More

    ಅಮೆರಿಕದ ನಾಯಕರೊಂದಿಗೆ ರಾತ್ರಿ ಕಳೆದು ಚೀನಾಕ್ಕೆ ಬೇಹುಗಾರಿಕೆ ಮಾಡುತ್ತಿದ್ದ ಬೆಡಗಿ!

    ವಾಷಿಂಗ್ಟನ್​: ಹೆಣ್ಣು, ಹೊನ್ನು, ಮಣ್ಣಿಗೆ ಮನಸೋಲದವರು ಇಲ್ಲ ಎನ್ನುತ್ತಾರೆ. ಇದೇ ವೀಕ್​ನೆಸ್​​ ಬಳಸಿಕೊಂಡ ಯುವತಿಯೊಬ್ಬಳು ಅಮೆರಿಕದ ನಾಯಕರೊಂದಿಗೆ ಸಂಬಂಧ ಬೆಳೆಸಿ, ಮಾಹಿತಿ ಕದ್ದು, ಚೀನಾಕ್ಕೆ ಬೇಹುಗಾರಿಕೆ ಮಾಡಿರುವ ಘಟನೆ ನಡೆದಿದೆ.

    ಇದನ್ನೂ ಓದಿ: ಪ್ರಾಣಿಗಳ ಮೇಲೆ ಮುಂದುವರಿದ ಕರೊನಾ ದಾಳಿ; ಒಂದೇ ಮೃಗಾಲಯದ ನಾಲ್ಕು ಸಿಂಹಗಳಿಗೆ ಕರೊನಾ ಪಾಸಿಟಿವ್​!

    ಫಾಂಗ್ ಫಾಂಗ್ ಅಥವಾ ಕ್ರಿಸ್ಟೀನ್ ಫಾಂಗ್ ಹೆಸರಿನ ಚೀನಾ ಮೂಲದ ಮಹಿಳೆ ಅಮೆರಿಕದಲ್ಲಿ 2011ರಿಂದ 2015ರವರೆಗೆ ವಾಸವಿದ್ದಳು. ಈ ಸಮಯದಲ್ಲಿ ಆಕೆ ಸಾಕಷ್ಟು ರಾಜಕೀಯ ನಾಯಕರ ಪರಿಚಯ ಮಾಡಿಕೊಂಡಿದ್ದಾಳೆ. ಅವರೊಂದಿಗೆ ಸ್ನೇಹ ಸಾಧಿಸಿಕೊಂಡಿದ್ದಾಳೆ. ಕೆಲವು ಚುನಾವಣೆಗಳ ಪ್ರಚಾರದಲ್ಲೂ ಭಾಗವಹಿಸಿದ್ದಾಳೆ. ಯುಎಸ್ ಸಂಸದ ಎರಿಕ್ ಸ್ವಾಲ್ವೆಲ್ ಅವರ ಮರು ಚುನಾವಣೆಯ ಸಮಯದಲ್ಲಿ ಹಣ ಸಂಗ್ರಹಿಸಲು ಸಹಾಯ ಮಾಡಿದ್ದಾಳೆ. ಹೀಗೆ ಸ್ನೇಹ ಸಾಧಿಸಿಕೊಂಡ ಈಕೆ ಇಬ್ಬರು ನಾಯಕರೊಂದಿಗೆ ದೈಹಿಕ ಸಂಬಂಧವನ್ನೂ ಹೊಂದಿದ್ದಾಳೆ.

    ರಾಜಕೀಯ ನಾಯಕರ ಜತೆ ಸ್ನೇಹ ಸಾಧಿಸಿಕೊಳ್ಳುವ ಮೂಲಕ ದೇಶದ ಗೌಪ್ಯ ಮಾಹಿತಿಯನ್ನು ಚೀನಾಕ್ಕೆ ಬೇಹುಗಾರಿಕೆ ಮಾಡುವ ಪ್ರಯತ್ನವನ್ನು ಈಕೆ ಮಾಡುತ್ತಿದ್ದಳು ಎನ್ನಲಾಗಿದೆ. 2015ರಲ್ಲಿ ತನ್ನ ಬಗ್ಗೆ ಅನುಮಾನ ಬಂದಿರುವುದರ ಸೂಚನೆ ಸಿಕ್ಕ ಹಿನ್ನೆಲೆಯಲ್ಲಿ ಅಮೆರಿಕದಿಂದ ಕಾಲ್ಕಿತ್ತಿದ್ದಾಳೆ.

    ಇದನ್ನೂ ಓದಿ: ಪ್ರೀತಿಸಿದವಳು ಕೈ ಕೊಟ್ಟಿದ್ದಕ್ಕೆ ಕಳ್ಳನಾದ! 18 ಕೋಟಿ ಮೌಲ್ಯದ ಬಂಗಲೆಯನ್ನು 14 ಲಕ್ಷಕ್ಕೆ ಮಾರಿದ!

    ಎಫ್‌ಬಿಐ(ಸಂಯುಕ್ತ ತನಿಖಾ ದಳ) ಬೇರೊಬ್ಬ ವ್ಯಕ್ತಿಯನ್ನು ಬೇಹುಗಾರಿಕೆಯ ಆರೋಪದಲ್ಲಿ ತನಿಖೆ ನಡೆಸುತ್ತಿರುವಾಗ ಫಾಂಗ್​ ವಿಚಾರ ತಿಳಿದುಬಂದಿದೆ. ಅಮೆರಿಕಕ್ಕೆ ಬರುವ ಮುನ್ನ ಚೀನಾದ ವಿದ್ಯಾರ್ಥಿ ಸಂಘ ಮತ್ತು ಏಷ್ಯನ್ ಪೆಸಿಫಿಕ್ ದ್ವೀಪವಾಸಿ ಅಮೆರಿಕನ್ ಸಾರ್ವಜನಿಕ ವ್ಯವಹಾರಗಳ ಅಧ್ಯಕ್ಷರಾಗಿ ಫಾಂಗ್ ಕೆಲಸ ಮಾಡಿದ್ದಳು. ಈ ಮೂಲಕ ಚೀನಾದ ರಾಜಕೀಯ ಪ್ರವೇಶಿಸಿದ ಫಾಂಗ್​ ನಂತರ ದೇಶಕ್ಕೆ ಬೇಹುಗಾರಿಕೆ ಮಾಡಲು ಅಮೆರಿಕಕ್ಕೆ ಬಂದಿದ್ದಳು ಎನ್ನುವ ವಿಚಾರ ಬಯಲಾಗಿದೆ. (ಏಜೆನ್ಸೀಸ್​)

    ಆನ್​ಲೈನ್​ ಕ್ಲಾಸ್​ಗೆಂದು ಮಗಳಿಗೆ ಮೊಬೈಲ್​ ಕೊಟ್ಟು ಕೆಟ್ಟ ತಂದೆ: ಅಶ್ಲೀಲ ವಿಡಿಯೋ ಪತ್ತೆ!

    ಮದುವೆಗೆ ಮೂರು ದಿನವಿದ್ದಾಗ ಮರ್ಮಾಂಗವೇ ಕಟ್! 1 ಲಕ್ಷಕ್ಕಾಗಿ ಜೀವನವನ್ನೇ ಹಾಳು ಮಾಡಿಕೊಂಡ ಯುವಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts