More

    ಕಾಂಗ್ರೆಸ್ ಗೆ ಮೋದಿ ಎಂಬ ಸಿಂಹದ ಭಯ ಆರಂಭಗೊಂಡಿದೆ

    ಚಿಕ್ಕಮಗಳೂರು: ಮೇಕ್ ಇನ್ ಇಂಡಿಯಾ ಲಾಂಛನ ಸಿಂಹವನ್ನು ಚಿಕ್ಕಮಗಳೂರು ನಗರದಲ್ಲಿ ಪ್ರತಿಷ್ಠಾಪಿಸಲಾಗಿದೆ. ಆದರೆ ವಿಧಾನಪರಿಷತ್ ಮಾಜಿ ಸದಸ್ಯ ಗಾಯತ್ರಿ ಶಾಂತೇಗೌಡ ಅವರಿಗೆ ಹುಲಿ ಹಾಗೂ ಸಿಂಹಕ್ಕೆ ಇರುವ ವ್ಯತ್ಯಾಸವೇ ಗೊತ್ತಿಲ್ಲ. ಹೀಗಾಗಿಯೇ ಸಿಂಹವನ್ನು ಹುಲಿ ಎಂದು ಕರೆಯುತ್ತಿದ್ದಾರೆ. ಇದನ್ನೆಲ್ಲಾ ಗಮನಿಸಿದರೆ ಕಾಂಗ್ರೆಸ್ ಸಿದ್ದಗರಿಗೆ ಮೋದಿ ಎಂಬ ಸಿಂಹದ ಭಯ ಶುರುವಾಗಿದೆ ಎಂದೆನಿಸುತ್ತಿದೆ ಎಂದು ಬಿಜೆಪಿ ನಗರ ಮಂಡಲ ವಕ್ತಾರ ಡಿ. ಸುಧೀರ್ ತಿಳಿಸಿದರು.

    ನಗರದ ಪ್ರೆಸ್ ಕ್ಲಬ್ ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಸಚಿವ ಸಿ.ಟಿ.ರವಿ ಅವರನ್ನು ಟೀಕಿಸುವ ಭರದಲ್ಲಿ ಚಿಕ್ಕಮಗಳೂರಿನಲ್ಲಿ ಪ್ರತಿಷ್ಠಾಪಿಸಿರುವ ಹುಲಿಯನ್ನು ನೋಡಿ ಮಕ್ಕಳು ಬೆದರುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಸಿ.ಟಿ.ರವಿ ಅವರು ಮಾಡಿರುವ ಹತ್ತಾರು ಅಭಿವೃದ್ಧಿ ಕಾರ್ಯಗಳು ಎಲ್ಲರ ಕಣ್ಮುಂದಿವೆ. ಆದರೆ ವಿಧಾನಪರಿಷತ್ ಸದಸ್ಯರಾಗಿದ್ದ ಗಾಯತ್ರಿ ಶಾಂತೇಗೌಡ ಅವರ ಕೊಡುಗೆ ಜಿಲ್ಲೆಗೆ ಏನು ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.
    2014ರಲ್ಲಿ ಕ್ಷೇತ್ರದ ಜನ ಪ್ರತಿನಿಧಿಗಳೆಲ್ಲ ಸೇರಿ ಸಿ.ಟಿ.ರವಿ ನೇತೃತ್ವದಲ್ಲಿ ಜಿಲ್ಲೆಯ ಅಭಿವೃದ್ಧಿಗೆ ವಿಶೇಷ ಅನುದಾನ ಕೋರಿ ಅಂದಿನ ಸಿಎಂ ಸಿದ್ದರಾಮಯ್ಯ ಬಳಿ ನಿಯೋಗ ಹೋಗಿದ್ದರು. ಅಂದು ಪರಿಷತ್ ಸದಸ್ಯರಾಗಿದ್ದ ಗಾಯತ್ರಿ ಶಾಂತೇಗೌಡ ಅವರು ಕಾವೇರಿ ನಿವಾಸದಲ್ಲೇ ಇದ್ದರೂ ನಿಯೋಗದೊಂದಿಗೆ ಬಾರದೆ ಕ್ಷೇತ್ರಕ್ಕೆ ಅವಮಾನ ಮಾಡಿದ್ದರು ಎಂದು ದೂರಿದರು.
    ಗಾಯತ್ರಿ ಶಾಂತೇಗೌಡ ಅವರು ಮದುವೆಯಾದ ತಕ್ಷಣ ಮಕ್ಕಳಾಗುವುದಿಲ್ಲ ಎನ್ನುತ್ತಿದ್ದಾರೆ. ಹಿರಿಯರು ಮದುವೆ ಮಾಡುವುದು ಜವಾಬ್ದಾರಿಯಿಂದ ಸಂಸಾರ ಮಾಡಲಿ ಎನ್ನುವ ಕಾರಣಕ್ಕೆ. ಆದರೆ ಕಾಂಗ್ರೆಸ್ ಜವಾಬ್ದಾರಿಯನ್ನೇ ಮರೆತಿದೆ ಎಂಬುದು ಅವರ ಹೇಳಿಕೆಗಳಿಂದಲೇ ಸಾಬೀತಾಗುತ್ತಿದೆ ಎಂದು ಹೇಳಿದರು.
    ಮಾಜಿ ಸಚಿವ ಸಿ.ಟಿ‌.ರವಿ ಮನೆ ಕಟ್ಟಿ 15 ವರ್ಷಗಳೆ ಕಳೆದಿವೆ. ಈಗ ಆ ವಿಷಯ ಮಾತನಾಡುತ್ತಿರುವುದು ಹಾಸ್ಯಾಸ್ಪದವಾಗಿದೆ. ಈಗಿನ ಶಾಸಕರು ಹೊಸ ಮನೆ ಕಟ್ಟುತ್ತಿದ್ದಾರೆ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ. ಆ ವಿಷಯ ಮುನ್ನೆಲೆಗೆ ಬರಲಿ ಎಂಬ ಕಾರಣಕ್ಕೆ ಸಿ.ಟಿ.ರವಿ ಅವರ ಹೆಸರನ್ನು ಪ್ರಸ್ತಾಪಿಸುತ್ತಿರಬಹುದು ಎಂದು ತಿಳಿಸಿದರು.
    ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿ ರಾಮಭತ್ತರ ಮೇಲೆ ನಡೆದಿರುವ ಹಲ್ಲೆ ಖಂಡನೀಯ. ಈ ಬಗ್ಗೆ ಕೂಡಲೇ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
    ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಶಿಕ್ಷಕ ಪ್ರಕೋಷ್ಟದ ಸಂಚಾಲಕ ಪುಟ್ಟೇಗೌಡ, ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಕಬೀರ್, ಪ್ರಮುಖರಾದ ನಜೀರ್, ಜಗದೀಶ್, ಕೌಶಿಕ್ ಉಪಸ್ಥಿತರಿದ್ದರು.

