ಭೀಕರ ಅಪಘಾತ: ನಾಲೆಗೆ ಬಿದ್ದ ಕಾರು, ನಾಲ್ವರ ಸಾವು, ಚಾಲಕನೊಬ್ಬನೇ ಬಚಾವ್!

Car (5)
ನಾಲೆಗೆ ಅಡಿಮೇಲಾಗಿ ಬಿದ್ದು ಬಹುತೇಕ ಮುಳುಗಿರುವ ಕಾರು.
Published on

ಮಂಡ್ಯ: ಕಾರೊಂದು ನಾಲೆಗೆ ಬಿದ್ದು ಭೀಕರ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ಐವರ ಪೈಕಿ ನಾಲ್ವರು ಸಾವಿಗೀಡಾಗಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ಇಂದು ಈ ಭೀಕರ ಅಪಘಾತ ಸಂಭವಿಸಿದೆ.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಗಾಮನಹಳ್ಳಿ ಬಳಿ ಚಾಲಕನ ನಿಯಂತ್ರಣ ತಪ್ಪಿದ ಕಾರು ಸೀದಾ ನಾಲೆಗೆ ಹೋಗಿ ಬಿದ್ದಿದೆ. ಕಾರಿನಲ್ಲಿ ಐವರು ಇದ್ದಿದ್ದು, ಚಾಲಕ ಹೊರತುಪಡಿಸಿ ಎಲ್ಲರೂ ಸಾವಿಗೀಡಾಗಿದ್ದಾರೆ.

ಸಂಜನಾ (17), ಮಮತಾ (45), ಮಹದೇವ (55), ರೇಖಾ (36) ಸಾವಿಗೀಡಾದವರು. ಮೃತಪಟ್ಟವರೆಲ್ಲರೂ ಗಾಮನಹಳ್ಳಿ ಗ್ರಾಮದವರು. ಇವರು ದೇವತಾಕಾರ್ಯಕ್ಕೆ ಸಂಬಂಧಿಕರನ್ನು ಆಹ್ವಾನಿಸಲು ಹೋಗಿದ್ದಾಗ ಈ ಅಪಘಾತ ಸಂಭವಿಸಿದೆ.

ಇವರು ಗೊರವನಹಳ್ಳಿಯಿಂದ ದೊಡ್ಡ ಮಲಗೂಡಿಗೆ ತೆರಳುತ್ತಿದ್ದಾಗ ಇಂಡಿಕಾ ಕಾರು ತಡೆಗೋಡೆಗೆ ಡಿಕ್ಕಿ ಹೊಡೆದು ನಾಲೆಗೆ ಬಿದ್ದಿದೆ. ಮಮತಾ ಎಂಬಾಕೆಯ ಪುತ್ರ ಮನೋಜ್ ಕಾರು ಚಲಾಯಿಸುತ್ತಿದ್ದು, ಆತ ಮಾತ್ರ ಬಚಾವಾಗಿದ್ದು, ಮತ್ತೆಲ್ಲರೂ ಸಾವಿಗೀಡಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net