More

    ಪ್ರಾಣಿಗಳ ಮೇಲೆ ಮುಂದುವರಿದ ಕರೊನಾ ದಾಳಿ; ಒಂದೇ ಮೃಗಾಲಯದ ನಾಲ್ಕು ಸಿಂಹಗಳಿಗೆ ಕರೊನಾ ಪಾಸಿಟಿವ್​!

    ಬಾರ್ಸಿಲೋನಾ: ವಿಶ್ವದಾದ್ಯಂತ ಹರಡಿ ಲಕ್ಷಾಂತರ ಜನರನ್ನು ಬಲಿ ತೆಗೆದುಕೊಂಡಿರುವ ಕರೊನಾ ಸೋಂಕು ಇದೀಗ ಪ್ರಾಣಿಗಳ ಮೇಲೂ ತನ್ನ ದಾಳಿಯನ್ನು ಮುಂದುವರಿಸಿದೆ. ಸ್ಪೇನ್​ನ ಒಂದೇ ಮೃಗಾಲಯದಲ್ಲಿ ನಾಲ್ಕು ಸಿಂಹಗಳಲ್ಲಿ ಕರೊನಾ ಸೋಂಕು ದೃಢವಾಗಿದೆ.

    ಇದನ್ನೂ ಓದಿ: ಪ್ರೀತಿಸಿದವಳು ಕೈ ಕೊಟ್ಟಿದ್ದಕ್ಕೆ ಕಳ್ಳನಾದ! 18 ಕೋಟಿ ಮೌಲ್ಯದ ಬಂಗಲೆಯನ್ನು 14 ಲಕ್ಷಕ್ಕೆ ಮಾರಿದ!

    ಬಾರ್ಸಿಲೋನಾ ಮೃಗಾಲಯದ ಸಿಂಹಗಳಲ್ಲಿ ಸೋಂಕು ಕಾಣಿಸಿಕೊಂಡಿದೆ. ಜಾಲಾ, ನೀಮಾ ಮತ್ತು ರನ್​ ರನ್​ ಹೆಸರಿನ ಹೆಣ್ಣು ಸಿಂಹಗಳು ಮತ್ತು ಕಿಯಂಬೆ ಹೆಸರಿನ ಗಂಡು ಸಿಂಹದಲ್ಲಿ ಕರೊನಾ ಲಕ್ಷಣಗಳು ಕಾಣಿಸಿಕೊಂಡಿತ್ತು. ಆ ಹಿನ್ನೆಲೆಯಲ್ಲಿ ಈ ಸಿಂಹಗಳನ್ನು ಕರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದೀಗ ನಾಲ್ಕೂ ಸಿಂಹಗಳಲ್ಲಿ ಸೋಂಕಿರುವುದಾಗಿ ವರದಿ ಬಂದಿದೆ. ಅದರ ಜತೆಯಲ್ಲಿ ಮೃಗಾಲಯದ ಕೆಲಸ ಮಾಡುವ ಇಬ್ಬರು ಸಿಬ್ಬಂದಿಯಲ್ಲೂ ಸೋಂಕು ಕಾಣಿಸಿಕೊಂಡಿದೆ.

    ಇದನ್ನೂ ಓದಿ: ಆಂಧ್ರದಲ್ಲಿ ಹಬ್ಬುತ್ತಿರುವ ನಿಗೂಢ ಕಾಯಿಲೆಗೆ ಕಾರಣವೇನು ಗೊತ್ತಾ? ಅಸ್ವಸ್ಥರ ಸಂಖ್ಯೆ 551ಕ್ಕೆ ಏರಿಕೆ

    ಈ ಹಿಂದೆ ನ್ಯೂಯಾರ್ಕ್​ನ ಬ್ರಾಂಕ್ಸ್ ಮೃಗಾಲಯದಲ್ಲಿ ನಾಲ್ಕು ಹುಲಿ ಮತ್ತು ಮೂರು ಸಿಂಹಗಳಲ್ಲಿ ಸೋಂಕು ದೃಢವಾಗಿತ್ತು. ಈ ಮೃಗಾಲಯದ ಅಧಿಕಾರಿಗಳ ಸಲಹೆ ಪಡೆದುಕೊಂಡಿರುವ ಬಾರ್ಸಿಲೋನಾ ಮೃಗಾಲಯ ಸಿಂಹಗಳಿಗೆ ಚಿಕಿತ್ಸೆ ಮುಂದುವರಿದೆ. (ಏಜೆನ್ಸೀಸ್​)

    ಮದುವೆಗೆ ಮೂರು ದಿನವಿದ್ದಾಗ ಮರ್ಮಾಂಗವೇ ಕಟ್! 1 ಲಕ್ಷಕ್ಕಾಗಿ ಜೀವನವನ್ನೇ ಹಾಳು ಮಾಡಿಕೊಂಡ ಯುವಕ

    ಮದುವೆ ಮಂಟಪದಿಂದ ಎದ್ದು ಹೋದ ವಧು! ವಾಪಾಸು ಬರುವಷ್ಟರಲ್ಲಿ ಪೂರ್ತಿ ಕುಟುಂಬವೇ ಹೆಮ್ಮೆ ಪಡುತ್ತಿತ್ತು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts