

ನವದೆಹಲಿ: ಜಾಗತಿಕ ಹಣಕಾಸು ಕ್ಷೇತ್ರದಲ್ಲಿ ಪ್ರಮುಖ ವ್ಯವಸ್ಥೆಯಾಗಿರುವ ಅಮೆರಿಕ-ಸೌದಿ ಅರೇಬಿಯಾ ಪೆಟ್ರೋಡಾಲರ್ ಒಪ್ಪಂದವು 80 ವರ್ಷಗಳ ನಂತರ ಕೊನೆಗೊಂಡಿದೆ.
ಜೂನ್ 8, 1974 ರಂದು ಪ್ರಾರಂಭವಾದ ಈ ಹೆಗ್ಗುರುತು ಒಪ್ಪಂದವು ಕಚ್ಚಾ ತೈಲ ರಫ್ತಿಗೆ ಅಮೆರಿಕ ಡಾಲರ್ಗಳ ವಿನಿಮಯವನ್ನು ಸುಗಮಗೊಳಿಸಿ, ಡಾಲರ್ನ ಪ್ರಾಬಲ್ಯವನ್ನು ಹೆಚ್ಚಿಸಿತ್ತು. ಪೆಟ್ರೋಡಾಲರ್ಗಳು ಕರೆನ್ಸಿಯಲ್ಲ; ಆದರೆ ಅಮೆರಿಕ ಡಾಲರ್ಗಳು ಕಚ್ಚಾ ತೈಲ ರಫ್ತಿಗೆ ವಿನಿಮಯಗೊಳ್ಳುತ್ತಿದ್ದವು.
"ಪೆಟ್ರೋಡಾಲರ್ಸ್" ಎಂಬ ಪದವು ತೈಲ-ರಫ್ತು ಮಾಡುವ ದೇಶಗಳು ತೈಲ ಮಾರಾಟದ ಮೂಲಕ ಗಳಿಸಿದ ಅಮೆರಿಕ ಡಾಲರ್ಗಳನ್ನು ಸೂಚಿಸುತ್ತದೆ. ಈ ಪರಿಕಲ್ಪನೆಯು 1970ರ ದಶಕದ ಆರಂಭದಲ್ಲಿ ಹೊರಹೊಮ್ಮಿ, ಜಾಗತಿಕ ಅರ್ಥಶಾಸ್ತ್ರ ಮತ್ತು ಭೌಗೋಳಿಕ ರಾಜಕೀಯದಲ್ಲಿ ಮಹತ್ವದ ಪಾತ್ರವನ್ನು ವಹಿಸಿತು.
1972ರಲ್ಲಿ, ಯೋಮ್ ಕಿಪ್ಪೂರ್ ಯುದ್ಧದ ಸಮಯದಲ್ಲಿ ಇಸ್ರೇಲ್ಗೆ ಅಮೆರಿಕದ ಬೆಂಬಲಕ್ಕೆ ಪ್ರತಿಕ್ರಿಯೆಯಾಗಿ ಪೆಟ್ರೋಲಿಯಂ ರಫ್ತು ಮಾಡುವ ದೇಶಗಳ ಸಂಘಟನೆಯು (ಒಪೆಕ್) ತೈಲ ನಿರ್ಬಂಧ ವಿಧಿಸಿತು. ಇದರಿಂದಾಗಿ ತೈಲ ಬೆಲೆಗಳು ಗಗನಕ್ಕೇರಿದವು.
ಪರಿಸ್ಥಿತಿ ಸ್ಥಿರಗೊಳಿಸಲು ಸೌದಿ ಅರೇಬಿಯಾ ಮತ್ತು ಇತರ ಒಪೆಕ್ ದೇಶಗಳೊಂದಿಗೆ ಅಮೆರಿಕ ಒಪ್ಪಂದವನ್ನು ಮಾಡಿಕೊಂಡಿತು. ಈ ತೈಲವನ್ನು ಅಮೆರಿಕ ಡಾಲರ್ಗಳಲ್ಲಿ ಪ್ರತ್ಯೇಕವಾಗಿ ವ್ಯಾಪಾರ ಮಾಡಲಾರಂಭಿಸಲಾಯಿತು. ಇದಕ್ಕೆ ಪ್ರತಿಯಾಗಿ, ಅಮೆರಿಕ ಮಿಲಿಟರಿ ರಕ್ಷಣೆ ಮತ್ತು ಆರ್ಥಿಕ ಬೆಂಬಲ ನೀಡಿತು. ಈ ಒಪ್ಪಂದವು ಪೆಟ್ರೋಡಾಲರ್ ವ್ಯವಸ್ಥೆಯ ಜನ್ಮಕ್ಕೆ ಕಾರಣವಾಯಿತು.
ಈ ಒಪ್ಪಂದದ ಮುಕ್ತಾಯದೊಂದಿಗೆ ಸೌದಿ ಅರೇಬಿಯಾ ಈಗ ಯುವಾನ್, ಯೂರೋ, ರೂಬಲ್ಸ್ ಮತ್ತು ಯೆನ್ನಂತಹ ಕರೆನ್ಸಿಗಳಿಗೆ ತೈಲವನ್ನು ಮಾರಾಟ ಮಾಡಲು ಮುಕ್ತವಾಗಿದೆ. ಅಲ್ಲದೆ, ಬಿಟ್ಕಾಯಿನ್ನಂತಹ ಡಿಜಿಟಲ್ ಕರೆನ್ಸಿಗಳನ್ನು ಪರಿಗಣಿಸಬಹುದಾಗಿದೆ.
ಈ ಬದಲಾವಣೆಯು ಅಂತಾರಾಷ್ಟ್ರೀಯ ವ್ಯಾಪಾರಕ್ಕಾಗಿ ಪರ್ಯಾಯ ಕರೆನ್ಸಿಗಳನ್ನು ಬಳಸುವ ಪ್ರವೃತ್ತಿಯನ್ನು ವೇಗಗೊಳಿಸಬಹುದು ಹಾಗೂ ಅಮೆರಿಕ ಡಾಲರ್ನ ಜಾಗತಿಕ ಪ್ರಾಬಲ್ಯ ದುರ್ಬಲಗೊಳಿಸಬಹುದು.