Lung Cancer: ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ಕಾಯಿಲೆಗೆ ತುತ್ತಾದವರ ಸಂಖ್ಯೆ ಗಣನೀಯವಾಗಿ ಏರಿಕೆ ಆಗುತ್ತಿದೆ. ವಯಸ್ಸಿನ ಮಿತಿ ನೋಡದ ಈ ಕಾಯಿಲೆ, ದೇಹಕ್ಕೆ ಆವರಿಸಿಕೊಳ್ಳುವುದೇ ತಿಳಿಯುವುದಿಲ್ಲ. ಕ್ಯಾನ್ಸರ್ ಮೊದಲು ಮತ್ತು ಎರಡನೇ ಸ್ಟೇಜ್ನಲ್ಲಿರುವುದು ತಿಳಿದರೆ, ಅದರಿಂದ ಹೊರಬರಲು ಮಾಡುವ ಪ್ರಯತ್ನ ಬಹುತೇಕ ಸಫಲವಾಗುವ ಅವಕಾಶಗಳು ಹೆಚ್ಚಿರುತ್ತವೆ. ಆದ್ರೆ, ಮೂರು ಮತ್ತು ನಾಲ್ಕನೇ ಹಂತ ತಲುಪಿದರೆ, ಸಾವಿನ ಬಾಗಿಲಿಗೆ ಕೆಲವೇ ಹೆಜ್ಜೆ ಎನ್ನುವುದು ಖಚಿತ.
ಹೇಗೆ ಬರುತ್ತೆ?
ಈ ಶ್ವಾಸಕೋಶ ಕ್ಯಾನ್ಸರ್ಗೆ ಕಾರಣವೇನು? ಹೇಗೆ ಬರುತ್ತೆ? ಇದರ ರೋಗ ಲಕ್ಷಣಗಳೇನು? ಮತ್ತು ಚಿಕಿತ್ಸೆ ಏನು ಎಂಬುದರ ಮಾಹಿತಿ ಹೀಗಿದೆ. ಶ್ವಾಸಕೋಶ ಮತ್ತು ಶ್ವಾಸನಾಳದ ಕ್ಯಾನ್ಸರ್‌ನಿಂದ ಇತ್ತೀಚೆಗೆ ಅನೇಕರು ಸಾವಿಗೀಡಾಗುತ್ತಿರುವ ಪ್ರಕರಣಗಳೇ ಹೆಚ್ಚು. ಈ ಆರೋಗ್ಯ ಸಮಸ್ಯೆ ಪುರುಷ ಮತ್ತು ಮಹಿಳೆ ಇಬ್ಬರಲ್ಲಿಯೂ ಕಾಣಿಸಿಕೊಳ್ಳುತ್ತದೆ. ಅದರಲ್ಲೂ ಧೂಮಪಾನಿಗಳಲ್ಲಿ ಹೆಚ್ಚಾಗಿ ಪತ್ತೆಯಾಗುತ್ತದೆ ಎಂದು ವರದಿಯಿದೆ. ಕ್ಯಾನರ್‌ಗೆ ಒಳಗಾಗುವ ಶೇ. 80ರಷ್ಟು ಮಂದಿ ಧೂಮಪಾನ ಮಾಡುತ್ತಾರೆ ಎಂಬುದನ್ನು ಅಧ್ಯಯನಗಳು ಒತ್ತಿ ಹೇಳಿವೆ.
