More

    ಗಲ್ಫ್ ಕನ್ನಡಿಗರ ಒಕ್ಕೂಟದ ಬೇಡಿಕೆಗಳ ಕುರಿತು ಅಧಿವೇಶನದಲ್ಲಿ ಚರ್ಚೆ

    ಬೆಂಗಳೂರು: ಅನಿವಾಸಿ ಕನ್ನಡಿಗರ ಬೇಡಿಕೆಗಳ ಕುರಿತು ವಿಧಾನಸಭೆ ಅಧಿವೇಶನದಲ್ಲಿ ಚರ್ಚೆಗೆ ಅವಕಾಶ ನೀಡಿದ ಸಭಾಪತಿ ಯುಟಿ ಖಾದರ್ ಅವರು ಅನಿವಾಸಿಗಳ ಬಗ್ಗೆ ಮತ್ತು ಅವರಿಗಿರುವ ನಾಡು ನುಡಿ ಬಗೆಗಿರುವ ಅಪರಿಮಿತ ಅಭಿಮಾನದ ಕುರಿತು ಹೊಗಳಿದರು. ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ, ಗೃಹ ಸಚಿವರಾದ ಜಿ.ಪರಮೇಶ್ವರ್ ಅವರು ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಪ್ರಚುರ ಪಡಿಸಿದಂತೆ ಈಗಾಗಲೇ NRI ಸಮಿತಿಯ ಉಪಾಧ್ಯಕ್ಷರನ್ನ ಡಾ. ಆರತಿಕೃಷ್ಣರವರನ್ನು ನೇಮಕ ಮಾಡಿದ್ದೇವೆ, ಮುಂದೆ ಕೇರಳದ ಮಾದರಿಯಂತೆ NRI ಸಚಿವಾಲಯವನ್ನು ಸ್ಥಾಪಿಸುವ ಭರವಸೆ ನೀಡಿದರು.

    ಅಧಿವೇಶನದ ಚರ್ಚೆಯ ಮೊದಲು, ಗಲ್ಫ್ ಕನ್ನಡಿಗರ ಒಕ್ಕೂಟದ ವತಿಯಿಂದ (NKRI Gulf Fourm) ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ, ಸಭಾಪತಿ ಯು.ಟಿ.ಖಾದರ್ ಮತ್ತು ಅನಿವಾಸಿ ಭಾರತೀಯ ಕೋಶದ ಉಪಾಧ್ಯಕ್ಷರಾದ ಡಾ. ಆರತಿ ಕೃಷ್ಣ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಗಲ್ಫ್ ಕನ್ನಡಿಗರು ಹಲವಾರು ಸಮಸ್ಯೆಗಳನ್ನ ಎದುರಿಸುತಿದ್ದು ಅವುಗಳ ಪರಿಹಾರಕ್ಕೆ KNRI ಸಚಿವಾಲಯವದ ಅಗತ್ಯವಿದೆ. ಕೇರಳ ರಾಜ್ಯದಲ್ಲಿ ಈ ಕುರಿತು ಅನಿವಾಸಿಗಳ ಸಮಸ್ಯೆಗಳಿಗೆ ಪರಿಹಾರ ಸೂಚಿಸಲು ಅಲ್ಲಿ ಪ್ರತ್ಯೇಕ ಸಚಿವಾಲಯವಿದ್ದೂ, ಅದೇ ಮಾದರಿಯಲ್ಲಿ ಕರ್ನಾಟಕದಲ್ಲಿಯೂ ಸಹ ಪ್ರಾರಂಭಿಸಬೇಕೆನ್ನುವ ಒಕ್ಕೂಟದ ಬೇಡಿಕೆಯಿಟ್ಟಿತು.

    ಕೊಲ್ಲಿ ರಾಷ್ಟ್ರಗಳಾದ ಯುಎಇ, ಕುವೈತ್, ಕತಾರ್, ಒಮಾನ್, ಬಹರೇನ್ ಮತ್ತು ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಿರುವ ಕನ್ನಡಿಗರು ರಚಿಸಿಕೊಂಡಿರುವ ಗಲ್ಫ್ ಕನ್ನಡಿಗರ ಒಕ್ಕೂಟದ ಅಧ್ಯಕ್ಷರಾದ ಇಬ್ರಾಹಿಂ ಖಲೀಲ್, ಉಪಾಧ್ಯಕ್ಷರುಗಳಾದ, ರಮಾನಂದ ಪ್ರಭು, ಇಬ್ರಾಹಿಂ ಹುಸೇನ್ ಅವರು ಈ ಸಂಧರ್ಭದಲ್ಲಿ ಹಾಜರಿದ್ದರು.

    Gulf Kannadigas

    ಇದನ್ನೂ ಓದಿ: ಎಲ್ಲಾ ಶಾಲೆಗಳಲ್ಲಿ ನಾಡಗೀತೆ ಹಾಡುವುದು ಕಡ್ಡಾಯ; ತಿದ್ದುಪಡಿ ಆದೇಶ ಹೊರಡಿಸಿದ ಸರ್ಕಾರ

    ಗಲ್ಫ್ ಕನ್ನಡಿಗರ ಒಕ್ಕೂಟವು, ಮಧ್ಯ ಪ್ರಾಚ್ಯರಾಷ್ಟ್ರಗಳಾದ ಯುಎಇ, ಕುವೈತ್, ಕತಾರ್, ಒಮಾನ್, ಬಹರೇನ್ ಮತ್ತು ಸೌದಿ ಅರೇಬಿಯಾದಲ್ಲಿ ಹಲವಾರು ದಶಕಗಳಿಂದ ಕೆಲಸ ಮಾಡುತ್ತಿರುವ ಕನ್ನಡಿಗರು ರಚಿಸಿಕೊಂಡಿರುವ ಸಮಿತಿಯಾಗಿದ್ದು, ಸ್ಥಳೀಯ ಗಲ್ಫ್ ದೇಶಗಳ ಕರ್ನಾಟಕ ಮೂಲದ ಜನರಿಂದ ಸ್ಥಾಪಿತವಾದ ಕನ್ನಡ ಸಂಘ, ಕನ್ನಡಕೂಟ, ಕನ್ನಡ ಸಂಘಟನೆಗಳ ಮೂಲಕ ಗಲ್ಫ್ ರಾಷ್ಟ್ರಗಳಲ್ಲಿ ಕನ್ನಡ ನುಡಿ, ಸಂಸ್ಕೃತಿ ಮತ್ತು ನಮ್ಮ ಪರಂಪರೆಯನ್ನು ಉಳಿಸಿ ಬೆಳೆಸುತ್ತ, ನಾಡು ನುಡಿಗೆ ಅಗಾಧವಾದ ಸೇವೆಯನ್ನು ಸಲ್ಲಿಸಿದ್ದಾರೆ

    ಗಲ್ಫ್ ಕನ್ನಡಿಗರ ಒಕ್ಕೂಟದ ಕೆಲಸ ಕಾರ್ಯಗಳನ್ನು ಶ್ಲಾಘಿಸಿದ ಮುಖ್ಯಮಂತ್ರಿಗಳು ಸಭಾಪತಿಗಳು ಸರ್ಕಾರದ ವತಿಯಿಂದ ಎಲ್ಲಾ ರೀತಿಯ ಸಂಪೂರ್ಣ ಸಹಕಾರ ಮತ್ತು ಬೆಂಬಲವನ್ನು ನೀಡುವ ಭರವಸೆ ನೀಡಿದರು ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿಗಳಾದ ಪಿ.ಎಸ್.ರಂಗನಾಥ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts