ಸಂಪುಟದ ಬಗ್ಗೆ ಅಚ್ಚರಿ ಹೇಳಿಕೆ ಕೊಟ್ಟ ಸಿಎಂ, ಹಾಲಿ ಸಚಿವರಿಗೆ ಟೆನ್ಷನ್​

bsy
Published on

ಬೆಂಗಳೂರು: ಬಿ.ಎಸ್​. ಯಡಿಯೂರಪ್ಪ ನೇತೃತ್ವದ ರಾಜ್ಯ ಸಚಿವ ಸಂಪುಟ ವಿಸ್ತರಣೆ ನಾಳೆ(ಬುಧವಾರ) ನಡೆಯಲಿದ್ದು, 7ರಿಂದ 8 ಮಂದಿ ನೂತನ ಸಚಿವರಾಗಿ ಪ್ರಮಾಣ ಸ್ವೀಕರಿಸಲಿದ್ದಾರೆ.

ಸದ್ಯ ಸಂಪುಟದಲ್ಲಿ 7 ಖಾತೆಗಳು ಮಾತ್ರವೇ ಖಾಲಿ ಇದೆ. ಆದರೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಾಳೆ ಮಧ್ಯಾಹ್ನ 3:30ಕ್ಕೆ 7-8 ಮಂದಿ ಪ್ರಮಾಣವಚನ ಸ್ವೀಕರಿಸುತ್ತಾರೆ ಎಂದಿದ್ದಾರೆ. ಆ ಮೂಲಕ ಒಬ್ಬ ಹಾಲಿ ಸಚಿವರಿಗೆ ಕೋಕ್ ನೀಡುವುದು ಬಹುತೇಕ ಖಚಿತ ಎಂಬಂತಾಗಿದ್ದು. ಹಾಲಿ ಸಚಿವರ ಎದೆಯಲ್ಲಿ ಟೆನ್ಷನ್ ಶುರುವಾಗಿದೆ. ಇದನ್ನೂ ಓದಿರಿ ತಾನೇ ಸಾಕಿದ್ದ ಹಸುಗೆ ಬಲಿಯಾದ ಬಾಲಕ! ಮುಗಿಲುಮುಟ್ಟಿದೆ ಕುಟುಂಬಸ್ಥರ ಆಕ್ರಂದನ

ನೂತನ ಸಚಿವರ ಪಟ್ಟಿಯನ್ನು ಇಂದು ಸಂಜೆ ಅಥವಾ ನಾಳೆ ಬೆಳಗ್ಗೆ ಬಿಡುಗಡೆ ಮಾಡುತ್ತೇವೆ ಎಂದು ಸಿಎಂ ಹೇಳಿದ್ದಾರೆ.

ರಾಜ್ಯ ಸಚಿವ ಸಂಪುಟದಿಂದ ಕೋಕ್ ನೀಡುವ ಒಬ್ಬ ಸಚಿವರ ಪಟ್ಟಿಯಲ್ಲಿ ನಾಗೇಶ್, ಕೋಟಾ ಶ್ರೀನಿವಾಸ ಪೂಜಾರಿ, ಶಶಿಕಲಾಜೊಲ್ಲೆ, ಸಿ.ಸಿ.ಪಾಟೀಲ್, ಪ್ರಭುಚೌಹಾಣ್​ರ ಪೈಕಿ ಒಬ್ಬರ ಹೆಸರು ಇದೆ ಎನ್ನಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net