More

    ರಕ್ತನಾಳಗಳ ಬ್ಲಾಕೇಜ್​ಗೆ ಕಾರಣವಾಗುವ ಆಹಾರಗಳಿವು! ಸೇವಿಸುವುದನ್ನು ಈಗಲೇ ಅವಾಯ್ಡ್​ ಮಾಡಿ…

    ಕರೊನಾ ವೈರಸ್​ ನಂತರದ ಕಾಲದಲ್ಲಿ ಹೃದಯಾಘಾತ ಹಾಗೂ ಕುಸಿದು ಬಿದ್ದು ಸಾಯುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ತೀವ್ರ ಆತಂಕವನ್ನು ಸೃಷ್ಟಿ ಮಾಡಿದೆ. ಪ್ರತಿನಿತ್ಯ ಒಂದಲ್ಲ ಒಂದು ಕಡೆ ಹೃದಯಾಘಾತಕ್ಕೀಡಾಗಿ ಕುಸಿದು ಬಿದ್ದು ಸಾವಿಗೀಡಾಗುತ್ತಿರುವ ಪ್ರಕರಣಗಳು ವರದಿಯಾಗುತ್ತಿದ್ದು, ಕಾರಣ ಏನು ಎಂಬುದು ಇನ್ನೂ ನಿಗೂಢವಾಗಿಯೇ ಉಳಿದಿದೆ.

    ಹೆಚ್ಚಾಗಿ ಹೃದಯ ಸ್ತಂಭನ ಅಥವಾ ಕಾರ್ಡಿಯೋ ಅರೆಸ್ಟ್​ ಸಂಭವಿಸುತ್ತಿವೆ. ಭಾರತದಲ್ಲಿ ನಾಲ್ಕು ಜನರಲ್ಲಿ ಒಬ್ಬರು ಹೃದಯದ ಸಮಸ್ಯೆಯಿಂದಲೇ ಸಾಯುತ್ತಿದ್ದಾರೆ. ಅಲ್ಲದೆ, ವಿಶ್ವದಲ್ಲಿ ಅತಿ ಹೆಚ್ಚು ಮಂದಿ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದಲೇ ಸಾಯುತ್ತಿದ್ದಾರೆ.

    ಇನ್ನು ಹೃದಯಾಘಾತಕ್ಕೆ ರಕ್ತನಾಳಗಳ ನಿರ್ಬಂಧ ಅಥವಾ ಬ್ಲಾಕೇಜ್​ ಸಹ ಒಂದು ಕಾರಣ. ಹೀಗಾಗಿ ರಕ್ತನಾಳಗಳ ಮೇಲೆ ಹೆಚ್ಚಿನ ಗಮನ ಹರಿಸುವುದು ತುಂಬಾ ಮುಖ್ಯ. ಹೀಗಾಗಿ ನಿಮ್ಮ ಅಪಧಮನಿಗಳು ಮತ್ತು ಹೃದಯವನ್ನು ಆರೋಗ್ಯಕರವಾಗಿಡಲು ನೀವು ತಪ್ಪಿಸಬೇಕಾದ ಆಹಾರಗಳು ಇಲ್ಲಿವೆ.

    ಇದನ್ನೂ ಓದಿ: ಬಾಲ್ಯ ವಿವಾಹಕ್ಕೆ ಲವ್ ಬ್ರೇಕ್!; ಸ್ನೇಹಿತರಿಂದಲೇ ಮಾಹಿತಿ, 4 ವರ್ಷದಲ್ಲಿ 8,929 ಲಗ್ನಕ್ಕೆ ತಡೆ

    * ಐಸ್​ಕ್ರೀಮ್​: ಐಸ್​ಕ್ರೀಮ್​ಗಳು ಹೆಚ್ಚಿನ ಪ್ರಮಾಣದಲ್ಲಿ ಸ್ಯಾಚುರೇಟೆಡ್ ಕೊಬ್ಬು ಮತ್ತು ಕ್ಯಾಲೋರಿಗಳನ್ನು ಹೊಂದಿರುತ್ತವೆ. ಇವು ತೂಕ ಹೆಚ್ಚಳಕ್ಕೆ ಕಾರಣವಾಗುವುದಲ್ಲದೆ, ಹೃದಯದ ಅನಾರೋಗ್ಯಕ್ಕೆ ದೂಡುತ್ತವೆ. ಹೀಗಾಗಿ ಇದರ ಸೇವನೆ ಅತಿಯಾಗದೇ ಮಿತಿಯಾಗಿರಲಿ.