ಹಾನಿಕಾರಕ ಪದಾರ್ಥ
ಸಿಗರೇಟ್, ಸಿಗಾರ್ ಅಥವಾ ಪೈಪ್‌ಗಳನ್ನು ಒಳಗೊಂಡಂತೆ ಯಾವುದೇ ರೀತಿಯ ತಂಬಾಕು ಉತ್ಪನ್ನಗಳ ಬಳಕೆ ದೊಡ್ಡ ಅಪಾಯಕಾರಿ ಅಂಶವಾಗಿದೆ. ಶ್ವಾಸಕೋಶದ ಕ್ಯಾನ್ಸರ್ ಸಾವುಗಳಲ್ಲಿ 80% ಧೂಮಪಾನಕ್ಕೆ ಸಂಬಂಧಿಸಿದೆ. ವಾಯು ಮಾಲಿನ್ಯ, ರೇಡಾನ್, ಯುರೇನಿಯಂ, ಡೀಸೆಲ್ ಎಕ್ಸಾಸ್ಟ್, ಸಿಲಿಕಾ, ಕಲ್ಲಿದ್ದಲು ಉತ್ಪನ್ನಗಳು ಮತ್ತು ಇತರ ಹಾನಿಕಾರಕ ಪದಾರ್ಥಗಳಿಗೆ ಒಡ್ಡಿಕೊಳ್ಳುವುದು ಕೂಡ ಶ್ವಾಸಕೋಶ ಕ್ಯಾನ್ಸರ್ಗೆ ಕಾರಣವಾಗಬಹುದು. ಕ್ಯಾನ್ಸರ್ ಬಂದಾಗ ತಲೆಯಲ್ಲಿನ ಕೂದಲು ವೇಗವಾಗಿ ಉದುರಿ ಹೋಗುತ್ತವೆ. ಇವೆಲ್ಲವೂ ಈ ರೋಗದ ಸೂಚನೆಗಳು.
ಆದಷ್ಟು ದೂರವಿರಿ
ಧೂಮಪಾನ ಮಾಡುವ ಅಭ್ಯಾಸ ಎಷ್ಟು ಹಾನಿಕಾರಕವೋ ಅಷ್ಟೇ ತೊಂದರೆ ಅದರ ಹೊಗೆಯನ್ನು ಸೇವಿಸುವುದು. ಸಿಗರೇಟ್ ಸೇದುವವರ ಪಕ್ಕದಲ್ಲಿ ನಿಲ್ಲುವುದು ಕೂಡ ಈ ಖಾಯಿಲೆಗೆ ಹತ್ತಿರವಾದಂತೆ. ಧೂಳು ಮುಕ್ತ ಜಾಗದಲ್ಲಿ ಸಂಚರಿಸುವುದು ಉತ್ತಮ. ವಿಪರೀತ ಧೂಳಿರುವ ಸ್ಥಳದಲ್ಲಿ ಇರಬೇಡಿ. ವಿಷಮುಕ್ತ ಗಾಳಿಯಿಂದ ಆದಷ್ಟು ದೂರವಿರಿ. ಸುಟ್ಟ ಪ್ಲಾಸ್ಟಿಕ್ ಹೊಗೆಯಿಂದ ಕೂಡಿದ ಗಾಳಿ ಕುಡಿಯುವುದು ಕೂಡ ಆರೋಗ್ಯಕ್ಕೆ ಅಪಾಯ. ನಮ್ಮ ಆರೋಗ್ಯ ನಮ್ಮ ಆಸ್ತಿ. ಆರೋಗ್ಯ ಹದಗೆಟ್ಟು ಆಸ್ಪತ್ರೆ ಪಾಲಾದರೆ ಒಮ್ಮೊಮ್ಮೆ ಹಣ ಕೂಡ ಜೀವ ಉಳಿಸುವಲ್ಲಿ ವಿಫಲವಾಗುತ್ತದೆ. ಅಗತ್ಯ ಚಿಕಿತ್ಸೆ ಮೂಲಕ ಆರೋಗ್ಯ ಕಾಪಾಡಿಸಿಕೊಳ್ಳುವುದು ಒಳಿತು. ದೇಹದಲ್ಲಿ ಯಾವುದೇ ರೋಗ ಲಕ್ಷಣಗಳು ಕಂಡುಬಂದರೆ ಅದನ್ನು ನಿರ್ಲಕ್ಷಿಸದೆ ವೈದ್ಯರ ಬಳಿ ತಪಾಸಣೆ ಮಾಡಿಸುವುದು ಉತ್ತಮ,(ಏಜೆನ್ಸೀಸ್).