    ಮುಸ್ಲಿಮರಿಗೆ ಕಾಂಗ್ರೆಸ್ ನಿಂದ ಅನ್ಯಾಯ
    ಅಲ್ಪಸಂಖ್ಯಾತರ ಅಭಿವೃದ್ಧಿಗೆ ಕಾಂಗ್ರೆಸ್ ಕೊಡುಗೆ ಶೂನ್ಯ. ಹಜ್ ಭವನ ನಿರ್ಮಾಣಕ್ಕೆ ಅನುದಾನ ನೀಡಿದ್ದು ಬಿ.ಎಸ್.ಯಡಿಯೂರಪ್ಪ. ವಕ್ಫ್ ಬೋರ್ಡ್ ಹೊಸ ಕಟ್ಟಡ ನಿರ್ಮಾಣ ಮಾಡಿಕೊಟ್ಟಿದ್ದು ಬಸವರಾಜ ಬೊಮ್ಮಾಯಿ. ಕಾಂಗ್ರೆಸ್ ನಿರಂತರವಾಗಿ ಮುಸ್ಲಿಮರಿಗೆ ಅನ್ಯಾಯವನ್ನೇ ಮಾಡಿಕೊಂಡು ಬಂದಿದೆ ಎಂದು ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಕಬೀರ್ ಆರೋಪಿಸಿದರು.
    ಚಿಕ್ಕಮಗಳೂರಿನಲ್ಲಿ ಮುಸ್ಲಿಂ ವಿದ್ಯಾರ್ಥಿಗಳಿಗೆ 12 ಕೋಟಿ ರೂ. ವೆಚ್ಚದಲ್ಲಿ ಹಾಸ್ಟೆಲ್ ನಿರ್ಮಿಸಿ ಕೊಟ್ಟಿದ್ದು ಸಿ.ಟಿ.ರವಿ. ಆದರೆ ಕಾಂಗ್ರೆಸ್ ಮುಸ್ಲಿಮರನ್ನು ಬಿಜೆಪಿ ವಿರೋಧಿಗಳಂತೆ ಬಿಂಬಿಸುತ್ತಿದೆ. ಯಾವುದೇ ಮುಸ್ಲಿಂ ಬಿಜೆಪಿ ಸೇರ್ಪಡೆಗೊಂಡಲ್ಲಿ ಅವರು ಎಂದು ಆ ಪಕ್ಷವನ್ನು ಬಿಡುವುದಿಲ್ಲ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts