More

    ಬ್ರಿಕ್ಸ್​ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಜೋಹಾನ್ಸ್​ಬರ್ಗ್​​ಗೆ ಹೊರಡುವ ಮುನ್ನ ಪ್ರಧಾನಿ ಮೋದಿ ಹೇಳಿದ್ದಿಷ್ಟು….

    ನವದೆಹಲಿ: ದಕ್ಷಿಣ ಆಫ್ರಿಕಾದ ಜೋಹಾನ್ಸ್​ಬರ್ಗ್​ನಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಬ್ರಿಕ್ಸ್​ 15ನೇ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ಮೋದಿ ಇಂದು ಬೆಳಗ್ಗೆ ಭಾರತದಿಂದ ಆಫ್ರಿಕಾಗೆ ತೆರಳಿದ್ದಾರೆ. ಇಂದಿನಿಂದ ಆಗಸ್ಟ್​ 24ರವರೆಗೆ ಶೃಂಗ ಸಭೆ ನಡೆಯಲಿದೆ.

    ಆಫ್ರಿಕಾಗೆ ಹೊರಡುವ ಮುನ್ನ ಪ್ರಧಾನಿ ಹೇಳಿಕೆ ನೀಡಿದ್ದು, ಜೋಹಾನ್ಸ್​ಬರ್ಗ್​ನಲ್ಲಿ ಉಪಸ್ಥಿತ ಇರಲಿರುವ ಕೆಲ ನಾಯಕರ ಜತೆ ದ್ವಿಪಕ್ಷೀಯ ಮಾತುಕತೆ ನಡೆಸಲು ಮತ್ತು ಈ ಈವೆಂಟ್‌ನಲ್ಲಿ ಭಾಗವಹಿಸಲು ಆಹ್ವಾನಿಸಲಾದ ಹಲವಾರು ಅತಿಥಿ ದೇಶಗಳೊಂದಿಗೆ ಸಂವಹನ ನಡೆಸಲು ಎದುರು ನೋಡುತ್ತಿದ್ದೇನೆ ಎಂದು ಎಕ್ಷ್​ (ಟ್ವಿಟರ್​) ನಲ್ಲಿ ತಿಳಿಸಿದ್ದಾರೆ.

    ಬ್ರಿಕ್ಸ್ ವಿವಿಧ ವಲಯಗಳಲ್ಲಿ ಬಲವಾದ ಸಹಕಾರ ಕಾರ್ಯಸೂಚಿಯನ್ನು ಅನುಸರಿಸುತ್ತಿದೆ. ಅಭಿವೃದ್ಧಿಯ ಅಗತ್ಯತೆಗಳು ಮತ್ತು ಬಹುಪಕ್ಷೀಯ ವ್ಯವಸ್ಥೆಯ ಸುಧಾರಣೆ ಸೇರಿದಂತೆ ಇಡೀ ಜಾಗತಿಕ ದಕ್ಷಿಣಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚಿಸಲು BRICS ವೇದಿಕೆಯಾಗಿದೆ ಎಂದು ನಾವು ಗೌರವಿಸುತ್ತೇವೆ. ಈ ಶೃಂಗಸಭೆಯು ಬ್ರಿಕ್ಸ್‌ಗೆ ಭವಿಷ್ಯದ ಸಹಕಾರ ಕ್ಷೇತ್ರಗಳನ್ನು ಗುರುತಿಸಲು ಮತ್ತು ಸಾಂಸ್ಥಿಕ ಅಭಿವೃದ್ಧಿಯನ್ನು ಪರಿಶೀಲಿಸಲು ಉಪಯುಕ್ತ ಅವಕಾಶವನ್ನು ಒದಗಿಸುತ್ತದೆ ಎಂದು ಪ್ರಧಾನಿ ಮೋದಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

    ಇದನ್ನೂ ಓದಿ: ಬಾಲ್ಯ ವಿವಾಹಕ್ಕೆ ಲವ್ ಬ್ರೇಕ್!; ಸ್ನೇಹಿತರಿಂದಲೇ ಮಾಹಿತಿ, 4 ವರ್ಷದಲ್ಲಿ 8,929 ಲಗ್ನಕ್ಕೆ ತಡೆ

    ಬ್ರಿಕ್ಸ್-ಆಫ್ರಿಕಾ ಔಟ್ರೀಚ್ ಮತ್ತು ಬ್ರಿಕ್ಸ್ ಪ್ಲಸ್ ಡೈಲಾಗ್ ಈವೆಂಟ್‌ಗಳಲ್ಲಿ ಸಹ ಭಾಗವಹಿಸುವುದಾಗಿ ಪ್ರಧಾನಿ ಮೋದಿ ಹೇಳಿದ್ದಾರೆ. ದಕ್ಷಿಣಾ ಆಫ್ರಿಕಾದ ಅಧ್ಯಕ್ಷ ಸೈರಿಲ್​ ರಾಮಫೋಸಾ ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ದಕ್ಷಿಣಾ ಆಫ್ರಿಕಾಗೆ ತೆರಳಿದ್ದಾರೆ.

