ಅಬಕಾರಿ ನೀತಿ ಹಗರಣ; BRS ನಾಯಕಿ ಕವಿತಾಗೆ ಸಿಬಿಐ ಸಮನ್ಸ್​​

K Kavita
Published on

ನವದೆಹಲಿ: 2020-21ರಲ್ಲಿ ದೆಹಲಿ ಸರ್ಕಾರ ಜಾರಿಗೆ ತಂದಿದ್ದ ಅಬಕಾರಿ ನೀತಿಯಲ್ಲಿನ ಅಕ್ರಮಕ್ಕೆ ಸಂಬಂಧಿಸಿದಂತೆ ಭಾರತ ರಾಷ್ಟ್ರ ಸಮಿತಿ ನಾಯಕಿ, ತೆಲಂಗಾಣ ಮಾಜಿ ಸಿಎಂ ಕೆಸಿಆರ್​ ಪುತ್ರಿ ಕೆ. ಕವಿತಾ ಕೇಂದ್ರಿಯಾ ತನಿಖಾ ದಳ (CBI) ನೋಟಿಸ್​ ಜಾರಿ ಮಾಡಿದೆ.

ಅಬಕಾರಿ ನೀತಿಯಲ್ಲಿನ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಬಿಐ ಕವಿತಾಗೆ ಎರಡನೇ ಭಾರಿಗೆ ಸಮನ್ಸ್​ ಜಾರಿ ಮಾಡಿದ್ದು, ಫೆಬ್ರವರಿ 26ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ಈ ಹಿಂದೆ 2023ರ ಡಿಸೆಂಬರ್​ನಲ್ಲಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್​ ಜಾರಿ ಮಾಡಲಾಗಿತ್ತು.

ಅಬಕಾರಿ ನೀತಿಯಲ್ಲಿನ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಲ್ಲಿ ಒಬ್ಬರಾದ ವಿಜಯ್ ನಾಯರ್ ಎಂಬುವವರು ಸೌತ್​ ಗ್ರೂಪ್​ ಎಂಬ ಕಂಪನಿಯಿಂದ ಎಎಪಙಇ ನಾಯಕರ ಪರವಾಗಿ ನೂರು ಕೋಟಿ ರೂಪಾಯಿ ಕಿಕ್​ಬ್ಯಾಕ್​ ಪಡೆದಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಈ ಸಂಬಂಧ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net