ಬುರುಡೆ ಒಳಗೋಗಿ ಮಿದುಳ ಬಾಗಿಲ ತಟ್ಟಿ! ಇದಕ್ಕೆ ಉತ್ತರ ಹೇಳಿದ್ರೆ ನೀವೇ ಜೀನಿಯಸ್​ | Brain Teaser

ವಿಜಯವಾಣಿ - 2025-01-25T140518.574
Published on

Brain Teaser: ಶಾಲೆಯಲ್ಲಿ ಹೇಳಿಕೊಟ್ಟಿದ್ದೇ ನೆನಪಿಲ್ಲ ಇನ್ನೂ ಇದೆಲ್ಲ ನಮ್ಮಿಂದ ಸಾಧ್ಯನಾ ಎಂದು ಹೇಳಿ ಸುಮ್ಮನಾಗುವವರೇ ಹೆಚ್ಚು. ಅದಕ್ಕೆ ಕಾರಣ ಇಂತಹ ಗಣಿತದ ಲೆಕ್ಕಾಚಾರಗಳು. ಶಾಲಾ-ಕಾಲೇಜು ದಿನಗಳಲ್ಲಿ ಬಹುತೇಕರು ಹೆದರಿದ ವಿಷಯ ಎಂದರೆ ಅದು ಗಣಿತ. ಅದರಲ್ಲೂ ಇಂಗ್ಲಿಷ್​, ಕನ್ನಡ, ವಿಜ್ಞಾನ ಸೇರಿದಂತೆ ಇನ್ನಿತರ ವಿಷಯಕ್ಕೆ ಸಂಬಂಧಿಸಿದಂತೆ ಶಿಕ್ಷಕರು ಕೇಳುತ್ತಿದ್ದ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಬಹುದಿತ್ತು. ಆದರೆ, ಗಣಿತದಲ್ಲಿ ಆ ರೀತಿ ಆಗಲು ಸಾಧ್ಯವೇ ಇರ್ತಿರಲಿಲ್ಲ. ಆ ಹಂತಗಳನ್ನು ಹೇಗೋ ದಾಟಿ ಇಂದು ತಿಂಗಳ ಸಂಬಳ ಎಣಿಸುತ್ತಿರುವ ನಮಗೆ ಇದ್ಯಾವುದೋ ಗಣಿತ ಒಗಟು ಬಿಡಿಸಿ ಎಂದು ಮುಂದಿಟ್ಟರೆ ಹೇಗೆ? ಎನ್ನುವವರಿಗೆಯೇ ಈ ಪ್ರಶ್ನೆ.

ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಇಂತಹ ಗಣಿತ ಒಗಟುಗಳು ನೆಟ್ಟಿಗರ ಗಮನವನ್ನು ಸೆಳೆಯುತ್ತಿವೆ. ಸಾಮಾನ್ಯವಾಗಿ ದಿನದ ಜಂಜಾಟದಲ್ಲಿ ಸೋತು ಸುಣ್ಣವಾಗುವ ಅನೇಕರು, ದಿನಪತ್ರಿಕೆಗಳಲ್ಲಿ ಸಿಗುವ ಪದಬಂಧ ಹಾಗೂ ಜಾಲತಾಣಗಳಲ್ಲಿ ಹರಿದಾಡುವ ಬ್ರೇನ್​ ಟೀಸರ್​ಗಳಿಗೆ ಉತ್ತರಿಸಲು ಬಯಸುತ್ತಾರೆ. ಮೊದಲು ಇದೆನ್ನೆಲ್ಲ ಯಾರು ಉತ್ತರಿಸುತ್ತಾರೆ? ಎನ್ನುವ ಒಂದಷ್ಟು ನೆಟ್ಟಿಗರು, ತದನಂತರ ಕುತೂಹಲದಿಂದ ಉತ್ತರ ಏನಿರಬಹುದು ಎಂದು ಕಮೆಂಟ್​ನಲ್ಲಿ ಹುಡುಕುವುದು ಹಾಸ್ಯಸ್ಪದ. ನೀವು ಇದೇ ವರ್ಗಕ್ಕೆ ಸೇರಿದ್ದರೂ ಪರವಾಗಿಲ್ಲ. ಉತ್ತರಿಸಲು ಕೊಂಚ ಪ್ರಯತ್ನಿಸಿ. ಕೊಟ್ಟು ನೋಡಿ ನಿಮ್ಮೆ ಮಿದುಳಿಗೆ ಕೆಲಸ.

ಪ್ರಶ್ನೆ ಹೀಗಿದೆ

13 → 10, 26 → 40, 39 → 90, 52 → ?

ಜಾಣ ಉತ್ತರ

ಸರಿಯಾದ ಉತ್ತರ: 29. ಇದೇ ಉತ್ತರ ನಿಮಗೂ ಸಿಕ್ಕಿತಾ?

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net