    ಕ್ಸಿ ಜಿನ್​ಪಿಂಗ್​ ಭೇಟಿ ಮಾಡ್ತಾರಾ?

    ಕರೊನಾ ಸಾಂಕ್ರಾಮಿಕ ರೋಗದ ನಂತರ ಬ್ರಿಕ್ಸ್ (ಬ್ರೆಜಿಲ್-ರಷ್ಯಾ-ಭಾರತ-ಚೀನಾ-ದಕ್ಷಿಣ ಆಫ್ರಿಕಾ) ನ ಮೊದಲ ವೈಯಕ್ತಿಕ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಮೂರು ದಿನಗಳ ಭೇಟಿಗಾಗಿ ಪ್ರಧಾನಿ ಮೋದಿ ದಕ್ಷಿಣ ಆಫ್ರಿಕಾಕ್ಕೆ ತೆರಳಿದ್ದಾರೆ. ಶೃಂಗಸಭೆಯಲ್ಲಿ ಮೋದಿ ಮತ್ತು ಕ್ಸಿ ಮಾತುಕತೆ ನಡೆಸುತ್ತಾರೆಯೇ ಎಂದು ಮಾಧ್ಯಮಗೋಷ್ಠಿಯಲ್ಲಿ ಕೇಳಿದ ಪ್ರಶ್ನೆಗೆ, ವಿದೇಶಾಂಗ ಕಾರ್ಯದರ್ಶಿ ಕ್ವಾತ್ರಾ, ಪ್ರಧಾನಿಯವರ ದ್ವಿಪಕ್ಷೀಯ ಸಭೆಗಳ ವೇಳಾಪಟ್ಟಿಯನ್ನು ಅಂತಿಮಗೊಳಿಸಲಾಗುತ್ತಿದೆ ಎಂದು ಹೇಳಿದರು. ಆದರೆ, ನೇರವಾಗಿ ಪ್ರತಿಕ್ರಿಯೆ ನೀಡಲಿಲ್ಲ.

    ಒಂದು ವೇಳೆ ದ್ವಿಪಕ್ಷೀಯ ಸಭೆ ನಡೆದರೆ 2020ರ ಮೇ ತಿಂಗಳಲ್ಲಿ ಉಭಯ ದೇಶಗಳ ನಡುವೆ ಗಡಿ ಬಿಕ್ಕಟ್ಟು ಪ್ರಾರಂಭವಾದ ನಂತರ ಇದು ಅವರ ಮೊದಲನೆ ಭೇಟಿಯಾಗಲಿದೆ. ಕಳೆದ ವರ್ಷ ನವೆಂಬರ್‌ನಲ್ಲಿ ಬಾಲಿಯಲ್ಲಿ ನಡೆದ ಜಿ-20 ಶೃಂಗಸಭೆಯ ಸಂದರ್ಭದಲ್ಲಿ ಮೋದಿ ಮತ್ತು ಕ್ಸಿ ಔತಣಕೂಟದಲ್ಲಿ ಸಂಕ್ಷಿಪ್ತವಾಗಿ ಭೇಟಿಯಾದರು. ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಕ್ಸಿ ದಕ್ಷಿಣ ಆಫ್ರಿಕಾಕ್ಕೆ ಪ್ರಯಾಣಿಸುತ್ತಿದ್ದಾರೆ ಎಂದು ಚೀನಾ ಈಗಾಗಲೇ ಘೋಷಿಸಿದೆ. ಪ್ರಧಾನಿ ಮೋದಿ ಹಾಗೂ ಕ್ಸಿ ಜಿನ್​ಪಿಂಗ್​ ಭೇಟಿಯಾಗಲಿದ್ದಾರಾ? ಎಂಬ ಪ್ರಶ್ನೆ ಮೂಡಿದ್ದು, ಈ ಪ್ರಶ್ನೆಗೆ ಬ್ರಿಕ್ಸ್​ ಶೃಂಗಸಭೆ ಉತ್ತರ ನೀಡಲಿದೆ. (ಏಜೆನ್ಸೀಸ್​)

    ರಕ್ತನಾಳಗಳ ಬ್ಲಾಕೇಜ್​ಗೆ ಕಾರಣವಾಗುವ ಆಹಾರಗಳಿವು! ಸೇವಿಸುವುದನ್ನು ಈಗಲೇ ಅವಾಯ್ಡ್​ ಮಾಡಿ…

    ಬ್ರಿಕ್ಸ್ ಶೃಂಗಸಭೆಯ ವೇಳೆ ಪ್ರಧಾನಿ ಮೋದಿ-ಕ್ಸಿ ಜಿನ್​ಪಿಂಗ್​ ಭೇಟಿಯಾಗಲಿದ್ದಾರಾ? ಈ ಬಗ್ಗೆ ಸರ್ಕಾರ ಹೇಳಿದ್ದಿಷ್ಟು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts