ಬಿಡುಗಡೆಗೆ ಸಜ್ಜಾಯ್ತು ತೆಲುಗು ವರ್ಷನ್​ನ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ'​!

Untitled design (33)
Published on

ಆಂಧ್ರಪ್ರದೇಶ: ಕನ್ನಡ ಚಿತ್ರರಂಗದ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಚಿತ್ರ ಬಿಡುಗಡೆಗೊಂಡು ಬಾಕ್ಸ್​ ಆಫೀಸ್​ನಲ್ಲಿ ಉತ್ತಮ ಗಳಿಕೆಯೊಂದಿಗೆ ಪ್ರೇಕ್ಷಕರಿಂದ ಸಾಕಷ್ಟು ಮೆಚ್ಚುಗೆಯನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಯಿತು. ಇದೀಗ ತೆಲುಗು ಭಾಷೆಯಲ್ಲಿ ಡಬ್​ ಆದ ಈ ಚಿತ್ರ, 'ಬಾಯ್ಸ್​ ಹಾಸ್ಟೆಲ್' ಎಂಬ ಶೀರ್ಷಿಕೆಯಲ್ಲಿ ಶನಿವಾರ (ಆಗಸ್ಟ್​ 26) ಚಿತ್ರಮಂದಿರಗಳಲ್ಲಿ ರಿಲೀಸ್​ ಆಗಲು ಸಜ್ಜಾಗಿದೆ.

ನಿತಿನ್ ಕೃಷ್ಣಮೂರ್ತಿ ಅವರ ಚೊಚ್ಚಲ ನಿರ್ದೇಶನದಲ್ಲಿ ಮೂಡಿಬಂದ 'ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ' ಚಿತ್ರವನ್ನು ತಾವೇ ಬರೆದು, ನಿರ್ದೇಶಿಸುವ ಮೂಲಕ ಸಿನಿಪ್ರೇಕ್ಷಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಚಿತ್ರದಲ್ಲಿ ಪ್ರಜ್ವಲ್ ಬಿ.ಪಿ, ಮಂಜುನಾಥ್ ನಾಯ್ಕ, ರಾಕೇಶ್ ರಾಜ್ ಕುಮಾರ್, ಶ್ರೀವತ್ಸ ಮತ್ತು ತೇಜಸ್ ಜಯಣ್ಣ ಅರಸ್ ಸೇರಿದಂತೆ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿ, ತೆರೆ ಮೇಲೆ ಮಿಂಚಿದ್ದಾರೆ.

ಸ್ಯಾಂಡಲ್​ವುಡ್​ನಲ್ಲಿ ಬ್ಲಾಕ್​ಬಸ್ಟರ್​ ಹಿಟ್​ ಆದ ಹಾಸ್ಟೆಲ್​ ಹುಡುಗುರು ಬೇಕಾಗಿದ್ದಾರೆ ಚಿತ್ರವನ್ನು ತೆಲುಗು ಆವೃತ್ತಿ ಇದೇ ಶನಿವಾರ ರಿಲೀಸ್​ ಆಗಲಿದೆ.  ತೆಲುಗು ಸಿನಿಪ್ರೇಕ್ಷಕರಿಗೆ ತಲುಪಲು ಮುಂದಾಗಿರುವ ಈ ಚಿತ್ರ ಟಾಲಿವುಡ್​ ಅಂಗಳದಲ್ಲಿ ಹೇಗೆ ಕಮಾಲ್​ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ. ಚಿತ್ರ ಬಿಡುಗಡೆಗೂ ಮುನ್ನ ಆಗಸ್ಟ್ 25, 2023 ರಂದು ಸಿನಿಮಾದ ವಿಶೇಷ ಪ್ರೀಮಿಯರ್‌ಗಳನ್ನು ಏರ್ಪಡಿಸಲಾಗಿದೆ. ಈ ಶೋಗಳಿಗೆ ಬುಕಿಂಗ್‌ಗಳು ಕೂಡ ಈಗಾಗಲೇ ಪ್ರಾರಂಭವಾಗಿವೆ,(ಏಜೆನ್ಸೀಸ್). 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net