾ, ಬಳಿಕ ಚೆನ್ನೈ, ಹೈದ್ರಾಬಾದ್​ನತ್ತ ಹೋಗಿದ್ದ ಮಾಹಿತಿ ಲಭ್ಯವಾಗಿದೆ. ಹೈದ್ರಾಬಾದ್​ನಿಂದ ಎರ್ನಾಕುಲಂ ಮತ್ತೆ ಕೊಚ್ಚಿಯತ್ತ ಓಡಾಡಿರುವ ಮಾಹಿತಿ ಸಿಕ್ಕಿದೆ. ಎರಡು ದಿನದ ಹಿಂದೆ ದೆಹಲಿಗೆ ತಲುಪಿದ್ದಾರೆ. ದೆಹಲಿ ಮತ್ತು ಅಕ್ಕಪಕ್ಕದ ರಾಜ್ಯಗಳಲ್ಲಿ ಯುವತಿ ಮತ್ತು ಇಬ್ಬರು ಅರೋಪಿಗಳಿಗಾಗಿ ಎಸ್​ಐಟಿ ತಂಡ ಹುಡುಕಾಟ ನಡೆಸುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net