ಭಾರತ್​ ಬಂದ್​ನಿಂದಾಗಿ ವಧುವಿಗೆ ಸಂಕಷ್ಟ; ಹಸೆಮಣೆ ಏರೋದಕ್ಕೂ ಮುನ್ನ 2ಕಿ.ಮೀ ನಡೆಯೋ ಶಿಕ್ಷೆ!

band
Published on

ಪಟನಾ: ಇಂದು ದೇಶದಾದ್ಯಂತ ರೈತರಿಗೆ ಬೆಂಬಲಿಸಿ ಭಾರತ್​ ಬಂದ್​ ನಡೆಸಲಾಗಿದೆ. ಕೆಲ ರಾಜ್ಯಗಳಲ್ಲಿ ಬಂದ್​ಗೆ ಉತ್ತಮ ಸ್ಪಂದನೆ ಸಿಕ್ಕಿದ್ದರೆ ಹಲವು ರಾಜ್ಯಗಳು ಎಂದಿನಂತೆ ಕಾರ್ಯ ನಿರ್ವಹಿಸಿವೆ. ಬಿಹಾರದ ಸಮಸ್ತಿಪುರದಲ್ಲಿ ಬಂದ್​ ಮಾಡಲಾಗಿದ್ದು, ಇದರಿಂದಾಗಿ ವಧುವೊಬ್ಬಳು 2 ಕಿ.ಮೀ ನಡೆದು ದೇವಸ್ಥಾನ ತಲುಪಬೇಕಾದ ಪರಿಸ್ಥಿತಿ ಉಂಟಾಗಿದೆ.

ಸಮಸ್ತಿಪುರ ನಗರದ ಬಹುಭಾಗದಲ್ಲಿ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಇದೇ ಸಮಯದಲ್ಲಿ ಇಂದೇ ಹಸೆಮಣೆ ಏರಬೇಕಿದ್ದ ವಧುವೊಬ್ಬಳು, ಮದುವೆಗೂ ಮುನ್ನ ದೇವಸ್ಥಾನದಲ್ಲಿ ಪೂಜೆ ಮಾಡಿಸಲೆಂದು ಹೊರಟಿದ್ದಾಳೆ. ದೇವಸ್ಥಾನದ ಮೂರು ಕಿ.ಮೀ ಹಿಂದೆಯೇ ಆಕೆಯ ಗಾಡಿಗೆ ಅಡ್ಡ ಹಾಕಿ ಕಾರನ್ನು ನಿಲ್ಲಿಸಲಾಗಿದೆ. ನಂತರ ಆಕೆ ಕಾರಿನಿಂದ ಇಳಿದು, ನಡೆದೇ ದೇವಸ್ಥಾನಕ್ಕೆ ಹೊರಟಿದ್ದಾಳೆ. ವಧುಗೆ ಅನೇಕ ಮಹಿಳೆಯರು ಸಾಥ್​ ಕೊಟ್ಟಿದ್ದಾರೆ. 2 ಕಿ.ಮೀ ನಡೆದ ನಂತರ ಆಟೋ ಒಂದು ಸಿಕ್ಕಿದ್ದು ಅದರಲ್ಲಿ ವಧು ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ್ದಾಳೆ.

ದೇವಸ್ಥಾನದಲ್ಲಿ ಪೂಜೆ ಮುಗಿಸಿದ ಆಕೆ ನಂತರ ಮನೆಗೆ ಬಂದು ಹಸೆಮಣೆ ಏರಿರುವುದಾಗಿ ವರದಿಯಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net