ರಾಜ್ಯದ 12 ಕಡೆ ಸಿಬಿಐ ದಾಳಿ; ಕರ್ನಾಟಕದಲ್ಲಿ ಜಪ್ತಿಯಾದ ಹಣವೆಷ್ಟು?

cbi
Published on

ಬೆಂಗಳೂರು: ದೇಶದಾದ್ಯಂತ ಅ.4 ರಂದು ಅಂತಾರಾಷ್ಟ್ರೀಯ ಸೈಬರ್​​ ಗ್ಯಾಂಗ್​ಗಳಿಗೆ ಸಂಬಂಧಿಸಿ ಸಿಬಿಐ ದಾಳಿ ಮಾಡಿತ್ತು. ಸಿಬಿಐ ಎಂಟು ರಾಜ್ಯಗಳಲ್ಲಿ 115 ಕಡೆ ದಾಳಿ ಮಾಡಿ ಹಲವು ಅಗತ್ಯದ ಮಾಹಿತಿಗಳನ್ನು ಸಂಗ್ರಹಿಸಿತ್ತು. ಆಪರೇಷನ್​ ಚಕ್ರ ಹೆಸರಿನಲ್ಲಿ ನಡೆದ ದಾಳಿಯಲ್ಲಿ ಹಲವು ಕಡೆಗಳಲ್ಲಿ ನಗದು ಮೊತ್ತವನ್ನು ಕೂಡಾ ವಶಪಡಿಸಿಕೊಳ್ಳಲಾಗಿದೆ.

ಅಂತಾರಾಷ್ಟ್ರೀಯ ಸೈಬರ್​​ ಗ್ಯಾಂಗ್​ಗಳಿಗೆ ಸಂಬಂಧಿಸಿ ಸಿಬಿಐ ಕರ್ನಾಟಕದ 12 ಕಡೆ ದಾಳಿ ಮಾಡಿದೆ. ಸಿಬಿಐ, ಇಂಟರ್​ಪೋಲ್, ಎಫ್​​ಬಿಐ ಕೆನಡಾ ಪೊಲೀಸ್ ಹಾಗೂ ಆಸ್ಟ್ರೇಲಿಯಾ ಸಹಯೋಗದಲ್ಲಿ ದಾಳಿ ನಡೆದಿದೆ. ಈ ವೇಳೆ ರಾಜ್ಯದಲ್ಲಿ 1.8 ಕೋಟಿ ರೂ. ಹಾಗೂ 1.5 ಕೆ.ಜಿ ಚಿನ್ನ ವಶಪಡಿಸಿಕೊಂಡಿದೆ.

ಸಿಬಿಐ ದಾಳಿ ವೇಳೆ ರಾಜ್ಯದಿಂದ ಹಲವು ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದೆ. ಕರ್ನಾಟಕದ ವಿವಿಧ ಬ್ಯಾಂಕ್​​ಗಳಲ್ಲಿ 1.89 ಕೋಟಿ ರೂ. ಇರುವುದು ಪತ್ತೆಯಾಗಿದೆ. ಸದ್ಯ ಸಿಬಿಐ ಅಧಿಕಾರಿಗಳು ಹಣವನ್ನು ಜಪ್ತಿ ಮಾಡಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net