    Ice creams

    * ತಂಪುಪಾನೀಯಗಳು: ಪೆಪ್ಸಿ ಹಾಗೂ ಕೊಕೊಕೋಲಾ ಸೇರಿದಂತೆ ಮುಂತಾದ ತಂಪು ಪಾನೀಯಗಳ ಸೇವನೆಯು ದೇಹದಲ್ಲಿನ ಇನ್ಸುಲಿನ್​ ಮಟ್ಟವನ್ನು ಹೆಚ್ಚಿಸಿ, ತೂಕ ಹೆಚ್ಚಳಕ್ಕೆ ಕಾರಣವಾಗುತ್ತವೆ. ಇವು ನಿಮ್ಮ ಚಯಾಪಚಯ ಆರೋಗ್ಯವನ್ನು ಹಾನಿಗೊಳಿಸುತ್ತವೆ. ಇಂತಹ ತಂಪು ಪಾನೀಯಗಳ ಬದಲು ನಿಂಬೆ ಜ್ಯೂಸ್​ ಸೇರಿದಂತೆ ಹಣ್ಣಿನ ಜ್ಯೂಸ್​ಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು.

    Cool Drinks

    * ಫ್ರೆಂಚ್​ ಫ್ರೈ: ಈ ಫ್ರೆಂಚ್​ ಫ್ರೈ ದಿಢೀರನೇ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚು ಮಾಡುತ್ತದೆ ಮತ್ತು ಇದರಲ್ಲಿರುವ ಹೆಚ್ಚಿನ ಉಪ್ಪು ಮತ್ತು ಕೊಬ್ಬಿನಾಂಶವು ಹೃದಯಕ್ಕೆ ಅಪಾಯಕಾರಿಯಾಗಿವೆ. ಹೀಗಾಗಿ ಫ್ರೆಂಚ್​ ಫ್ರೈ ಅನ್ನು ಆದಷ್ಟು ನಿರ್ಲಕ್ಷಿಸಿ.

    French Fry

    * ಪಿಜ್ಜಾ: ಹೃದಯಕ್ಕೆ ಅಪಾಯಕಾರಿಯಾದ ಸ್ಯಾಚುರೇಟೆಡ್ ಕೊಬ್ಬನ್ನು ಹೊಂದಿರುವ ಆಹಾರಗಳ ಪಟ್ಟಿಯಲ್ಲಿ ಪಿಜ್ಜಾ ಎರಡನೇ ಸ್ಥಾನದಲ್ಲಿದೆ. ಹೀಗಾಗಿ ಇದನ್ನು ಹೆಚ್ಚಾಗಿ ತಿನ್ನುವ ಬದಲು ಮೂರ್ನಾಲ್ಕು ಬಾರಿ ಆಲೋಚನೆ ಮಾಡಿ.

    Pizza

    * ಉರಿದ ಚಿಕನ್​: ಎಣ್ಣೆಯಲ್ಲಿ ಚಿಕನ್ ಅನ್ನು ಡೀಪ್ ಫ್ರೈ ಮಾಡುವುದರಿಂದ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ. ಹೀಗಾಗಿ ಇದನ್ನು ತಪ್ಪಿಸುವುದು ಉತ್ತಮ.

    Fried Chicken

    * ಮಾಂಸ: ಹೃದಯ ಸಮಸ್ಯೆ ಮತ್ತು ಬೊಜ್ಜು ಇರುವವರು ಯಾವಾಗಲೂ ಸಂಸ್ಕರಿಸಿದ ಮಾಂಸ ಮತ್ತು ಕೆಂಪು ಮಾಂಸದಿಂದ ದೂರವಿರಬೇಕು. (ಏಜೆನ್ಸೀಸ್​)

    Meat

    ಕಾವೇರಿದ ಸಂಘರ್ಷ ಸವಾಲು: ವಿಚಾರಣೆಗೆ ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠ ರಚನೆ, ನಾಳೆ ಸರ್ವಪಕ್ಷ ಸಭೆ ಬಳಿಕ ರಾಜ್ಯದ ಮುಂದಿನ ನಡೆ ನಿರ್ಧಾರ

    ಬ್ರಿಕ್ಸ್ ಶೃಂಗಸಭೆಯ ವೇಳೆ ಪ್ರಧಾನಿ ಮೋದಿ-ಕ್ಸಿ ಜಿನ್​ಪಿಂಗ್​ ಭೇಟಿಯಾಗಲಿದ್ದಾರಾ? ಈ ಬಗ್ಗೆ ಸರ್ಕಾರ ಹೇಳಿದ್ದಿಷ್ಟು…

    ಬಿಎಸ್​ಎನ್​ಎಲ್​ಗೆ 1.64 ಲಕ್ಷ ಕೋಟಿ ರೂ.: ಫಲಿಸೀತೆ ಪ್ಯಾಕೇಜ್ ಉಪಾಯ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts