More

    ಅಖಿಲೇಶ್​ ಹಠ ಮೇಲುಗೈ; ಸೈಕಲ್​ ತುಳಿತಕ್ಕೆ ಸಿಲುಕಿದ ಕಾಂಗ್ರೆಸ್​ಗೆ ಸಿಕ್ಕ ಸೀಟುಗಳೆಷ್ಟು?

    ಲಖನೌ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆ್ಸ್ ಹಾಗೂ ಸಮಾಜವಾದಿ ಪಕ್ಷ ಉತ್ತರಪ್ರದೇಶದಲ್ಲಿ ಜಂಟಿಯಾಗಿ ಹೋರಾಡಲಿದ್ದು, ಸೀಟು ಹಂಚಿಕೆ ವಿಚಾರಚಾಗಿ ಭುಗಿಲೆದ್ದಿದ ಅಸಮಾಧಾನವು ತಣಿಸಲಾಗಿದೆ ಎಂದು ಇಂಡಿಯಾ ಮೈತ್ರಿಕೂಟದ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.

    ಉತ್ತರಪ್ರದೇಶದ 80 ಲೋಕಸಭೆ ಕ್ಷೇತ್ರಗಳ ಪೈಕಿ ಕಾಂಗ್ರೆಸ್ 17 ಹಾಗೂ ಸಮಾಜವಾದಿ ಪಕ್ಷವು 63 ಸ್ಥಾನಗಳಲ್ಲಿ ಸ್ಫರ್ಧಿಸಲಿದೆ ಎಂದು ತಿಳಿದು ಬಂದಿದೆ. ಸಮಾಜವಾದಿ ಪಕ್ಷದ ಬೇಡಿಕೆಗೆ ಕಾಂಗ್ರೆಸ್​ ಸಮ್ಮತಿಸಿದೆ ಎಂದು ಉನ್ನತ ಸುದ್ದಿ ಮೂಲಗಳು ತಿಳಿಸಿವೆ.

    ಇದನ್ನೂ ಓದಿ: ಗಲ್ಫ್ ಕನ್ನಡಿಗರ ಒಕ್ಕೂಟದ ಬೇಡಿಕೆಗಳ ಕುರಿತು ಅಧಿವೇಶನದಲ್ಲಿ ಚರ್ಚೆ

    ಇಂಡಿಯಾ ಮೈತ್ರಿಕೂಟವು ಘೋಷಿಸಿದ ಮೊದಲ ಸೀಟು ಹಂಚಿಕೆ ಇದಾಗಿದ್ದು, ಕಾಂಗ್ರೆಸ್​ ರಾಯ್ಬರೇಲಿ, ಅಮೇಥಿ, ಕಾನ್ಪುರ ನಗರ, ಫತೇಪುರ್ ಸಿಕ್ರಿ, ಬಸ್ಗಾಂವ್, ಸಹರಾನ್ಪುರ್, ಪ್ರಯಾಗ್ರಾಜ್, ಮಹಾರಾಜ್ಗಂಜ್, ಅಮ್ರೋಹಾ, ಝಾನ್ಸಿ, ಬುಲಂದ್ಶಹರ್, ಘಾಜಿಯಾಬಾದ್, ಮಥುರಾ, ಶಾಜಿಯಾಬಾದ್ ., ಬಾರಾಬಂಕಿ ಮತ್ತು ಡಿಯೋರಿಯಾದಲ್ಲಿ ಸ್ಫರ್ಧಿಸಲಿದೆ ಎಂದು ತಿಳಿದು ಬಂದಿದೆ.

    ಉತ್ತರ ಪ್ರದೇಶದ 80 ಲೋಕಸಭಾ ಸ್ಥಾನಗಳಿಗೆ ಎಸ್‌ಪಿ ಇದುವರೆಗೆ 31 ಅಭ್ಯರ್ಥಿಗಳನ್ನು ಘೋಷಿಸಿದೆ. ಮತ್ತೊಂದೆಡೆ ಮಾಯಾವತಿ ನೇತೃತ್ವದ ನಹುಜನ ಸಮಾಜ ಪಾರ್ಟಿಯಿಂದ ಆಯ್ಕೆಯಾಗಿರುವ 10 ಸಂಸದರು ಪಕ್ಷ ತೊರೆಯಬಹುದು ಎಂದು ಹೇಳಲಾಗಿದ್ದು, ಇವರೆಲ್ಲರೂ ಬಿಜೆಪಿಯ ಕದ ತಟ್ಟುವ ಸಾಧ್ಯತೆ ದಟ್ಟವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts