ನಿರ್ಮಾಪಕ ಉಮಾಪತಿಗೆ ಬೆದರಿಕೆ; ನಟ ದರ್ಶನ್ ವಿರುದ್ಧ ದೂರು ದಾಖಲು

Darshan Umapathy
Published on

ಬೆಂಗಳೂರು: ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ನಟನೆಯ ಕಾಟೇರ ಚಿತ್ರವು ಯಶಸ್ವಿಯಾಗಿ 50ನೇ ದಿನ ಪೂರೈಸಿದ ಬೆನ್ನಲ್ಲೇ ಚಿತ್ರತಂಡದ ನಗರದ ಪ್ರಸನ್ನ ಚಿತ್ರಮಂದಿರದಲ್ಲಿ ಸಂಭ್ರಮಾಚರಣೆಯನ್ನು ಆಯೋಜಿಸಿತ್ತು. ಇನ್ನು ಕಾರ್ಯಕ್ರಮವನ್ನು ಉದ್ಧೇಶಿಸಿ ಮಾತನಾಡಿದ ನಟ ದರ್ಶನ್​ ತಮ್ಮ ಮಾಜಿ ಗೆಳೆಯ ಉಮಾಪತಿಗೆ ತಮ್ಮ ಮಾತಿನ ಮೂಲಕ ಚಾಟಿ ಬೀಸಿದ್ದರು.

ಇನ್ನು ದರ್ಶನ್​ ನೀಡಿರುವ ಹೇಳಿಕೆಗೆ ಸಂಬಂಧಿಸಿದಂತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ದೂರು ದಾಖಲಿಸಲಾಗಿದೆ. ಕರ್ನಾಟಕ ಪ್ರಜಾವರ ವೇದಿಕೆ ಸದಸ್ಯರು ನಟನ ವಿರುದ್ಧ ದೂರು ದಾಖಲಿಸಿದ್ದಾರೆ.

complaint letter

ನಟ ದರ್ಶನ್ ಅವರು ಗುಮ್ಮಿಸ್ಕೋತಿಯಾ ಅಂತ ಬೆದರಿಕೆ ಹಾಕಿದ್ದಾರೆ. ಇದಕ್ಕೆ ಕ್ಷಮೆಯಾಚಿಸಬೇಕು. ಸಾರ್ವಜನಿಕ ವೇದಿಕೆಯಲ್ಲಿ ನಿರ್ಮಾಪಕನಿಗೆ ತಗಡೇ, ಗುಮುಸ್ಕೊತಿಯ ಪದ ಬಳಸಿದ್ದು ತಪ್ಪು. ಗುಮ್ಮುಸ್ಕೊತಿಯ ಅಂದ್ರೆ ಕೊಲೆ ಬೆದರಿಕೆ. ಈ ಕೂಡಲೇ ಅವರು ಕ್ಷಮೆಯಾಚಿಸಬೇಕು ಎಂದು ಸಲ್ಲಿಸಲಾಗಿರುವ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಕೆಲವರು ಕಥೆ ನಾನು ಮಾಡಿಸಿದೆ. ಟೈಟಲ್ ನಾನು ಕೊಟ್ಟೆ ಅಂತ ಹೇಳುತ್ತಿದ್ದಾರೆ. ಅಯ್ಯೋ ತಗಡೇ. ನಿನಗೆ ‘ರಾಬರ್ಟ್’ ಕಥೆ ಕೊಟ್ಟದ್ದೇ ನಾವು. ಕೊಟ್ಟಿದ್ದು ಮಾಡಿದ್ದು ಹೇಳಬಾರದು. ಇದೇ ರೀತಿ ಒಂದ್ಸಲ ಸಿಕ್ಕಿಹಾಕಿಕೊಂಡು ಹೇಳಿಸಿಕೊಂಡು ಬುದ್ದಿ ಕಲಿಯಲಿಲ್ಲ ಅಂದ್ರೆ ನಾವು ಏನು ಹೇಳೋಣ. ಇಂತಹ ಒಳ್ಳೆಯ ಕಥೆ ಯಾಕಪ್ಪಾ ಬಿಟ್ಟೆ ನೀನು. ನೀನು ಕಥೆ ಮಾಡಿಸಿದೆ ಅಲ್ವಾ? ಹಾಗಾದರೆ ಇಂತಹ ಒಳ್ಳೆ ಕಥೆ ಯಾಕೆ ಬಿಟ್ಟೆ? ನಿನ್ನ ಜಡ್ಜ್‌ಮೆಂಟ್ ಅಷ್ಟು ಚೆನ್ನಾಗಿದೆ ಗುಡ್. ನೀನು ಮಾಡಬಹುದಿತ್ತಲ್ಲ. ಟೈಟಲ್ ನಾನು ಕೊಟ್ಟೆ ಎನ್ನುತ್ತೀಯಾ. ‘ಕಾಟೇರ’ ಟೈಟಲ್ ಕೊಟ್ಟಿದ್ದು ನಾನು. ಅದಕ್ಕೂ ಸ್ಪಷ್ಟನೆ ಕೊಡುತ್ತೀನಿ. ಎಲ್ಲಾ ಆಧಾರ ಇಟ್ಟುಕೊಂಡು ಮಾತನಾಡಬೇಕು ಎಂದು ನಟ ದರ್ಶನ್​ ಉಮಾಪತಿಗೆ ವೇದಿಕೆ ಮೇಲೆ ಬಹಿರಂಗವಾಗಿ ವಾಗ್ದಾಳಿ ನಡೆಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net