More

    ಬೋಳೆವಾಡ ಬಳಿ ಬೈಕ್ ಸ್ಕೀಡ್ ಆಗಿ ಮಾಡಬೂಳ ಗ್ರಾಪಂ ಪಂಪ್ ಆಪರೇಟರ್ ಸಾವು


    ಕಲಬುರಗಿ : ತಾಲೂಕಿನ ಬೋಳೆವಾಡ ಗ್ರಾಮದ ಸೀಮಾಂತರದಲ್ಲಿ ಬೈಕ್ ಸ್ಕೀಡ್ ಆಗಿ ಸಂಭವಿಸಿದ ಅಪಘಾತದಲ್ಲಿ ಪಂಪ್ ಆಪರೇಟರ್ ಮೃತಪಟ್ಟಿದ್ದಾರೆ.
    ಮಲ್ಲಣ್ಣಗೌಡ ಮಾವನೂರ  ಮೃತಪಟ್ಟಿರುವ ವ್ಯಕ್ತಿ. ಮೂಲತಃ ಕಾಳಗಿ ತಾಲೂಕಿನ ವಚ್ಚಾ ಗ್ರಾಮದ ನಿವಾಸಿಯಾಗಿದ್ದರು. ಮಾಡಬೂಳ ಗ್ರಾಪಂದಲ್ಲಿ ಪಂಪ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದರು.
    ಬೋಳೆವಾಡ ಗ್ರಾಮದ ಸೀಮಾಂತರದಲ್ಲಿರುವ ಹೊಲಕ್ಕೆ ಹೋಗಿ ಬರುವುದಾಗಿ ಬೈಕ್ ತೆಗೆದುಕೊಂಡು ಹೋಗಿದ್ದರು. ಬರುವಾಗ ನಿಯಂತ್ರಣ ತಪ್ಪಿ ಬೈಕ್ ಮುಗುಚಿ ಅಪಘಾತ ಸಂಭವಿಸಿದೆ. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ನಗರದ  ಖಾಸಗಿ ಆಸ್ಪತ್ರೆಗೆ ದಾಖಲಿಸಿದಾಗ ಚಿಕಿತ್ಸೆ ಫಲಿಸದೆ ಸೋಮವಾರ ಕೊನೆಯುಸಿರೆಳೆದರು. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದರು. ಸಂಚಾರ ಠಾಣೆ-೨ರಲ್ಲಿ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts